Get Updates
Get notified of breaking news, exclusive insights, and must-see stories!

ಬಜಾಜ್ ಫೈನಾನ್ಸ್ ನ ಎಫ್‌ಡಿಗಳು ಉತ್ತಮ ಹೂಡಿಕೆ ಆಯ್ಕೆಯಾಗುವುದಕ್ಕೆ 7 ವೈಶಿಷ್ಟ್ಯಗಳು!

ನಿರಂತರ ಸುಧಾರಣೆ ಕಾಣುತ್ತಿರುವ ಹೂಡಿಕೆ ವಲಯದಲ್ಲಿ, ಹೂಡಿಕೆ ವಿಧಾನಗಳು ಒಳ್ಳೆಯ ರಿಟರ್ನ್ಸ್‌ ನೀಡಬೇಕು ಎಂದು ಆಶಿಸುತ್ತಾರೆ. ಇದರ ಜೊತೆಗೇ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಭಾವವನ್ನೂ ಬಯಸುತ್ತಾರೆ. ಇರುವ ಹಲವು ಆಯ್ಕೆಗಳ ಪೈಕಿ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳು ವಿಶಿಷ್ಟ ಆಯ್ಕೆಯಾಗಿದ್ದು, ಹೂಡಿಕೆದಾರರ ವಿವಿಧ ಅಗತ್ಯಗಳನ್ನು ಪೂರೈಸುವ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ.

ಬಜಾಜ್ ಫೈನಾನ್ಸ್ ಎಫ್‌ಡಿಗಳನ್ನು ಸೂಕ್ತ ಹೂಡಿಕೆ ಆಯ್ಕೆಯನ್ನಾಗಿ ಮಾಡುವ ಏಳು ಪ್ರಮುಖ ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Bajaj Finance: 7 Best Features of Bajaj Finance FD
  • ಆಕರ್ಷಕ ಬಡ್ಡಿ ದರಗಳು

ಬಜಾಜ್ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್‌ಗಳು ಆಕರ್ಷಕ ಬಡ್ಡಿ ದರವನ್ನು ಒದಗಿಸುವ ಬದ್ಧತೆಯನ್ನು ನೀಡುತ್ತವೆ. ನಿಮ್ಮ ಹಣ ಬರಿ ಬೆಳೆಯುವುದಲ್ಲ. ಅದು ಹಣದುಬ್ಬರಕ್ಕಿಂತಲೂ ಹೆಚ್ಚು ವೇಗವಾಗಿ ಬೆಳೆಯಬೇಕು ಎಂಬುದರ ಮಹತ್ವವನ್ನು ಕಂಪನಿ ಅರ್ಥ ಮಾಡಿಕೊಂಡಿದೆ. ಆಗಲೇ ನಿಮ್ಮ ಸಂಪತ್ತಿನ ನಿಜವಾದ ಮೌಲ್ಯ ಸಂರಕ್ಷಣೆಯಾಗುತ್ತದೆ. ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ವಾರ್ಷಿಕ 8.60% ರಷ್ಟು ಅಧಿಕ ಬಡ್ಡಿ ದರವನ್ನು ಬಜಾಜ್‌ ಫೈನಾನ್ಸ್ ನೀಡುತ್ತದೆ. ತಮ್ಮ ಹೂಡಿಕೆಗಳ ಮೇಲೆ ಖಾತರಿ ರಿಟರ್ನ್ಸ್ ಅನ್ನು ಪಡೆಯುವವರಿಗೆ ಇದು ತಡೆಯಲಾಗದ ಆಯ್ಕೆಯಾಗಿದೆ.

