ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್: ಡಿಜಿಟಲ್ ಯುಗದಲ್ಲಿ ಹಣಕಾಸು ಸೇರ್ಪಡೆಗೆ ಪ್ರಮುಖ ಸಂಗತಿ
2024 ರಲ್ಲಿ ನಾವು ಮುಂದುವರಿದಂತೆ, ಸುರಕ್ಷಿತ ಮತ್ತು ಹೆಚ್ಚು ಪ್ರತಿಫಲ ನೀಡುವ ಹೂಡಿಕೆ ಆಯ್ಕೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸುರಕ್ಷಿತ ಹೂಡಿಕೆ ವಿಷಯಕ್ಕೆ ಬಂದರೆ, ಸುರಕ್ಷಿತ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿಗಳು) ಎಂದಿಗೂ ಆದ್ಯತೆಯ ಆಯ್ಕೆಯಾಗಿಯೇ ಇತ್ತು. ಕಾಲ ಬದಲಾದಂತೆ, ಬಜಾಜ್ ಫೈನಾನ್ಸ್ ಹೊಸ ವಿಧದ ಫಿಕ್ಸೆಡ್ ಡೆಪಾಸಿಟ್ 'ಡಿಜಿಟಲ್ ಫಿಕ್ಸೆಡ್ ಡೆಪಾಸಿಟ್' ಅನ್ನು ಪರಿಚಯಿಸಿದೆ.
ಹೊಸ ಮತ್ತು ಸುಧಾರಿತ ಬಜಾಜ್ ಫೈನಾನ್ಸ್ ಡಿಜಿಟಲ್ ಫಿಕ್ಸೆಡ್ ಡೆಪಾಸಿಟ್ ಬರಿ ಸುರಕ್ಷಿತ ಹೂಡಿಕೆದಾರರಿಗಷ್ಟೇ ಸೂಕ್ತವಾದದ್ದಲ್ಲ. ಇದು ತುಂಬಾ ಸುರಕ್ಷಿತ ಮತ್ತು ಹೆಚ್ಚು ಪ್ರತಿಫಲ ನೀಡುವ ಹೂಡಿಕೆ ಆಯ್ಕೆಯಾಗಿರುವುದರಿಂದ, ಈ ಹೊಸ ಉತ್ಪನ್ನವನ್ನು ಎಲ್ಲ ಹೂಡಿಕೆದಾರರೂ ಆರಿಸಿಕೊಳ್ಳಬಹುದು.

ಡಿಜಿಟಲ್ ಫಿಕ್ಸೆಡ್ ಡೆಪಾಸಿಟ್ ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
1. ಬಡ್ಡಿ ದರಗಳು: ಬಜಾಜ್ ಫೈನಾನ್ಸ್ ಡಿಜಿಟಲ್ ಫಿಕ್ಸೆಡ್ ಡೆಪಾಸಿಟ್ ಹಿರಿಯ ನಾಗರಿಕರಿಗೆ ವಾರ್ಷಿಕ 8.85% ಮತ್ತು 60 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ವಾರ್ಷಿಕ 8.60% ಬಡ್ಡಿ ದರವನ್ನು ಒದಗಿಸುತ್ತದೆ.
2. ಅವಧಿ: ಡಿಜಿಟಲ್ ಎಫ್‌ಡಿ ವಿಶಿಷ್ಟ 42 ತಿಂಗಳ ಅವಧಿಯನ್ನು ಹೊಂದಿದ್ದು, ಹಲವು ಹೂಡಿಕೆದಾರರ ಹಣಕಾಸು ಗುರಿಗಳಿಗೆ ಇದು ಹೊಂದಿಕೆಯಾಗುತ್ತದೆ.
3. ಡಿಜಿಟಲ್ ಆಕ್ಸೆಸ್: ಡಿಜಿಟಲ್ ಎಫ್‌ಡಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಬುಕ್ ಮಾಡಬಹುದಾಗಿದ್ದು, ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್ ಅಥವಾ ಆಪ್ ಮೂಲಕ ಬುಕ್ ಮಾಡಬಹುದಾಗಿದೆ. ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲದೇ ನೇರ ಮತ್ತು ವೇಗವಾದ ಅರ್ಜಿ ಪ್ರಕ್ರಿಯೆಯಲ್ಲಿ ಎಫ್‌ಡಿ ತೆರೆಯಬಹುದು.
4. ಸುರಕ್ಷತೆ: ಈ ಎಫ್‌ಡಿಗೆ ICRA AAA (ಸ್ಟೇಬಲ್) ಮತ್ತು CRISIL AAA/ಸ್ಟೇಬಲ್ ರೇಟಿಂಗ್‌ಗಳಿವೆ. ಇದು ದೇಶದ ಅತ್ಯಧಿಕ ಸುರಕ್ಷತೆ ರೇಟಿಂಗ್ ಆಗಿದ್ದು, ಅತಿ ಕಡಿಮೆ ಹೂಡಿಕೆ ಅಪಾಯವನ್ನು ಹೊಂದಿದೆ.
ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರ ಪ್ರಯೋಜನಗಳು
1. ಸುರಕ್ಷತೆ ಮತ್ತು ಸುಸ್ಥಿರತೆ
ನಿಮ್ಮ ಹಣವನ್ನು ಸುರಕ್ಷಿತವಾದ ಮತ್ತು ಸುಭದ್ರವಾದ ವಿಧಾನದಲ್ಲಿ ಹೂಡಿಕೆ ಮಾಡುವುದಕ್ಕೆ ಎಫ್‌ಡಿಗಳು ಹೆಸರಾಗಿವೆ. ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದ ಅಸಲಿನ ಮೊತ್ತವನ್ನು ರಕ್ಷಿಸಲಾಗುತ್ತದೆ ಮತ್ತು ಮಾರ್ಕೆಟ್ ರಿಸ್ಕ್‌ಗಳಿಗೆ ತೆರೆದುಕೊಳ್ಳದೇ ಹೂಡಿಕೆದಾರರು ಸ್ಥಿರ ರಿಟರ್ನ್ಸ್ ಮೇಲೆ ಅವಲಂಬನೆ ಹೊಂದಬಹುದಾಗಿದೆ. ರಿಸ್ಕ್ ತಾಳಿಕೊಳ್ಳದ, ಬಂಡವಾಳ ರಕ್ಷಣೆಗೆ ಆದ್ಯತೆ ನೀಡುವ ಹೂಡಿಕೆದಾರರಿಗೆ ಸುರಕ್ಷತೆಯ ಅಂಶವು ಹೆಚ್ಚು ಆಕರ್ಷಕವಾಗಿದೆ.
2. ಖಾತರಿ ರಿಟರ್ನ್ಸ್
ಎಫ್‌ಡಿಗಳ ಒಂದು ಆಕರ್ಷಕ ವೈಶಿಷ್ಟ್ಯಗಳೆಂದರೆ, ಫಿಕ್ಸೆಡ್ ರಿಟರ್ನ್ಸ್‌ನ ಖಾತರಿಯಾಗಿದೆ. ಮೊದಲೇ ನಿಗದಿಸಿದ ಬಡ್ಡಿ ದರದಲ್ಲಿ ಫಿಕ್ಸೆಡ್ ಬಡ್ಡಿಯನ್ನು ಹೂಡಿಕೆದಾರರು ಪಡೆಯುತ್ತಾರೆ ಮತ್ತು ಹಣಕಾಸು ಯೋಜನೆಗೆ ಸ್ಪಷ್ಟತೆ ಮತ್ತು ಊಹೆ ಮಾಡುವಿಕೆಯ ಸೌಲಭ್ಯವನ್ನೂ ಇದು ಒದಗಿಸುತ್ತದೆ. ಈ ಸ್ಥಿರತೆಯಿಂದಾಗಿ, ಸುರಕ್ಷಿತ ಮತ್ತು ಕಡಿಮೆ ಅಪಾಯವನ್ನು ಹೊಂದಿರುವ ಹೂಡಿಕೆ ವಿಧಾನಕ್ಕೆ ಆದ್ಯತೆ ನೀಡುವ ಹೂಡಿಕೆದಾರರಿಗೆ ಎಫ್‌ಡಿಗಳು ಹೆಚ್ಚು ಆಕರ್ಷಕವಾಗುತ್ತವೆ.
3. ಅನುಕೂಲಕರ ಅವಧಿ ಆಯ್ಕೆಗಳು
ಹೂಡಿಕೆ ಅವಧಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಎಫ್‌ಡಿಗಳು ಫ್ಲೆಕ್ಸಿಬಿಲಿಟಿ ಒದಗಿಸುತ್ತವೆ. ನಿರ್ದಿಷ್ಟ ಹಣಕಾಸು ಗುರಿಗಳಿಗೆ ಹೂಡಿಕೆ ಮಾಡಲು ಇದು ಅನುವು ಮಾಡುತ್ತದೆ. ಅಲ್ಪಾವಧಿ ಅಥವಾ ದೀರ್ಘಾವಧಿ ಡೆಪಾಸಿಟ್‌ಗಳನ್ನು ಆಯ್ಕೆ ಮಾಡಿದರೂ, ತಮ್ಮ ಹಣಕಾಸು ಗುರಿಗಳನ್ನು ಪೂರೈಸುವುದಕ್ಕೆ ತಮ್ಮ ಎಫ್‌ಡಿ ಹೂಡಿಕೆಗಳನ್ನು ಹೊಂದಿಸಬಹುದು.
