Gautam Adani: ಭಕ್ತಿಯಲ್ಲಿ ಮಿಂದೆದ್ದ ಗೌತಮ್ ಅದಾನಿ ಕುಟುಂಬ; ಮಹುಡಿ ಜೈನ ದೇಗುಲದಲ್ಲಿ ವಿಶೇಷ ಪ್ರಾರ್ಥನೆ
ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ಮಹುಡಿ ಜೈನ ದೇವಾಲಯಕ್ಕೆ ಖ್ಯಾತ ಉದ್ಯಮಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಅವರ ಇಡೀ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪರ್ಯುಷನ್ ಮಹಾಪರ್ವದ ಹಿನ್ನೆಲೆಯಲ್ಲಿ ಈ ಧಾರ್ಮಿಕ ಯಾತ್ರೆ ನಡೆದ ಸಂದರ್ಭದಲ್ಲಿ ಪತ್ನಿ ಡಾ. ಪ್ರೀತಿ ಅದಾನಿ, ಹಿರಿಯ ಪುತ್ರ ಕರಣ್ ಅದಾನಿ ಹಾಗೂ ಸೊಸೆ ಪರಿಧಿ ಅದಾನಿ ಅವರೆಲ್ಲ ದೇವಸ್ಥಾನದಲ್ಲಿ ವೀಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಇದೇ ವರ್ಷ ಸೆಪ್ಟೆಂಬರ್ 8 ರಿಂದ 15 ರವರೆಗೆ ಶ್ವೇತಾಂಬರ ಜೈನ ಪರಂಪರೆಯ ಅತ್ಯಂತ ಪವಿತ್ರ ಹಬ್ಬವಾದ ಪರ್ಯುಷನ್ ಮಹಾಪರ್ವವು ನಡೆಯಲಿದೆ. ಈ ವೇಳೆ ಉಪವಾಸ, ಜಾಗರಣೆ ಇನ್ನಿತರ ಮಹತ್ವದ ಆಚರಣೆಗಳಿಗೆ ಒತ್ತು ನೀಡಲಾಗುತ್ತದೆ. ಸೆಪ್ಟೆಂಬರ್ 15 ರಂದು ಅತ್ಯಂತ ಪ್ರಮುಖ ದಿನವಾದ ಸಂವತ್ಸರಿಯಂದು ಪರಸ್ಪರ ಕ್ಷಮೆ ಯಾಚಿಸುವ ಮೂಲಕ ಮನಸ್ಸಿನ ಕ್ಲೇಶಗಳನ್ನು ಮರೆತು ಹೊಸ ಭರವಸೆಯೊಂದಿಗೆ ಈ ಆಚರಣೆ ಕೊನೆಗೊಳಿಸಲಾಗುತ್ತದೆ.

ಸೇವೆಗೆ ಆದ್ಯತೆ, ಧಾರ್ಮಿಕ ಹಿನ್ನೆಲೆ ಏನಿದೆ
"ಸೇವೆಯೇ ಸಾಧನೆ" ಎಂದು ನಂಬಿರುವ ಗೌತಮ್ ಅದಾನಿ ಅವರ ಜೀವನದ ತತ್ವಾದರ್ಶಕ್ಕೆ ಅನುಸಾರವಾಗಿ ಅದಾನಿ ಫೌಂಡೇಶನ್ ಮೂಲಕ ಭಾರತದಲ್ಲಿ ವಿವಿಧ ವಲಯಗಳ ಅಭಿವೃದ್ಧಿಗೆ ಸದಾ ಮುಂದಿರುತ್ತದೆ. ಈಗಲೇ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಇಂದಿನ ಅವರ ಧಾರ್ಮಿಕ ಭೇಟಿಯು ಮುಂಬರುವ ಹಬ್ಬದ ಧ್ಯೇಯಗಳಾದ ಸೇವೆ ಮತ್ತು ಕರುಣೆಯ ಪ್ರತೀಕವಾಗಿವೆ. ಐತಿಹಾಸಿಕವಾಗಿ ಮಹುಡಿ ಜೈನ ಧಾಮವು ಭಕ್ತರ ರಕ್ಷಣಾ ದೇವತೆಯಾದ ಶ್ರೀ ಘಂಟಾಕರ್ಣ ಮಹಾವೀರನ ಪ್ರಸಿದ್ಧ ಸನ್ನಿಧಿಯಾಗಿದೆ. ಹೀಗಾಗಿ ಅದಾನಿ ಕುಟುಂಬಸ್ಥರು ಶುಭ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ಪುನೀತರಾಗಿದ್ದಾರೆ.
ಕಾನೂನು ಪ್ರಕರಣಗಳು ವಜಾ
ಈ ಭೇಟಿಯ ಮತ್ತೊಂದು ವಿಶೇಷತೆ ನೋಡುವುದಾದರೆ ಕಳೆದ ಆಗಸ್ಟ್ 10 ರಂದು ಅಮೆರಿಕದ ನ್ಯಾಯಾಂಗ ಇಲಾಖೆಯು ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿದ್ದ ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಂಡಿದೆ. ಎದುರಾಗಿದ್ದ ಕಾನೂನು ಸಮಸ್ಯೆ ನಿವಾರಣೆಯಾದ ಬೆನ್ನಲ್ಲೇ ಈ ಧಾರ್ಮಿಕ ಕ್ಷೇತ್ರದ ಭೇಟಿ ಹೆಚ್ಚಿನ ವಿಶೇಷತೆ ಪಡೆಯುತ್ತದೆ.
2026ರ ಆರಂಭದಲ್ಲಿ ಅಕ್ಷಯ ತೃತೀಯ ದಿನದಂದು ಉತ್ತರ ಗುಜರಾತ್‌ನ ತರಂಗಾ ಬೆಟ್ಟದ ಶ್ರೀ ಅಜಿತನಾಥ ಭಗವಾನ್ ಜೈನ ದೇವಾಲಯಕ್ಕೂ ಈ ದಂಪತಿ ಭೇಟಿ ನೀಡಿತ್ತು, ಆಗಲೂ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿತ್ತು.
ದೇವರು ಕಷ್ಟಕಾಲದಲ್ಲಿ ಧೈರ್ಯ ತುಂಬುತ್ತಾನೆ ಎಂದು ಅದಾನಿ ಕುಟುಂಬ ನಂಬುತ್ತದೆ. ಅದರಲ್ಲೂ ಪ್ರಸಿದ್ಧ ಜೈನ ತೀರ್ಥಕ್ಷೇತ್ರದಲ್ಲಿ ಅದಾನಿ ಕುಟುಂಬವು ಒಟ್ಟಾಗಿ ಪ್ರಾರ್ಥಿಸಿದೆ. ಸಮಾಜಿಕ ಸೇವೆ, ಆಧ್ಯಾತ್ಮಿಕ ನಂಬಿಕೆ, ನಮ್ರತೆ ಹಾಗೂ ಸಮಾಜ ಕಲ್ಯಾಣದ ದೃಷ್ಟಿಕೋನವುಳ್ಳ ಅದಾನಿ ಸಮೂಹ ದೇಶದ ಯೋಜನೆಗಳ ಮೇಲೆ ಸಾಕಷ್ಟು ಹೂಡಿಕೆ ಮಾಡಿದೆ. ಉದ್ಯಮದ, ದೇಶದ ಭವಿಷ್ಯದ ಮೇಲೆ ನಂಬಿಕೆ ಇರುವ ಅದಾನಿಯು ಕುಟುಂಬಕ್ಕೆ ಇಂದಿನ ದೇವಸ್ಥಾನ ಭೇಟಿಯು ಅವರ ಕರುಣೆ ಮತ್ತು ಧರ್ಮದ ಹಾದಿಗೆ ಹೊಸ ಚೈತನ್ಯ ಕೊಟ್ಟಿದೆ.


Click it and Unblock the Notifications
