ಮುಂಬೈ ಚಿಂಚಪೋಕ್ಲಿ ಗಣೇಶೋತ್ಸವಕ್ಕೆ ಅದ್ಧೂರಿ ಚಾಲನೆ: ಇರಲಿದೆ ದಕ್ಷಿಣ ಭಾರತದ ದೇವಸ್ಥಾನಗಳ ಥೀಮ್
ಮುಂಬೈ: ಪ್ರತಿ ವರ್ಷ ವಾಣಿಜ್ಯ ನಗರಿ ಮುಂಬೈನಲ್ಲಿ ಗಣೇಶೋತ್ಸವ ಸಮೀಪಿಸುತ್ತಿದ್ದಂತೆ ಇಲ್ಲಿನ ಎರಡನೇ ಅತ್ಯಂತ ಹಳೆಯ ಸಾರ್ವಜನಿಕ ಗಣಪತಿ ಮಂಡಳವಾದ ಐತಿಹಾಸಿಕ ಚಿಂಚಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳವು ಶನಿವಾರ ಅದ್ಧೂರಿ ಚಾಲನೆ ನೀಡಿತು. "ಚಿಂಚಪೋಕ್ಲಿ ಚಾ ಚಿಂತಾಮಣಿ"ಯ ಭವ್ಯ ಆಗಮನ ಸೋಹಳವನ್ನು (ಆಗಮನ ಸಮಾರಂಭ) ಅಚರಣೆ ಶುರು ಮಾಡಿದೆ. ಇದರೊಂದಿಗೆ ಲಾಲ್‌ಬಾಗ್-ಪರೇಲ್-ಗಿರಾಂಗಾಂವ್ ಪ್ರದೇಶದಾದ್ಯಂತ ಗಣೇಶ ಚೌತಿಯ ಸಂಭ್ರಮ ಕಳೆಗಟ್ಟಿದೆ.
ಇಂದಿನ ಗಣೇಶ ಹಬ್ಬದ ಚಾಲನಾ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆ ಭಕ್ತಾಧಿಗಳು ಹರಿದು ಬಂದಿವೆ. ನಗರದ ಹಳೆಯ ಜವಳಿ ಉದ್ಯಮದ ಹೃದಯಭಾಗದಂತಿರುವ ರಸ್ತೆಗಳು ಧೋಲ್-ತಾಷಾಗಳ ನಾದ ಹಾಗೂ "ಚಿಂಚಪೋಕ್ಲಿ ಚಿಂತಾಮಣಿ ಚಾ ವಿಜಯ ಅಸೋ" ಎಂಬ ಜಯಘೋಷ ಮೊಳಗಿದವು. ಈ ಮೂಲಕ ಮುಂಬೈ ಗಣಪತಿ 107ನೇ ವರ್ಷದ ಉತ್ಸವವು ಅದ್ಧೂರಿಯಾಗಿ ಆರಂಭಗೊಂಡಂತಾಗಿದೆ.

ಚಿಂಚಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳ ಪ್ರತಿವರ್ಷದಂತೆ ಈ ವರ್ಷವು (2026) ವಿಶಿಷ್ಟ ಥೀಮ್ ಹೊಂದಿದೆ. ದಕ್ಷಿಣ ಭಾರತದ ಐತಿಹಾಸಿಕ ಹಿನ್ನೆಲೆವುಳ್ಳ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಪೂರ್ತಿ ಪಡೆದಿದೆ. ಖ್ಯಾತ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಗರುಡ, ಕೀರ್ತಿಮುಖ, ಶಂಖ, ಚಕ್ರ ಮತ್ತು ಕರ್ಪೂರದ ತಿಲಕ ಸೇರಿ ಅನೇಕ ಧಾರ್ಮಿಕ ಚಿಹ್ನೆಗಳನ್ನು ನೀಡಲಾಗಿದೆ.