4. ಸುಲಭ ದ್ರವ್ಯತೆ
ಎಫ್‌ಡಿಗಳಿಗೆ ಫಿಕ್ಸೆಡ್ ಅವಧಿ ಇದ್ದರೂ, ಒಂದಷ್ಟು ಮಟ್ಟಿಗಿನ ಲಿಕ್ವಿಡಿಟಿಯನ್ನು ಅವು ಒದಗಿಸುತ್ತವೆ. ತುರ್ತು ಹಣಕಾಸು ಅಗತ್ಯಗಳಿದ್ದಾಗ, ಅವಧಿಗೂ ಮೊದಲೇ ಹೂಡಿಕೆದಾರರು ವಿತ್‌ಡ್ರಾ ಮಾಡಿಕೊಳ್ಳಬಹುದು. ಆದರೆ, ಇದಕ್ಕೆ ಸ್ವಲ್ಪ ದಂಡ ವಿಧಿಸಲಾಗುತ್ತದೆ. ಹೂಡಿಕೆ ಮಾಡುವುದಕ್ಕೂ ಮೊದಲು ಹಣಕಾಸು ಸಂಸ್ಥೆಯಲ್ಲಿ ಪರಿಶೀಲನೆ ಮಾಡಿಕೊಳ್ಳಿ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಮತ್ತು ಭಾರತದಲ್ಲಿ ಲಭ್ಯವಿರುವ ಇತರ ಫಿಕ್ಸೆಡ್ ರಿಟರ್ನ್ ಹೂಡಿಕೆ ಆಯ್ಕೆಗಳ ಮಧ್ಯೆ ಹೋಲಿಕೆ.
| ವಿವರಗಳು | ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ | ಪಬ್ಲಿಕ್ ಪ್ರಾವಿಡೆಂಟ್ ಫಂಡ್ | ಅಂಚೆ ಕಚೇರಿ RD | ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ) |
| ಬಡ್ಡಿ ದರ | ವಾರ್ಷಿಕ 8.85% ವರೆಗೆ | ವಾರ್ಷಿಕ 7.1% | 6.7% (ತ್ರೈಮಾಸಿಕವಾಗಿ ಕ್ರೋಢೀಕೃತ) | ವಾರ್ಷಿಕ 7.7% |
| ಅವಧಿ | 12-60 ತಿಂಗಳುಗಳು | 15 ವರ್ಷಗಳು | 5 ವರ್ಷಗಳು | 5 ವರ್ಷಗಳು |
| ಕನಿಷ್ಠ ಹೂಡಿಕೆ | ರೂ. 15,000 | ರೂ. 500 | ಮಾಸಿಕ ರೂ. 100 | ರೂ. 1000 |
| ಗರಿಷ್ಠ ಹೂಡಿಕೆ | ರೂ. 5 ಕೋಟಿ | ವಾರ್ಷಿಕ ರೂ. 1.5 ಲಕ್ಷ | ಗರಿಷ್ಠ ಮಿತಿ ಇಲ್ಲ | ಗರಿಷ್ಠ ಮಿತಿ ಇಲ್ಲ |
ಉಪಸಂಹಾರ
ಇಂದಿನ ಡಿಜಿಟಲ್ ಯುಗದಲ್ಲಿ, ಬಜಾಜ್ ಫೈನಾನ್ಸ್ ಡಿಜಿಟಲ್ ಎಫ್‌ಡಿ ವಿಭಿನ್ನವಾಗಿ ನಿಲ್ಲುತ್ತದೆ. ಯಾಕೆಂದರೆ, ಇದು ನವೀನ ಉತ್ಪನ್ನವಾಗಿದೆ ಮತ್ತು ಯಾರು ಬೇಕಾದರೂ ಸುಲಭವಾಗಿ ಹೂಡಿಕೆ ಮಾಡಲು ಅವಕಾಶ ಒದಗಿಸುತ್ತದೆ. ಸ್ಫರ್ಧಾತ್ಮಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಅವಧಿಯನ್ನು ಒದಗಿಸುವ ಬಜಾಜ್ ಫೈನಾನ್ಸ್, ಫಿಕ್ಸೆಡ್ ಡೆಪಾಸಿಟ್‌ಗಳು ಎಲ್ಲರಿಗೂ ಸುಲಭವಾಗಿ ಕೈಗೆಟಕುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ನಾವು ಡಿಜಿಟಲ್ ವಿಶ್ವಕ್ಕೆ ಹೊಂದಿಕೊಳ್ಳುತ್ತಿರುವ ಈ ಸಮಯದಲ್ಲಿ ತನ್ನ ನವೀನ ಹಣಕಾಸು ಸೌಲಭ್ಯಗಳ ಮೂಲಕ ಬಜಾಜ್ ಫೈನಾನ್ಸ್ ಪ್ರತಿ ವ್ಯಕ್ತಿಯನ್ನೂ ಸಬಲೀಕರಿಸುತ್ತಿದೆ ಮತ್ತು ಹಣಕಾಸು ಯೋಗಕ್ಷೇಮವು ಎಲ್ಲರಿಗೂ ಸಿಗುತ್ತದೆ ಎಂಬ ಸನ್ನಿವೇಶವನ್ನು ಪ್ರೋತ್ಸಾಹಿಸುತ್ತಿದೆ.












Click it and Unblock the Notifications