Bharat Ka Sur: ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಅತಿದೊಡ್ಡ ಯುಜಿಸಿ ಗೀತೆ 'ಭಾರತದ ಸ್ವರ' ಅನಾವರಣ!
ಬೆಂಗಳೂರು: ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಅತಿಹೆಚ್ಚು ಎಂಗೇಜ್ ಆಗಿರುವ ಜೋಶ್ ಆ್ಯಪ್ & ಆನ್‌ಲೈನ್ ಮ್ಯೂಸಿಕ್ ಎಜುಕೇಷನ್ ವೇದಿಕೆ ಆರ್ಟಿಯಮ್ ಅಕಾಡೆಮಿ ಸ್ವಾತಂತ್ರ್ಯೋತ್ಸವಕ್ಕೆ ಸರ್ಪ್ರೈಸ್ ನೀಡಿದೆ. ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶದ ಅತಿದೊಡ್ಡ ಯುಜಿಸಿ ಗೀತೆ ಅಂದರೆ ಬಳಕೆದಾರರೇ ಸೇರಿ ರಚಿಸಿರುವ ಕಂಟೆಂಟ್ ರಿಲೀಸ್ ಮಾಡಿದೆ.
ಗೀತೆಯು #BharatkaSur ಅಥವಾ #ಭಾರತದಸ್ವರ ಅಭಿಯಾನದಿಂದ ಶುರುವಾಗಿದ್ದು, ಈ ಮೂಲಕ ನಾಗರಿಕರು, ರಚನೆಕಾರರು, ಕಲಾವಿದರು ಸೇರಿ ಸಂಗೀತಗಾರರನ್ನು ಒಗ್ಗೂಡಿಸುವ ಜೊತೆಗೆ ದೇಶದ ಪಯಣವನ್ನು ಸಂಗೀತದ ಮೂಲಕ ತೆರೆಯ ಮೇಲೆ ತರಲಾಗಿದೆ. ಇನ್ನೂ ಈ ಅಭಿಯಾನ ಜೋಶ್‌ನಲ್ಲಿ 15 ದಿನಗಳ ಹ್ಯಾಶ್‌ಟ್ಯಾಗ್ ಸವಾಲನ್ನು ಒಳಗೊಂಡಿತ್ತು, ಹಾಗೇ ಅದ್ಧೂರಿ ಪ್ರತಿಕ್ರಿಯೆ ಕೂಡ ಪಡೆದಿದೆ. ಜೋಶ್ ಕಂಟೆಂಟ್ ಕ್ರಿಯೇಟರ್ಸ್, ಬಳಕೆದಾರರಿಂದ 18,000+ ವಿಡಿಯೋ ರಚನೆಯಾಗಿವೆ. ಈ 18,000+ ವಿಡಿಯೋ ಸಂಗ್ರಹದಲ್ಲಿ ಅತ್ಯುತ್ತಮ ಹಾಗೂ ಭಾರತೀಯ ಸಂಸ್ಕೃತಿ & ವೈವಿಧ್ಯತೆ ಪ್ರತಿನಿಧಿಸುವ ಕೆಲ ವಿಡಿಯೋ ಆಯ್ಕೆಮಾಡಿ ಗೀತೆಗೆ ಸಂಯೋಜನೆ ಮಾಡಲಾಗಿದೆ. ಹೀಗಾಗಿ #ಭಾರತದಸ್ವರ ಗೀತೆಯು ನಮ್ಮ ರಾಷ್ಟ್ರದ ಚೈತನ್ಯ ಮತ್ತು ಸಂಗೀತ ಪರಂಪರೆಯ ಪ್ರಬಲ ಸಂಕೇತವಾಗಿ ಮೂಡಿಬಂದಿದೆ.

