ಎಫ್‌ಡಿ ದರಗಳನ್ನು ಹೆಚ್ಚಿಸಿದ ಬಜಾಜ್ ಫೈನಾನ್ಸ್: ಇಂದೇ ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಳ್ಳಿ
ಭಾರತದ ಹಣಕಾಸು ವಲಯದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಬಜಾಜ್ ಫೈನಾನ್ಸ್ ತನ್ನ ಫಿಕ್ಸೆಡ್ ಡೆಪಾಸಿಟ್‌ಗಳನ್ನು (FD) ಹೂಡಿಕೆದಾರರಿಗೆ ಇನ್ನಷ್ಟು ಆಕರ್ಷಕವಾಗಿಸಿದ್ದು, ಬಡ್ಡಿ ದರಗಳನ್ನು ಹೆಚ್ಚಿಸಿದೆ. ನಿಮ್ಮ ಉಳಿತಾಯದ ಮೇಲೆ ಸುರಕ್ಷಿತ ಮತ್ತು ಊಹಿಸಬಹುದಾದ ರೀತಿಯಲ್ಲಿ ರಿಟರ್ನ್ಸ್ ಪಡೆಯಬೇಕು ಎಂದು ಬಯಸಿದರೆ, ಬಜಾಜ್ ಫೈನಾನ್ಸ್ FD ಅನ್ನು ಪರಿಗಣಿಸಬಹುದು.
ಫಿಕ್ಸೆಡ್ ಡೆಪಾಸಿಟ್‌ಗಳು ಎಂದರೇನು?
ಫಿಕ್ಸೆಡ್ ಡೆಪಾಸಿಟ್‌ಗಳು ನಿಮ್ಮ ಉಳಿತಾಯದ ಮೇಳೆ ಬಡ್ಡಿ ಪಡೆಯುವುದಕ್ಕೆ ಸುರಕ್ಷಿತ ಮತ್ತು ಸರಳವಾದ ವಿಧಾನವನ್ನು ಒದಗಿಸುತ್ತವೆ. ಕೆಲವು ದಿನಗಳಿಂದ ಹಲವು ವರ್ಷಗಳವರೆಗೆ ಒಂದು ನಿರ್ದಿಷ್ಟ ಅವಧಿಗೆ ಒಂದು ಹಣಕಾಸು ಸಂಸ್ಥೆಯಲ್ಲಿ ಏಕ ಗಂಟಿನ ಮೊತ್ತವನ್ನು ಹೂಡಿಕೆ ಮಾಡುತ್ತೀರಿ. ಇದಕ್ಕೆ ಪ್ರತಿಯಾಗಿ, ಡೆಪಾಸಿಟ್ ಅವಧಿಗೆ ಫಿಕ್ಸೆಡ್ ಇಂಟರೆಸ್ಟ್ ರೇಟ್ ಅನ್ನು ಕೊಡುವ ಬದ್ಧತೆಯನ್ನು ಸಂಸ್ಥೆ ನಿಮಗೆ ನೀಡುತ್ತದೆ.

ಬಜಾಜ್ ಫೈನಾನ್ಸ್‌ನ FD ರೇಟ್ ಹೆಚ್ಚಳ
15-60 ತಿಂಗಳುಗಳ ಅವಧಿಯ FD ಬಡ್ಡಿ ದರವನ್ನು ಬಜಾಜ್ ಫೈನಾನ್ಸ್ ಹೆಚ್ಚಿಸಿದ್ದು, ವಾರ್ಷಿಕ 0.60% ವರೆಗೆ ಏರಿಕೆ ಮಾಡಲಾಗಿದೆ. ಇದರಿಂದ, ಹೆಚ್ಚು ರಿಟರ್ನ್ಸ್ ಬೇಕು ಎಂದು ಬಯಸುವ ಹೂಡಿಕೆದಾರರಿಗೆ FD ಇನ್ನಷ್ಟು ಆಕರ್ಷಕವಾಗಿರುತ್ತದೆ.