  • ಅತ್ಯಧಿಕ ಸುರಕ್ಷತೆ ರೇಟಿಂಗ್‌ಗಳು

ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳು ಕ್ರಿಸಿಲ್ ಎಎಎ/ಸ್ಟೇಬಲ್ ಮತ್ತು [ಐಸಿಆರ್‌ಎ] ಎಎಎ/ಸ್ಟೇಬಲ್‌ ಅತ್ಯಧಿಕ ರೇಟಿಂಗ್‌ಳನ್ನು ಹೊಂದಿವೆ. ಇದರಿಂದ ಹೂಡಿಕೆದಾರರಿಗೆ ತಮ್ಮ ಫಂಡ್‌ಗಳು ಸುರಕ್ಷಿತವಾಗಿರುತ್ತವೆ ಎಂಬ ಖಚಿತತೆ ಸಿಗುತ್ತದೆ. ಆರ್ಥಿಕ ಸ್ಥಿರತೆ ಮತ್ತು ವಿಶ್ವಾಸಾರ್ಹತೆಗೆ ಬಜಾಜ್‌ ಫೈನಾನ್ಸ್‌ನ ಬದ್ಧತೆಯು ಫಿಕ್ಸೆಡ್ ಡೆಪಾಸಿಟ್‌ಗೆ ಅತ್ಯಂತ ಪ್ರಮುಖವಾಗಿದ್ದು, ಹೂಡಿಕೆದಾರರಿಗೆ ವಿಶ್ವಾಸವಿಡಬಹುದಾದ ಆರ್ಥಿಕ ನೆಲೆಯನ್ನು ಒದಗಿಸುತ್ತದೆ.

  • ಸಂಚಿತ ಮತ್ತು ಸಂಚಿತವಲ್ಲದ ಆಯ್ಕೆಗಳು

ಬಜಾಜ್ ಫೈನಾನ್ಸ್‌ ಸಂಚಿತ ಮತ್ತು ಸಂಚಿತವಲ್ಲದ ಬಡ್ಡಿ ಪಾವತಿ ಆಯ್ಕೆಗಳೆರಡನ್ನೂ ಒದಗಿಸುತ್ತದೆ.ಇದರಿಂದಾಗಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೂಡಿಕೆ ಕಾರ್ಯತಂತ್ರವನ್ನು ರೂಪಸಲು ಹೂಡಿಕೆದಾರರಿಗೆ ಅನುವಾಗುತ್ತದೆ. ಸಂಚಿತ ಡೆಪಾಸಿಟ್‌ಗಳು ಕಾಲಾವಧಿಯಲ್ಲಿ ಬಡ್ಡಿಯನ್ನು ಸಂಚಯಗೊಳಿಸುತ್ತವೆ ಮತ್ತು ಪಕ್ವಗೊಂಡಾಗ ಒಟ್ಟು ಮೊತ್ತವನ್ನು ಪಾವತಿ ಮಾಡುತ್ತವೆ. ಇನ್ನು ಸಂಚಿತವಲ್ಲದ ಡೆಪಾಸಿಟ್‌ಗಳು ಹೆಚ್ಚಿನ ಬಡ್ಡಿ ಪಾವತಿ ಮಾಡುತ್ತವೆ ಮತ್ತು ಸ್ಥಿರ ಆದಾಯವನ್ನು ಒದಗಿಸುತ್ತವೆ.

  • ಕಿರಿಕಿರಿ-ರಹಿತ ಆನ್‌ಲೈನ್ ಪ್ರಕ್ರಿಯೆ

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದು ಬರಿ ರಿಟರ್ನ್ಸ್‌ಗೆ ಮಾತ್ರವಲ್ಲ. ಅನುಕೂಲಕ್ಕೂ ಹೌದು. ಬಳಕೆದಾರ ಸ್ನೇಹಿ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಕಾಗದಪತ್ರದ ಅಗತ್ಯವಿರುವುದಿಲ್ಲ. ಇಡೀ ಹೂಡಿಕೆ ಪಯಣವನ್ನು ತಮ್ಮ ಮನೆಯ ಅನುಕೂಲದಲ್ಲೇ ಹೂಡಿಕೆದಾರರು ಮುಗಿಸಬಹುದು. ಹೂಡಿಕೆಗೆ ಆಧುನಿಕ ಮತ್ತು ಕಿರಿಕಿರಿ-ರಹಿತ ವಿಧಾನವು ಇಂದಿನ ತಂತ್ರಜ್ಞಾನ ಪ್ರಿಯ ಹೂಡಿಕೆದಾರರ ಆಯ್ಕೆಗಳಿಗೆ ಅನುಗುಣವಾಗಿದೆ ಮತ್ತು ಗರಿಷ್ಟ ದಕ್ಷತೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.

