770 MW ಜಲವಿದ್ಯುತ್ ಯೋಜನೆಗೆ ಅದಾನಿ ಪವರ್‌-ಭೂತಾನ್ DGPC ಒಪ್ಪಂದ

ಭಾರತದ ಅದಾನಿ ಪವರ್‌ ಮತ್ತು ಭೂತಾನ್‌ ಸರ್ಕಾರದ ಒಡೆತನದ ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ (DGPC) ನಡುವೆ 770 ಮೆಗಾವ್ಯಾಟ್ ಸಾಮರ್ಥ್ಯದ ಚಮ್ಖಾರ್ಚು-I ಜಲವಿದ್ಯುತ್ ಯೋಜನೆ ಅಭಿವೃದ್ಧಿಪಡಿಸಲು ಷೇರುದಾರರ ಒಪ್ಪಂದ (Shareholders Agreement) ನಡೆದಿದೆ. ಈ ಒಪ್ಪಂದವು ಭಾರತ-ಭೂತಾನ್ ನಡುವಿನ ಹೆಚ್ಚುತ್ತಿರುವ ಇಂಧನ ಸಹಭಾಗಿತ್ವಕ್ಕೆ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

ಭೂತಾನ್‌ನ ಝೆಮ್‌ಗಾಂಗ್ ಜಿಲ್ಲೆಯಲ್ಲಿ ಹರಿಯುವ ಚಮ್ಖಾರ್ಚು ನದಿಗೆ ಅಡ್ಡಲಾಗಿ ಈ ಯೋಜನೆಯನ್ನು ನಿರ್ಮಿಸಲಾಗುತ್ತದೆ. Build, Own, Operate and Transfer (BOOT) ಮಾದರಿಯಲ್ಲಿ ಯೋಜನೆ ಜಾರಿಯಾಗಲಿದ್ದು, ಅದಾನಿ ಪವರ್ ಶೇ.49 ಹಾಗೂ DGPC ಶೇ.51ರಷ್ಟು ಪಾಲುದಾರಿಕೆಯನ್ನು ಹೊಂದಿರಲಿದೆ.

Adani Group Adani Power Druk Green Power Sign Pact to Develop 770 MW Hydropower Project in Bhutan

ಯೋಜನೆಯ ವಾಣಿಜ್ಯ ಕಾರ್ಯಾಚರಣೆ ಆರಂಭವಾದ ದಿನದಿಂದ 30 ವರ್ಷಗಳವರೆಗೆ ರಿಯಾಯಿತಿ ಅವಧಿ ಇರಲಿದೆ. 2027ರ ಮೊದಲಾರ್ಧದಲ್ಲಿ ಕಾಮಗಾರಿ ಆರಂಭಿಸುವ ನಿರೀಕ್ಷೆಯಿದ್ದು, ನಿರ್ಮಾಣ ಕಾರ್ಯ ಆರಂಭವಾದ ಆರು ವರ್ಷಗಳೊಳಗೆ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ.

Adani Group: 5,000 MW ಜಲವಿದ್ಯುತ್ ಸಹಭಾಗಿತ್ವದ ಭಾಗ

ಚಮ್ಖಾರ್ಚು-I ಯೋಜನೆಯು ಅದಾನಿ ಗ್ರೂಪ್‌ ಮತ್ತು ಭೂತಾನ್ ಸರ್ಕಾರದ ನಡುವಿನ 5,000 MW ಜಲವಿದ್ಯುತ್ ಅಭಿವೃದ್ಧಿ ಸಹಭಾಗಿತ್ವದ ಭಾಗವಾಗಿದೆ. 2025ರ ಮೇನಲ್ಲಿ ಈ ಸಂಬಂಧ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಹಾಕಲಾಗಿತ್ತು.

ಅದಾನಿ ಪವರ್‌ ಮತ್ತು DGPC ನಡುವಿನ ಇದು ಎರಡನೇ ಪ್ರಮುಖ ಜಲವಿದ್ಯುತ್ ಸಹಯೋಗವಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಉಭಯ ಸಂಸ್ಥೆಗಳು 570 MW ಸಾಮರ್ಥ್ಯದ ವಾಂಗ್‌ಚು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡಿದ್ದವು.

Adani Group: ಭೂತಾನ್‌ ವಿದ್ಯುತ್ ಭದ್ರತೆಗೆ ಬಲ

ಚಮ್ಖಾರ್ಚು-I ಯೋಜನೆಯು ವಿಶೇಷವಾಗಿ ಚಳಿಗಾಲದ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆಯಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಸಿರು ವಿದ್ಯುತ್‌ನ್ನು ಭಾರತಕ್ಕೆ ರಫ್ತು ಮಾಡುವ ಅವಕಾಶವೂ ಇರಲಿದೆ.

ಅದಾನಿ ಪವರ್‌ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ದಾನಾ ಅವರ ಪ್ರಕಾರ, ಈ ಯೋಜನೆಯು ದಕ್ಷಿಣ ಏಷ್ಯಾದ ಇಂಧನ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಇಂಧನ ಭದ್ರತೆ ಹೆಚ್ಚಿಸುವುದರ ಜೊತೆಗೆ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಯೋಜನೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

DGPC ವ್ಯವಸ್ಥಾಪಕ ನಿರ್ದೇಶಕ ದಾಶೋ ಛೆವಾಂಗ್ ರಿನ್ಜಿನ್ ಕೂಡ ಚಮ್ಖಾರ್ಚು-I ಯೋಜನೆಯು ಭೂತಾನ್‌ನ ಇಂಧನ ಭದ್ರತೆಯನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಸ್ವಚ್ಛ ವಿದ್ಯುತ್‌ನ್ನು ಭಾರತಕ್ಕೆ ರಫ್ತು ಮಾಡುವ ಮೂಲಕ ಎರಡೂ ದೇಶಗಳ ನಡುವಿನ ಇಂಧನ ಸಹಕಾರ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.

ಪ್ರಸ್ತುತ DGPC 3,500 MWಕ್ಕೂ ಅಧಿಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಪೋರ್ಟ್‌ಫೋಲಿಯೊ ಹೊಂದಿದ್ದು, 2040ರ ವೇಳೆಗೆ ಭೂತಾನ್‌ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 25,000 MWಗೆ ಹೆಚ್ಚಿಸುವ ಗುರಿಗೆ ಕೆಲಸ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+