ದೇಶದ ಸಂಸ್ಕೃತಿಯ ಸಂಗಮ
ಸ್ವಾತಂತ್ರ್ಯ ಸಂಭ್ರಮದಲ್ಲಿ ಅತಿದೊಡ್ಡ ಯುಜಿಸಿ ಗೀತೆಯನ್ನು ಆರ್ಟಿಯಮ್ ಅಕಾಡೆಮಿಯ ಶಿಕ್ಷಕರೇ ಹಾಡಿದ್ದಾರೆ. ಇದರ ಜೊತೆಗೆ ಅಕಾಡೆಮಿಯ ಮ್ಯೂಸಿಕ್ ಮಾಂತ್ರಿಕರು ಇದಕ್ಕಾಗಿ ಸಂಗೀತ ನೀಡಿದ್ದು, ಜೋಶ್ ಆ್ಯಪ್‌ನ ಪ್ರತಿಭಾನ್ವಿತರು ಈ ಕಾರ್ಯಕ್ಕೆ ಸಾಥ್ ನೀಡಿದ್ದರು. ಸ್ವಾತಂತ್ರ್ಯ ಸಂಭ್ರಮದ ಗೀತೆಯು ಭಾರತದ ಪರಂಪರೆಯನ್ನು ಪ್ರತಿನಿಧಿಸಿದೆ. ಒಟ್ಟಾರೆ 4 ನಿಮಿಷ 30 ಸೆಕೆಂಡು ಇರುವ ಹಾಡಿನಲ್ಲಿ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ ಹಾಗೂ ಮಲಯಾಳಂ, ಮರಾಠಿ, ಡೋಗ್ರಿ, ತಮಿಳು, ತೆಲುಗು, ಭೋಜ್‌ಪುರಿ, ರಾಜಸ್ಥಾನಿ ಮತ್ತು ಪಂಜಾಬಿ ಸೇರಿ ಒಟ್ಟು 12 ಭಾಷೆಗಳು ರಾರಾಜಿಸುತ್ತವೆ.
ಸ್ವಾತಂತ್ರ್ಯ ಸಂಭ್ರಮದಲ್ಲಿ ಮತ್ತಷ್ಟು ಸಂತಸ
'#BharatkaSur ಗೀತೆಯನ್ನ ನೀಡಲು ಆರ್ಟಿಯಮ್ ಅಕಾಡೆಮಿ ಜೊತೆ ಕೈಜೋಡಿಸಿದ್ದಕ್ಕೆ ಹೆಮ್ಮೆ ಇದೆ. ನಮ್ಮ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಸಂಗೀತಗಾರರ ಪ್ರತಿಭೆ & ಉತ್ಸಾಹ ಪ್ರದರ್ಶಿಸುವ ವಿಶಿಷ್ಟ ಗೀತೆ ಇದಾಗಿದೆ. ಹಾಗೇ ಭಾರತದಲ್ಲಿ ರಚಿಸಲಾದ ಅತಿದೊಡ್ಡ UGC ಅಂದರೆ ಬಳಕೆದಾರರೇ ಸೇರಿ ರಚಿಸಿರುವ ಗೀತೆ ಆಗಿರುವುದು ಹೆಮ್ಮೆಯ ವಿಚಾರ, ಈ ಮೂಲಕ ನಮ್ಮ ಬಳಕೆದಾರರ ಪ್ರತಿಕ್ರಿಯೆ ನೋಡಲು ನಾವು ಕಾತುರರಾಗಿದ್ದೆವು' ಎಂದು ಜೋಶ್ ಸಂಸ್ಥೆಯ ಕ್ರಿಯೇಟರ್ ಮತ್ತು ಕಂಟೆಂಟ್ ವಿಭಾಗದ ಮುಖ್ಯಸ್ಥರಾದ ಸುಂದೆರ್ ವೆಂಕಟರಾಮನ್ ಅವರು ಸಂತಸ ವ್ಯಕ್ತಪಡಿಸಿದರು. ಅಲ್ಲದೆ '#BharatkaSur ಅಭಿಯಾನ ಜೋಶ್ ಕಂಟೆಂಟ್ ಕ್ರಿಯೇಟರ್ಸ್ ಸಮುದಾಯವನ್ನು ಸಶಕ್ತಗೊಳಿಸಲು ಹಾಗೂ ಅವರಿಗೆ ಕಲಿಯಲು ಜತೆಗೆ ಬೆಳೆಯಲು ಅವಕಾಶ ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿ' ಎಂದಿದ್ದಾರೆ.
ಆರ್ಟಿಯಮ್ ಅಕಾಡೆಮಿಯ ಸಹ ಸಂಸ್ಥಾಪಕ ವಿವೇಕ್ ರೈಚಾ, 'ಆರ್ಟಿಯಮ್ ಅಕಾಡೆಮಿ ತಂತ್ರಜ್ಞಾನ ಮತ್ತು ಮಾಧ್ಯಮ ಪಾಲುದಾರಿಕೆ ಬಳಸಿಕೊಂಡು ಕಲಿಯುವವರು ಮತ್ತು ಸಂಗೀತ ಉತ್ಸಾಹಿಗಳನ್ನು ಒಗ್ಗೂಡಿಸಲು ಬಯಸುತ್ತೆ. ಜೋಶ್ ಜೊತೆ ಕೈಜೋಡಿಸಿ ಭಾರತದ ವಿವಿಧ ಭಾಗಗಳ ಪ್ರತಿಭೆಗಳನ್ನು #BharatkaSur ಅಭಿಯಾನದಲ್ಲಿ ಒಗ್ಗೂಡಿಸಿದ್ದು ನಮಗೆ ಖುಷಿ ನೀಡಿದೆ. ನಾವು ಒಟ್ಟಾಗಿ ಕಂಟೆಂಟ್ ಕ್ರಿಯೇಟರ್ಸ್ ಸಮುದಾಯವನ್ನು ಸಶಕ್ತಗೊಳಿಸಲು ಹಾಗೂ ಈ ಗೀತೆಯನ್ನು ಜನರ ಅಭಿಯಾನವಾಗಿ ಮಾಡಿದ್ದೇವೆ' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಜೋಶ್ ಅಪ್ಲಿಕೇಶನ್ ಜೊತೆಗೆ, ಡೈಲಿಹಂಟ್ ಪ್ಲೇಯರ್ ಮತ್ತು ಆರ್ಟಿಯಮ್ ಅಕಾಡೆಮಿಯ ಒರಿಜಿನಲ್ಸ್ ಚಾನಲ್‌ನಲ್ಲಿ ಈ ಗೀತೆಯು ಲಭ್ಯವಿದೆ.
ಅಭಿಯಾನದ ಪಾಲುದಾರರು ಇವರು
#ಭಾರತದಸ್ವರ ಅಭಿಯಾನಕ್ಕೆ ದೆಹಲಿ ಪೊಲೀಸರು & ವಿಶೇಷ ಮಲ್ಟಿಪ್ಲೆಕ್ಸ್ ಪಾಲುದಾರರಾಗಿ ಮೀರಾಜ್ ಸಿನಿಮಾಸ್ ಬೆಂಬಲ ನೀಡಿದ್ದಾರೆ. ಇವರ ಜೊತೆಗೆ ಪಾಲುದಾರರಾಗಿ: ಎಂಟಿವಿ, ಡೈಲಿಹಂಟ್, ಒನ್‌ಇಂಡಿಯಾ, ಟಿ-ಸೀರೀಸ್, ಸಂಗೀತ ಬಾಂಗ್ಲಾ, ಫಿಲ್ಮಿಬೀಟ್ ಹಾಗೂ ರೆಡ್‌ಎಫ್‌ಎಂ, ಇನ್‌ಕ್ಲ್ಯೂಸಿವ್ ದಿವ್ಯಾಂಗ್‌ಜನ್ ಆಂತ್ರೆಪ್ರೇನ್ಯೂರ್, ಆಸೋಸಿಯೇಟ್ಸ್, ಸುರಮ್ಯಾ ಲೈಫ್ ಫೌಂಡೇಶನ್, ದಮ್ರೂ, ಪಂಜಾಬಿ ಹಿಟ್ಸ್, ಟಬ್ಬರ್ ಹಿಟ್ಸ್, ಲಿವಿಂಗ್ ಇಂಡಿಯಾ ನ್ಯೂಸ್, ಐಬಿಸಿ & ಸಿನಿಯುಲಗಮ್, ಶಾರ್ಟ್‌ಫ್ಲಿಕ್ಸ್, ಡಿವೋ, ಬ್ರಾಡ್‌ವೇ, ಇನ್‌ಫ್ಲೂ, ಫ್ಯಾಕ್ಟ್ ಬುಲೆಟಿನ್ ನ್ಯೂಸ್, ಮ್ಯೂಸಿಕ್ ಎಂಪೈರ್, ವಿಟಿವಿ ಗುಜರಾತಿ, ದಿ ಪಾಲಿಟಿಕ್ಸ್, ಆನಂದ್ ಆಡಿಯೋ, ಮ್ಯಾಡ್, ವಿಎಂ, ಕ್ರೇಜ್ ಆಂತ್ರೆಪ್ರೇನ್ಯೂರ್ಸ್, ಅನಾವರಣ ಮೂವಿ
ಜೋಶ್ ಅಪ್ಲಿಕೇಶನ್ ಕುರಿತು
ಮೇಡ್ ಇನ್ ಇಂಡಿಯಾ ಶಾರ್ಟ್-ವಿಡಿಯೋ ಅಪ್ಲಿಕೇಷನ್ ಎಂಬ ಹೆಗ್ಗಳಿಕೆ 'ಜೋಶ್'ಗೆ ಇದೆ. ಆ್ಯಪ್ 2020ರ ಆಗಸ್ಟ್‌ನಲ್ಲಿ ವೆರ್ಸೆ ಇನ್ನೋವೇಶನ್ ಕೊಡುಗೆಯಾಗಿ ಶುರುವಾಗಿತ್ತು. ಭಾರತದ 1000+ ಅತ್ಯುತ್ತಮ ಕ್ರಿಯೇಟರ್‌ಗಳ ಸಂಗಮವಾಗಿ ಜೋಶ್ ಗುರುತಿಸಿಕೊಂಡಿದೆ, ಕಂಟೆಂಟ್ ಕ್ರಿಯೇಟರ್‌ಗಳ 20000 ಪ್ರಬಲ ನಿರ್ವಹಣಾ ಸಮುದಾಯವು ಆಗಿದ್ದು, 10 ಅತಿದೊಡ್ಡ ಮ್ಯೂಸಿಕ್ ಲೇಬಲ್, 15+ ಮಿಲಿಯನ್ ಯುಜಿಸಿ ಕ್ರಿಯೇಟರ್ಸ್, ಅತ್ಯುತ್ತಮ-ದರ್ಜೆಯ ಕಂಟೆಂಟ್ ಕ್ರಿಯೇಟಿಂಗ್ ಟೂಲ್ಸ್, ಹಾಟೆಸ್ಟ್ ಎಂಟರ್ಟೈನ್ಮೆಂಟ್ ಫಾರ್ಮ್ಯಾಟ್, ಜೋಶ್ ಆ್ಯಪ್ ಅನ್ನು ಭಾರತದ ಪ್ರಮುಖ ಕಿರು-ವೀಡಿಯೋ ಅಪ್ಲಿಕೇಶನ್ ಎಂದು ಪ್ಲೇ ಸ್ಟೋರ್‌ನಲ್ಲಿ ರೇಟ್ ಮಾಡಲಾಗಿದ್ದು 100 ಮಿಲಿಯನ್+ ಡೌನ್‌ಲೋಡ್ ಗುರಿ ತಲುಪಿದೆ ಜೋಶ್ ಆ್ಯಪ್, ಹಾಗೇ ಜೋಶ್ ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಅತಿಹೆಚ್ಚು ಜನ ಬಳಸುತ್ತಿರುವ ಆ್ಯಪ್ ಎಂದು ಗುರುಸಿಕೊಂಡಿದ್ದು 153 ಮಿಲಿಯನ್ MAU ಅಂದರೆ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹಾಗೇ 74 ಮಿಲಿಯನ್ DAU ಅಂದರೆ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರ ಜೊತೆಗೆ 23 ನಿಮಿಷಗಳ ಸರಾಸರಿ ಸಮಯವನ್ನು ಬಳಕೆದಾರರು ಜೋಶ್‌ನಲ್ಲಿ ಸ್ಪೆಂಡ್ ಮಾಡಿದ್ದಾರೆ.
ಆರ್ಟಿಯಮ್ ಅಕಾಡೆಮಿ ಕುರಿತು
ಇನ್ನು ಆರ್ಟಿಯಮ್ ಅಕಾಡೆಮಿ ಬಗ್ಗೆ ಹೇಳುವುದಾದರೆ, ಆರ್ಟಿಯಮ್ ಭಾರತದ ಪ್ರಮುಖ ಸಂಗೀತ ಕಲಿಕೆ ಮತ್ತು ಸಮುದಾಯ ವೇದಿಕೆಯಾಗಿದೆ. ಆರ್ಟಿಯಮ್ ಭಾರತದ ಅತ್ಯುತ್ತಮ ಸಂಗೀತಗಾರರಿಂದ ವಿನ್ಯಾಸಗೊಂಡಿದ್ದು & ಪ್ರಮಾಣೀಕರಿಸಿದ ಕೋರ್ಸ್‌ಗಳನ್ನು ಒದಗಿಸುತ್ತದೆ. ಆನ್‌ಲೈನ್ ತರಗತಿಗಳಲ್ಲಿ ಆಯ್ಕೆ ಮಾಡಿದ ಅತ್ಯುತ್ತಮ ಶಿಕ್ಷಕರಿಂದ 1:1 ಕಲಿಸಲಾಗುತ್ತದೆ. ವಿಶಾಲ ಲೈಬ್ರರಿಯೊಂದಿಗೆ, ಆರ್ಟಿಯಮ್ ಗಾಯನ & ವಾದ್ಯಗಳೆರಡಕ್ಕೂ ಕಾರ್ಯಕ್ಷಮತೆ ಆಧಾರಿತ ಕೋರ್ಸ್ ನೀಡಲಾಗುತ್ತಿದೆ. ಸಂಗೀತ ಕ್ಷೇತ್ರದ ದಂತಕಥೆಗಳಾದ ಸೋನು ನಿಗಮ್, ಕೆ.ಎಸ್.ಚಿತ್ರ, ಶುಭಾ ಮುದ್ಗಲ್, ಅರುಣಾ ಸಾಯಿರಾಂ, ಲೂಯಿಸ್ ಬ್ಯಾಂಕ್ಸ್, ರಾಜು ಸಿಂಗ್, ಗಿನೋ ಬ್ಯಾಂಕ್ಸ್ ನಿರ್ವಹಿಸಿದ್ದು, ಅನೀಶ್ ಪ್ರಧಾನ್ ಮತ್ತು ಅನಂತ್ ವೈದ್ಯನಾಥನ್, ಇವರು ಆರ್ಟಿಯಮ್ಸ್ ಅಕಾಡೆಮಿಕ್ ಬೋರ್ಡ್ ರಚಿಸಿದ್ದಾರೆ.
ಆರ್ಟಿಯಮ್ ಅಕಾಡೆಮಿ ತನ್ನದೇ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಹೊಂದಿದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಂದರೆ AI ಶಕ್ತಗೊಳಿಸಿದ ಸ್ಟುಡಿಯೋವನ್ನು ಕಲಿಕೆಯ ಪರಿಕರಗಳೊಂದಿಗೆ ಅಳವಡಿಸಲಾಗಿದೆ. ಆರ್ಟಿಯಮ್ ಸಂಸ್ಥೆಯು ನೂರಾರು ಪ್ರಮಾಣೀಕೃತ ಶಿಕ್ಷಕರನ್ನು ಹೊಂದಿದ್ದು ಮತ್ತು ಜಗತ್ತಿನಾದ್ಯಂತ ಸಾವಿರಾರು ಸಂಗೀತದ ವಿದ್ಯಾರ್ಥಿಗಳು ಈ ಆರ್ಟಿಯಮ್ ಅಕಾಡೆಮಿ ಮೂಲಕ ಕಲಿಯುತ್ತಿದ್ದಾರೆ. ಅಲ್ಲದೆ ಆರ್ಟಿಯಮ್‌ನ ಪ್ರತಿಭಾ ವೇದಿಕೆ ಆರ್ಟಿಯಮ್ ಒರಿಜಿನಲ್ಸ್ ಮೂಲಕ ಸಂಗೀತ ಬಿಡುಗಡೆ ಮಾಡಬಹುದು, ಇದುವರೆಗೆ 15ಕ್ಕೂ ಹೆಚ್ಚು ಹಾಡು ರಿಲೀಸ್ ಮಾಡಲಾಗಿದ್ದು, ಈ ಹಾಡುಗಳಿಗೆ ಯುಟ್ಯೂಬ್‌ನಲ್ಲಿ ಲಕ್ಷಾಂತರ ವೀವ್ಸ್ ಕೂಡ ಬಂದಿದೆ.












Click it and Unblock the Notifications