  • ವಿಶಾಲ ಶ್ರೇಣಿಯ ಅವಧಿಗಳು

ಒಬ್ಬೊಬ್ಬ ಹೂಡಿಕೆದಾರರಿಗೂ ಹಣಕಾಸಿನ ಗುರಿಗಳು ವಿಭಿನ್ನವಾಗಿರುತ್ತವೆ ಎಂದು ಅರ್ಥ ಮಾಡಿಕೊಂಡಿರುವ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳು 12 ರಿಂದ 60 ತಿಂಗಳುಗಳ ವರೆಗಿನ ಫ್ಲೆಕ್ಸಿಬಲ್ ಅವಧಿಗಳನ್ನು ಒದಗಿಸುತ್ತವೆ. ಹೀಗಾಗಿ, ನೀವು ಅಲ್ಪಾವಧಿ ಗಳಿಕೆಗಳನ್ನು ಹುಡುಕುತ್ತಿರಲಿ ಅಥವಾ ದೀರ್ಘಕಾಲದ ಹಣಕಾಸು ಉದ್ದೇಶಗಳಿಗೆ ಯೋಜನೆ ರೂಪಿಸುತ್ತಿರಲಿ, ವಿವಿಧ ರೀತಿಯ ಅವಧಿಗಳು ನಿಮ್ಮ ಹಣಕಾಸಿನ ಗುರಿಗಳಿಗೆ ಹೊಂದುತ್ತವೆ ಎಂಬುದನ್ನು ಖಚಿತಪಡಿಸುತ್ತವೆ.

  • ಫಿಕ್ಸೆಡ್ ಡೆಪಾಸಿಟ್‌ ಮೇಲೆ ಸಾಲ

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ ಪಡೆಯುವ ವಿಶಿಷ್ಟ ಅನುಕೂಲವನ್ನು ಬಜಾಜ್ ಫೈನಾನ್ಸ್ ಒದಗಿಸುತ್ತದೆ. ಎಫ್‌ಡಿ ಹೊಂದಿರುವವರಿಗೆ ತುರ್ತು ನಗದು ಬೇಕು ಎಂದಾದರೆ, ಸಂಚಿತ ಎಫ್‌ಡಿ ಆಗಿದ್ದರೆ ಡೆಪಾಸಿಟ್‌ ಮೌಲ್ಯದ 75% ವರೆಗೆ ಮತ್ತು ಸಂಚಿತವಲ್ಲದ ಎಫ್‌ಡಿಗಳಾಗಿದ್ದರೆ ಡೆಪಾಸಿಟ್‌ನ 60% ವರೆಗೆ ಸಾಲವನ್ನು ನೀಡಬಹುದಾಗಿದೆ. ಅವಧಿಗೂ ಮೊದಲೇ ಎಫ್‌ಡಿ ಬ್ರೇಕ್ ಮಾಡದೇ ಹೂಡಿಕೆದಾರರು ತಮ್ಮ ಫಿಕ್ಸೆಡ್ ಡೆಪಾಸಿಟ್‌ನ ಮೌಲ್ಯವನ್ನು ಅನ್‌ಲಾಕ್ ಮಾಡಲು ಈ ವೈಶಿಷ್ಟ್ಯವು ಅನುವು ಮಾಡುತ್ತದೆ.