ಬಜಾಜ್ ಫೈನಾನ್ಸ್ FD ಪ್ರಮುಖ ವೈಶಿಷ್ಟ್ಯಗಳು
1. ಅಧಿಕ ಬಡ್ಡಿ ದರಗಳು: ಭಾರತದಲ್ಲಿ ಬಜಾಜ್ ಫೈನಾನ್ಸ್ ಅತ್ಯಧಿಕ FD ದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು (60 ವರ್ಷಗಳಿಗಿಂತ ಹೆಚ್ಚಿನವರು) ವಾರ್ಷಿಕ 8.85% ವರೆಗೆ ಬಡ್ಡಿ ಪಡೆಯಬಹುದು. 60 ವರ್ಷದೊಳಗಿನವರು ವಾರ್ಷಿಕ 8.60% ವರೆಗೆ ಬಡ್ಡಿ ಪಡೆಯಬಹುದು.
2. ಡಿಜಿಟಲ್ ಸೌಲಭ್ಯ: ಉದ್ದನೆಯ ಫಾರ್ಮ್‌ಗಳನ್ನು ಭರ್ತಿ ಮಾಡುವುದು ಬೇಡ ಅಥವಾ ಸರದಿಯಲ್ಲಿ ಕಾಯುವ ಕೆಲಸವೂ ಇಲ್ಲ. ಆನ್‌ಲೈನ್ ಅಪ್ಲಿಕೇಶನ್ ಪ್ರೋಸೆಸ್ ಆಕರ್ಷಕವಾಗಿದೆ ಮತ್ತು ನಿಮ್ಮ ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಭರ್ತಿ ಮಾಡಬಹುದು. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್ ಅಥವಾ ಆಪ್ ಮೂಲಕ ನಿಮ್ಮ ಬಜಾಜ್ ಫೈನಾನ್ಸ್ FD ಬುಕ್ ಮಾಡಬಹುದು ಮತ್ತು ನಿರ್ವಹಣೆ ಮಾಡಬಹುದು.
3. ಅನುಕೂಲಕರ ಅವಧಿ: ನಿಮ್ಮ ಹಣಕಾಸು ಅಗತ್ಯಗಳು ವಿಶಿಷ್ಟವಾಗಿರುತ್ತವೆ ಎಂದು ಬಜಾಜ್ ಫೈನಾನ್ಸ್ ಅರ್ಥ ಮಾಡಿಕೊಂಡಿದೆ. ಇದೇ ಕಾರಣಕ್ಕೆ 12 ತಿಂಗಳುಗಳಿಂದ 60 ತಿಂಗಳುಗಳವರೆಗಿನ ಅವಧಿಗೆ FD ಮಾಡಬಹುದು. ಈ ಫ್ಲೆಕ್ಸಿಬಿಲಿಟಿಯಿಂದಾಗಿ ನೀವು:
a. ಅಲ್ಪಾವಧಿ ಗುರಿಗಳನ್ನು ಸಾಧಿಸಬಹುದು: ನೀವು ಡೌನ್ ಪೇಮೆಂಟ್, ರಜೆ ಅಥವಾ ತುರ್ತು ನಿಧಿಗೆ ಉಳಿತಾಯ ಮಾಡುತ್ತಿದ್ದೀರಿ ಎಂದಾದರೆ, ಸ್ಪರ್ಧಾತ್ಮಕ ಬಡ್ಡಿ ದರವನ್ನು ಗಳಿಸುತ್ತಲೇ ನಿಮಗೆ ಬೇಗ ಹಣ ಕೈಗೆ ಸಿಗುವ ಅನುಕೂಲವನ್ನು ಅಲ್ಪಾವಧಿ ಗುರಿಗಳು ಒದಗಿಸುತ್ತವೆ.
b. ದೀರ್ಘಾವಧಿ ಪ್ಲಾನ್: ನಿವೃತ್ತಿ ನಿಧಿಯನ್ನು ರೂಪಿಸುವುದು ಅಥವಾ ಭವಿಷ್ಯದ ಶಿಕ್ಷಣ ವೆಚ್ಚಗಳಿಗೆ ಹಣ ಹೊಂದಿಸಲು ದೀರ್ಘ ಅವಧಿಗೆ ಆಕರ್ಷಕ ಬಡ್ಡಿದರಗಳನ್ನು ಲಾಕ್ ಮಾಡಿಕೊಳ್ಳಿ.