ಸ್ವರ್ಣಗಿರಿ ವಾಸ್ತುಶಿಲ್ಪ ಮತ್ತೊಂದು ವೈಶಿಷ್ಟ್ಯ
ಅದ್ಧೂರಿ ಚೌತಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಪೆಂಡಾಲ್, ಹೈದರಾಬಾದ್ ಮತ್ತು ಭುವನಗಿರಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ (ಸ್ವರ್ಣಗಿರಿ) ವಾಸ್ತುಶಿಲ್ಪದ ವೈಭವ ಮರು ಸೃಷ್ಟಿಸಲಾಗಿದೆ. ನೀವು ಇಲ್ಲಿ ಎತ್ತರದ ಗೋಪುರಗಳು, ಪವಿತ್ರ ದೀಪಸ್ತಂಭಗಳು ಸೇರಿದಂತೆ ಅನೇಕ ಚಿತ್ರಗಳನ್ನು ನೋಡಬಹುದು. ಇದು ನಿಮ್ಮನ್ನು ದೇಗುಲಕ್ಕೆ ಕರೆದೊಯ್ಯಲಿದೆ.
ಚಿಂಚಪೋಕ್ಲಿ ಉತ್ಸವ ಮಂಡಳದ ಅಧ್ಯಕ್ಷ ರಾಜೇಂದ್ರ ದಿಚೋಲ್ಕರ್ ಅವರು ಈ ಕುರಿತು ಮಾತನಾಡಿದ್ದಾರೆ. ಈ ವರ್ಷದ ಕಲಾತ್ಮಕ ರಚನೆಗಳನ್ನು ಅತ್ಯಂತ ಸೃಜನಶೀಲತೆಗೆ ಒತ್ತು ನೀಡಲಾಗಿದೆ. ಪ್ರತಿಭಾವಂತ ಕಲಾವಿದರು, ನಿಪುಣ ಕುಶಲಕರ್ಮಿಗಳು ಇಲ್ಲಿ ಹೆಚ್ಚು ಶ್ರಮಿಸಿದ್ದಾರೆ. ಆಧುನಿಕ ತಂತ್ರಜ್ಞಾನ ವನ್ನು ಇಲ್ಲಿ ಬಳಸಲಾಗಿದೆ. ಈ ಬಾರಿಯ ಥೀಮ್ ವಿಶೇಷ ಆಕರ್ಷಣೆಯಾಗಲಿದೆ. ಚಿಂತಾಮಣಿಯ ಆಶೀರ್ವಾದ ಪಡೆಯಲು ಆಗಮಿಸುವ ಭಕ್ತರಿಗೆ ಅಪಾರ ಸಂತಸ ಒದಗಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
1920ರಿಂದ ಬೆಳೆದು ಬಂದ ಚಿಂಚಪೋಕ್ಲಿ ಪರಂಪರೆ
ಮುಂಬೈನ ಚಿಂಚಪೋಕ್ಲಿಗೆ ತನ್ನದೇ ಆದ ಇತಿಹಾಸ ಇದೆ. ಇಲ್ಲಿ 1920 ರಲ್ಲಿ ಚಿಂಚಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳ ಸ್ಥಾಪನೆ ಆಯಿತು. ಅಲ್ಲಿಂದಲೂ ನಗರದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿ, ಪ್ರತಿ ವರ್ಷ ವಿಶೇಷ ರೀತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗಿರಾಂಗಾಂವ್‌ನ ಶ್ರಮಿಕ ವರ್ಗದ ಸಂಸ್ಕೃತಿಯಲ್ಲಿ ಬೇರೂರಿರುವ ಚಿಂತಾಮಣಿ ಗಣಪತಿಯು ಸಾಮುದಾಯಿಕ ಐಕ್ಯತೆ ಮತ್ತು ಭಕ್ತಿಯ ಸಂಕೇತವಾಗಿದೆ. ಇಲ್ಲಿನ ಗಣೇಶ ನೋಡಲು ದೇಶದ ನಾನಾ ಕಡೆಗಳಿಂದ ವಿನಾಯಕನ ಭಕ್ತರು ಆಗಮಿಸುತ್ತಾರೆ. ಸದ್ಯ ಗಣೇಶೋತ್ಸವ ಸಿದ್ಧತೆ ನಡೆದಿದ್ದು, ನೂರಾರು ಸ್ವಯಂಸೇವಕರು ತೊಡಗಿದ್ದಾರೆ.


Click it and Unblock the Notifications