  • ಬಜಾಜ್ ಫೈನಾನ್ಸ್ ಎಫ್‌ಡಿ ಕ್ಯಾಲಕ್ಯುಲೇಟರ್

ಹೂಡಿಕೆದಾರರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಬಜಾಜ್ ಫೈನಾನ್ಸ್‌ ಬಳಕೆದಾರ ಸ್ನೇಹಿ ಫಿಕ್ಸೆಡ್ ಡೆಪಾಸಿಟ್ ಕ್ಯಾಲಕ್ಯುಲೇಟರ್ ಅನ್ನು ಒದಗಿಸುತ್ತದೆ. ಅಸಲು ಮೊತ್ತ, ಬಡ್ಡಿ ದರ ಮತ್ತು ಅವಧಿಯಂತಹ ಮಾನದಂಡಗಳನ್ನು ಆಧರಿಸಿ ತಮ್ಮ ಸಂಭಾವ್ಯ ಗಳಿಕೆಗಳನ್ನು ಲೆಕ್ಕಾಚಾರ ಮಾಡಲು ಈ ಪರಿಕರವು ವ್ಯಕ್ತಿಗಳಿಗೆ ಅನುವು ಮಾಡುತ್ತದೆ. ಈ ಎಫ್‌ಡಿ ಕ್ಯಾಲಕ್ಯುಲೇಟರ್‌ ಫೈನಾನ್ಷಿಯಲ್ ಕಂಪಾಸ್ ರೀತಿ ಕೆಲಸ ಮಾಡುತ್ತದೆ. ಹೂಡಿಕೆಯ ಸಂಭಾವ್ಯ ರಿಟರ್ನ್ಸ್‌ ಬಗ್ಗೆ ಒಳನೋಟಗಳನ್ನು ನೀಡುವ ಮೂಲಕ ಸರಿಯಾದ ಮಾಹಿತಿಯುತ ನಿರ್ಧಾರಗಳನ್ನು ಮಾಡಲು ಹೂಡಿಕೆದಾರರಿಗೆ ಮಾರ್ಗದರ್ಶನ ಮಾಡುತ್ತದೆ.

ಉಪಸಂಹಾರ

ಒಟ್ಟಿನಲ್ಲಿ, ಬಜಾಜ್‌ ಫೈನಾನ್ಸ್‌ ಫಿಕ್ಸೆಡ್‌ ಡೆಪಾಸಿಟ್‌ಗಳು ಕೇವಲ ಹಣಕಾಸು ಸಲಕರಣೆಗಳಲ್ಲ. ಹಣಕಾಸು ಸಂಪತ್ತಿಗೆ ನಿಮ್ಮ ಪಯಣದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿದೆ. ಆಕರ್ಷಕ ಬಡ್ಡಿ ದರಗಳು, ಅಧಿಕ ಸುರಕ್ಷತೆ ರೇಟಿಂಗ್‌ಗಳು, ಅನುಕೂಲಕರ ಪಾವತಿ ಆಯ್ಕೆಗಳು, ಕಿರಿಕಿರಿ ರಹಿತ ಆನ್‌ಲೈನ್‌ ಪ್ರಕ್ರಿಯೆ ಮತ್ತು ಅಮೂಲ್ಯವಾದ ಬಜಾಜ್ ಫೈನಾನ್ಸ್ ಎಫ್‌ಡಿ ಕ್ಯಾಲಕ್ಯುಲೇಟರ್‌ ಮೂಲಕ ಹೂಡಿಕೆದಾರರಿಗೆ ಈ ಫಿಕ್ಸೆಡ್ ಡೆಪಾಸಿಟರ್‌ಗಳು ಸಮಗ್ರ ಸೌಲಭ್ಯವನ್ನು ಒದಗಿಸುತ್ತವೆ.

ನೀವು ಹೂಡಿಕೆದಾರರಾಗಿರಲಿ ಅಥವಾ ನಿಮ್ಮ ಹಣಕಾಸು ಪಯಣವನ್ನು ಆಗಷ್ಟೇ ಆರಂಭಿಸಿರಲಿ, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ ಅನ್ನು ನಿಮ್ಮ ವಿಶ್ವಾಸಾರ್ಹ ಸಂಗಾತಿಯನ್ನಾಗಿ ಪರಿಗಣಿಸಿ. ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ಭವಿಷ್ಯವನ್ನು ರೂಪಿಸಿ. ಬಜಾಜ್ ಫೈನಾನ್ಸ್‌ ಫಿಕ್ಸೆಡ್‌ ಡೆಪಾಸಿಟ್‌ಗಳನ್ನು ಆಯ್ಕೆ ಮಾಡುವ ಮೂಲಕ ಸ್ಥಿರ ರಿಟರ್ನ್ಸ್‌ ಮತ್ತು ಹಣಕಾಸು ಭದ್ರತೆಯ ಖಾತರಿಯನ್ನು ಪಡೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+