4. ಪೇಔಟ್ ಆಯ್ಕೆಗಳು: ನಿಮ್ಮ FD ಯಲ್ಲಿ ಬಡ್ಡಿಯನ್ನು ನೀವು ಯಾವಾಗ ಮತ್ತು ಹೇಗೆ ಪಡೆಯಬೇಕು ಎಂಬುದನ್ನು ನಿಯಂತ್ರಿಸುವ ಅವಕಾಶವನ್ನು ಬಜಾಜ್ ಫೈನಾನ್ಸ್ ನೀಡುತ್ತದೆ. ಈ ಆಯ್ಕೆಗಳಿಂದ ಒಂದನ್ನು ನೀವು ಆರಿಸಿಕೊಳ್ಳಬಹುದು:
a. ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ಪಾವತಿಗಳು: ನಿಯತ ಆದಾಯದ ಹರಿವನ್ನು ಜನರೇಟ್ ಮಾಡಿ, ನಿಮ್ಮ ಸಂಬಳಕ್ಕೆ ಪೂರಕವಾಗಿ ಆದಾಯ ಪಡೆದುಕೊಳ್ಳಿ ಅಥವಾ ಪದೇ ಪದೇ ಬರುವ ವೆಚ್ಚಗಳನ್ನು ಕೂಡ ಕವರ್ ಮಾಡಬಹುದು.
b. ವಾರ್ಷಿಕ ಪಾವತಿ: ಪ್ರತಿ ವರ್ಷದ ಕೊನೆಯಲ್ಲಿ ದೊಡ್ಡ ಮೊತ್ತದ ಹಣ ಪಡೆಯಿರಿ. ಮರು ಹೂಡಿಕೆಗೆ ಅಥವಾ ಭಾರಿ ಪ್ರಮಾಣದ ಖರೀದಿಗಳನ್ನು ಮಾಡಲು ಉಪಯುಕ್ತವಾಗಿದೆ.
c. ಪಕ್ವತೆ ಪಾವತಿ: ನಿಮ್ಮ FD ಅವಧಿಯ ಕೊನೆಯಲ್ಲಿ ಅಸಲು ಹಾಗೂ ಬಡ್ಡಿಯನ್ನು ಏಕ ಗಂಟಿನಲ್ಲಿ ಪಡೆಯಿರಿ, ನಿಮ್ಮ ಒಟ್ಟು ರಿಟರ್ನ್ಸ್ ಅನ್ನು ಹೆಚ್ಚಿಸಿಕೊಳ್ಳಿ
5. ಭದ್ರತೆ ಮತ್ತು ಗೌರವ: ಬಜಾಜ್ ಫೈನಾನ್ಸ್ ಒಂದು ಉತ್ತಮವಾಗಿ ಸ್ಥಾಪಿತ ಹಣಕಾಸು ಸಂಸ್ಥೆಯಾಗಿದ್ದು, 5 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ ಮತ್ತು ರೂ. 50,000 ಕೋಟಿಗೂ ಹೆಚ್ಚು ಡೆಪಾಸಿಟ್‌ಗಳಿವೆ. [ICRA]AAA(ಸ್ಟೇಬಲ್) ಮತ್ತು CRISIL AAA/STABLE ರೇಟಿಂಗ್ಸ್ ಅನ್ನು ಹೊಂದಿದೆ. ಅಂದರೆ, ನಿಮ್ಮ ಹೂಡಿಕೆ ಸುರಕ್ಷಿತವಾಗಿದೆ.
