ಇನ್‌ಸ್ಟಾ ಪರ್ಸನಲ್ ಲೋನ್ ಮೂಲಕ ಸಾಲ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿದ ಬಜಾಜ್ ಫೈನಾನ್ಸ್
ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಮಾನದಂಡವನ್ನು ರೂಪಿಸುವುದಕ್ಕಾಗಿ ಇನ್‌ಸ್ಟಾ ಪರ್ಸನಲ್ ಲೋನ್ ಮೂಲಕ ಸರಾಗ ಸಾಲ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ ಹೊಂದಿದೆ.
30 ನಿಮಿಷಗಳಿಂದ 4 ಗಂಟೆಗಳಷ್ಟು ಕಡಿಮೆ ಸಮಯದಲ್ಲಿ ಬಟವಾಡೆ ಮಾಡುವ ಮೂಲಕ ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ತನ್ನನ್ನು ತಾನು ವಿಶಿಷ್ಟವೆಂದು ಗುರುತಿಸಿಕೊಂಡಿದೆ. ಈ ಹೊಸ ಸಾಲ ಸೌಲಭ್ಯದಲ್ಲಿ, ಗ್ರಾಹಕರು ಆದಾಯ ಕಾಗದ ಪತ್ರ ಇಲ್ಲದೇ 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ. ಪ್ರಸ್ತುತ ಗ್ರಾಹಕರು ಮೊದಲೇ ಅನುಮೋದನೆ ಪಡೆದ ಸಾಲ ಕೊಡುಗೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಬಳಸಿ ವೈಯಕ್ತಿಕಗೊಳಿಸಿದ ಸಾಲ ಸೌಲಭ್ಯವನ್ನು ಸರಾಗವಾಗಿ ಪಡೆಯಬಹುದು. ಇದರ ಜೊತೆಗೆ, ಸಾಲಗಾರರು 6 ರಿಂದ 60 ತಿಂಗಳುಗಳರೆಗೆ ಅನುಕೂಲಕರ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಅನುಕೂಲಕರ ಮರುಪಾವತಿ ನಿರ್ವಹಣೆಯನ್ನು ಒದಗಿಸುತ್ತದೆ. ಇನ್ನು ಬೇಗ ಹಣ ಪಡೆಯಬೇಕು ಎಂದು ಬಯಸುವ ಗ್ರಾಹಕರಿಗೆ ಇನ್‌ಸ್ಟಾ ಪರ್ಸನಲ್ ಲೋನ್ ಅತ್ಯುತ್ತಮ ಸೌಲಭ್ಯವಾಗಿದೆ.
ಗಮನಿಸಬೇಕಾದ ಪ್ರಮುಖ ಅಂಶಗಳು
ಕಿರಿಕಿರಿ ರಹಿತ ಅರ್ಜಿ ಸೌಲಭ್ಯ: ಇನ್‌ಸ್ಟಾ ಪರ್ಸನಲ್ ಲೋನ್‌ನಲ್ಲಿ ಅರ್ಹ ಸಾಲ ಮೊತ್ತವನ್ನು ನಿರ್ಧಾರ ಮಾಡಲು ದೀರ್ಘ ಅರ್ಜಿ ಪ್ರಕ್ರಿಯೆಯನ್ನು ಅನುಸರಿಸಬೇಕಿಲ್ಲ. ತಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಒದಗಿಸುವ ಮೂಲಕ ತಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಪ್ರಸ್ತುತ ಮತ್ತು ಹೊಸ ಗ್ರಾಹಕರು ಸುಲಭವಾಗಿ ಪರಿಶೀಲಿಸಬಹುದು. ತಮ್ಮ ಮನೆಯಿಂದ ಹೊರಗೆ ಬರದೇ ಕೆಲವೇ ನಿಮಿಷಗಳಲ್ಲಿ ಫಂಡ್‌ಗಳನ್ನು ಸುಲಭವಾಗಿ ಗ್ರಾಹಕರು ಪಡೆಯಬಹುದಾಗಿದೆ.
ತ್ವರಿತ ಪ್ರಕ್ರಿಯೆ: ಇನ್‌ಸ್ಟಾ ಪರ್ಸನಲ್ ಲೋನ್‌ಗಳು ತ್ವರಿತವಾಗಿ ಪ್ರಕ್ರಿಯೆಗೊಳಿಸುವುದು ಮತ್ತು ಹಣವನ್ನು ಬಟವಾಡೆ ಮಾಡುವಲ್ಲಿ ಪರಿಣಿತಿ ಹೊಂದಿದೆ. ಮೊದಲೇ ಅನುಮೋದಿಸಿದ ಆಫರ್ ಅನ್ನು ಒಪ್ಪಿಕೊಳ್ಳುವುದು ಅಥವಾ ತಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಮೊತ್ತವನ್ನು ಆಯ್ಕೆ ಮಾಡಿಕೊಳ್ಳುವುದರ ಅನುಕೂಲವನ್ನು ಗ್ರಾಹಕರು ಹೊಂದಿದ್ದಾರೆ.
ಗ್ರಾಹಕರ ಸಾಲ ಅರ್ಹತೆಯ ಪರಿಶೀಲನೆಯನ್ನು ಮೊದಲೇ ಮಾಡಿರುವುದರಿಂದ ಪ್ರಕ್ರಿಯೆಯನ್ನು ಗಮನಾರ್ಹವಾಗಿ ವೇಗಗೊಳಿಸಲಾಗುತ್ತದೆ. ಆಯ್ದ ಗ್ರಾಹಕರು 30 ನಿಮಿಷಗಳಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.
ಆದಾಯ ಕಾಗದಪತ್ರವಿಲ್ಲ ಮತ್ತು ಗೌಪ್ಯ ಶುಲ್ಕವಿಲ್ಲ
ಬಜಾಜ್ ಫೈನಾನ್ಸ್‌ನ ಆಯ್ದ ಪ್ರಸ್ತುತ ಗ್ರಾಹಕರು ಯಾವುದೇ ಕಾಗದಪತ್ರ ಸಲ್ಲಿಸದೇ, ಅಂದರೆ ಆದಾಯ ದಾಖಲೆ, ಬ್ಯಾಂಕ್ ಖಾತೆ ವಿವರಗಳು ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸದೇ ಸಾಲ ಪಡೆಯಬಹುದು. ಸಾಲ ಪ್ರಕ್ರಿಯೆ ಪಾರದರ್ಶಕವಾಗಿದೆ. ಅನ್ವಯಿಸುವ ಎಲ್ಲ ಶುಲ್ಕಗಳನ್ನು ಸಾಲ ಕಾಗದ ಪತ್ರದಲ್ಲಿ ಮತ್ತು ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಇದರಲ್ಲಿ ಗೌಪ್ಯ ಶುಲ್ಕಗಳಿಲ್ಲ. ಹೀಗಾಗಿ, ಪಾರದರ್ಶಕ ಸಾಲ ಅನುಭವ ಸಿಗುತ್ತದೆ.
ಫ್ಲೆಕ್ಸಿಬಲ್ ಸಾಲ ಅವಧಿಗಳು: ಇನ್‌ಸ್ಟಾ ಪರ್ಸನಲ್ ಲೋನ್‌ಗಳು ಗ್ರಾಹಕರಿಗೆ ಅನುಕೂಲಕರ ಮರುಪಾವತಿ ಅವಧಿಗಳ ಅನುಕೂಲವನ್ನು ಒದಗಿಸುತ್ತದೆ. 6 ರಿಂದ 60 ತಿಂಗಳುಗಳ ಅವಧಿಯಲ್ಲಿ ತಮ್ಮ ಸಾಲ ಮರುಪಾವತಿ ಮಾಡುವ ಆಯ್ಕೆಯನ್ನು ಗ್ರಾಹಕರು ಮಾಡಬಹುದು. ಇದರಿಂದಾಗಿ, ತಮ್ಮ ಹಣಕಾಸು ಸಾಮರ್ಥ್ಯಗಳಿಗೆ ಚೆನ್ನಾಗಿ ಹೊಂದುವ ಅವಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಅಷ್ಟೇ ಅಲ್ಲ, ವಿವಿಧ ಅವಧಿ ಮತ್ತು ಸಾಲ ಮೊತ್ತಕ್ಕೆ ಸಮಾನ ಮಾಸಿಕ ಕಂತುಗಳನ್ನು ನಿರ್ಧಾರ ಮಾಡಲು ಇನ್‌ಸ್ಟಾ ಪರ್ಸನಲ್ ಲೋನ್ ಇಎಂಐ ಕ್ಯಾಲ್ಯೂಕ್ಲೇಟರ್ ಅನ್ನು ಗ್ರಾಹಕರು ಬಳಸಿಕೊಳ್ಳಬಹುದು.
ಇನ್‌ಸ್ಟಾ ಪರ್ಸನಲ್ ಲೋನ್ ಪಡೆಯುವುದು ಸರಳ ಮತ್ತು ನೇರ ಪ್ರಕ್ರಿಯೆಯಾಗಿದೆ. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನ ಇನ್‌ಸ್ಟಾ ಪರ್ಸನಲ್ ಲೋನ್ ಪುಟಕ್ಕೆ ಗ್ರಾಹಕರು ಹೋಗಿ, "ಆಫರ್ ನೋಡಿ" ಮೇಲೆ ಕ್ಲಿಕ್ ಮಾಡಬಹುದು. ಗ್ರಾಹಕರು ತಮ್ಮ 10 ಸಂಖ್ಯೆಯ ಮೊಬೈಲ್ ನಂಬರ್ ಮತ್ತು ಒಟಿಪಿಯನ್ನು ನಮೂದಿಸಿದಾಗ ಸ್ಕ್ರೀನ್ ಮೇಲೆ ಮೊದಲೇ ನಿಯೋಜಿಸಿದ ಸಾಲ ಮಿತಿ ಡಿಸ್‌ಪ್ಲೇ ಆಗುತ್ತದೆ. ಸಾಲ ಮೊತ್ತ ಮತ್ತು ಅವಧಿ ಆಯ್ಕೆಗಳನ್ನು ಹೊಂದಿಸುವ ಮೂಲಕ ತಮ್ಮ ಅಗತ್ಯಕ್ಕೆ ಚೆನ್ನಾಗಿ ಹೊಂದುವ ಸಾಲ ಅವಧಿಯನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.
ನಿಮ್ಮ ವೆಚ್ಚಗಳನ್ನು ಪೂರೈಸುವುದಕ್ಕಾಗಿ ತಕ್ಷಣ ನಿಮಗೆ ಹಣ ಅಗತ್ಯವಿದ್ದರೆ ತ್ವರಿತ ಹಣಕಾಸು ಬೆಂಬಲಕ್ಕೆ ಒಂದು ಉತ್ತಮ ಆಯ್ಕೆಯಾಗಿ ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಕೆಲಸ ಮಾಡುತ್ತದೆ. ತಕ್ಷಣವೇ 10 ಲಕ್ಷದವರೆಗೆ ಸಾಲದ ಮೊತ್ತವನ್ನು ಬಟವಾಡೆ ಮಾಡುವ ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್, ತ್ವರಿತ ಮತ್ತು ವಿಶ್ವಾಸಾರ್ಹ ಹಣಕಾಸು ಸೌಲಭ್ಯಗಳನ್ನು ಬಯಸುವ ವ್ಯಕ್ತಿಗಳಿಗೆ ಸುಲಭ ಆಯ್ಕೆಯಾಗಿರುತ್ತದೆ.











Click it and Unblock the Notifications