6. ಹಿರಿಯ ನಾಗರಿಕರಿಗೆ ವಿಶೇಷ ಪ್ರಯೋಜನಗಳು: ನಿವೃತ್ತರಿಗೆ ಬಜಾಜ್ ಫೈನಾನ್ಸ್ ಹೆಚ್ಚುವರಿ ಬಡ್ಡಿ (ವಾರ್ಷಿಕ 0.40%) ನೀಡುತ್ತದೆ. ಹೀಗಾಗಿ, ಈ ಸಮೂಹದವರಿಗೂ ಕೂಡಾ FD ಅತ್ಯಂತ ಆಕರ್ಷಕವಾಗಿರುತ್ತದೆ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸರಳ ಪ್ರಕ್ರಿಯೆ. ಈ ಸರಳ ಹಂತಗಳನ್ನು ಅನುಸರಿಸಿ:
1. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್ ಅಥವಾ ಆಪ್‌ಗೆ ಭೇಟಿ ನೀಡಿ
2. 'ಇನ್ವೆಸ್ಟ್‌ಮೆಂಟ್' ವಿಭಾಗಕ್ಕೆ ಹೋಗಿ, ನಂತರ 'ಫಿಕ್ಸೆಡ್ ಡೆಪಾಸಿಟ್' ಕ್ಲಿಕ್ ಮಾಡಿ
3. ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ತೆರೆಯಲು ಪುಟದ ಮೇಲ್ಭಾಗದಲ್ಲಿರುವ 'FD ತೆರೆಯಿರಿ' ಕ್ಲಿಕ್ ಮಾಡಿ
4. 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಫೋನ್‌ಗೆ ಕಳುಹಿಸಿದ OTP ವೆರಿಫೈ ಮಾಡಿ
5. ಇನ್ವೆಸ್ಟ್‌ಮೆಂಟ್ ಅಮೌಂಟ್ ಭರ್ತಿ ಮಾಡಿ, ಇನ್ವೆಸ್ಟ್‌ಮೆಂಟ್ ಅವಧಿ ಆಯ್ಕೆ ಮಾಡಿ ಮತ್ತು ಪೇಔಟ್ ಫ್ರೀಕ್ವೆನ್ಸಿಯನ್ನು ಆರಿಸಿಕೊಳ್ಳಿ. ಪ್ಯಾನ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
6. ನಿಮ್ಮ KYC ಪೂರ್ತಿಗೊಳಿಸಿ: ನೀವು ಈಗಾಗಲೇ ಗ್ರಾಹಕರಾಗಿದ್ದರೆ, ನಮ್ಮಲ್ಲಿ ಲಭ್ಯವಿರುವ ವಿವರಗಳನ್ನು ದೃಢೀಕರಿಸಿ ಅಥವಾ ಯಾವುದೇ ಬದಲಾವಣೆಗಳು ಬೇಕಾದರೆ ಎಡಿಟ್ ಮಾಡಿ. ಹೊಸ ಗ್ರಾಹಕರಿಗೆ, ಆಧಾರ್ ಕಾರ್ಡ್ ಬಳಸಿ ನಿಮ್ಮ ಕೆವೈಸಿ ಪೂರ್ತಿಗೊಳಿಸಿ.
7. ಘೋಷಣಾಪತ್ರವನ್ನು ಪ್ರಕಟಿಸಲಾಗುತ್ತದೆ. ಇದನ್ನು ದಯವಿಟ್ಟು ಗಮನವಿಟ್ಟು ಓದಿ ಮತ್ತು ನಿಯಮ ಮತ್ತು ಷರತ್ತುಗಳಿಗೆ ಸಮ್ಮತಿಸಿ. ನಿಮ್ಮ ಬ್ಯಾಂಕ್ ವಿವರಗಳನ್ನು ನಮೂದಿಸಿ, ಪಾವತಿ ಮಾಡಿ
8. ನೆಟ್ ಬ್ಯಾಂಕಿಂಗ್/ UPI ಅಥವಾ NEFT/ RTGS ಬಳಸಿ ನಿಮ್ಮ ಇನ್ವೆಸ್ಟ್‌ಮೆಂಟ್ ಪೂರ್ತಿಗೊಳಿಸಿ
ಉಪಸಂಹಾರ
ನಿರ್ದಿಷ್ಟ ಗುರಿಗೆ ಉಳಿತಾಯ ಮಾಡುತ್ತಿರಲಿ, ಎಮರ್ಜೆನ್ಸಿ ಫಂಡ್ ಅನ್ನು ನಿರ್ಮಿಸುತ್ತಿರಲಿ ಅಥವಾ ನಿಮ್ಮ ಹಣದ ಬೆಳವಣಿಗೆಯ ಜೊತೆಗೆ ರಕ್ಷಣೆಯನ್ನು ಬಯಸುತ್ತಿರಲಿ, ಬಜಾಜ್ ಫೈನಾನ್ಸ್ ಎಫ್‌ಡಿ ಸುರಕ್ಷಿತ ಮತ್ತು ಪುರಸ್ಕಾರ ನೀಡುವ ಪರಿಹಾರನ್ನು ಒದಗಿಸುತ್ತದೆ. ಇದರ ಸ್ಫರ್ಧಾತ್ಮಕ ಬಡ್ಡಿ ದರಗಳು, ಅನುಕೂಲಕರ ವೈಶಿಷ್ಟ್ಯಗಳು ಮತ್ತು ಗ್ರಾಹಕರ ಸಂತೃಪ್ತಿಗೆ ಇರುವ ಬದ್ಧತೆಯು ಭಾರತದಾದ್ಯಂತ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications