9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಸ್ಪರ್ಧೆ

Posted By:
Subscribe to Oneindia Kannada

ಸೆಪ್ಟೆಂಬರ್2, 3ಮತ್ತು4ರಂದು ಅಮೇರಿಕದ ನ್ಯೂ ಜೆರ್ಸಿ ರಾಜ್ಯದ'ಅಟ್ಲಾಂಟಿಕ್ ಸಿಟಿ'ಯಲ್ಲಿ ನಡೆಯಲಿರುವ ಒಂಬತ್ತನೆಯ 'ಅಕ್ಕವಿಶ್ವಕನ್ನಡಸಮ್ಮೇಳನ2016'ಕಾರ್ಯಕ್ರಮದ ಅಂಗವಾಗಿ, ಕನ್ನಡ ನಾಡಿನ ಇತಿಹಾಸ, ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ.

ಕನ್ನಡದ ಯುವ ಬರಹಗಾರರು ಪ್ರಬಂಧ ಸ್ಪರ್ಧೆಗೆ ಜೂನ್ 10ರೊಳಗಾಗಿ ಪ್ರಬಂಧ ಕಳುಹಿಸಬೇಕು ಎಂದು ಅಕ್ಕ ಆಹ್ವಾನಿಸಿದೆ. ಲೇಖಕರುಬರೆದುಕಳುಹಿಸಲಿರುವಪ್ರಬಂಧಗಳು,ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು.

ಅರ್ಹತೆ :ಕಿರಿಯರ ವಿಭಾಗ: (ಕಾಲೇಜು ವಿದ್ಯಾರ್ಥಿಗಳು- ಪದವಿ ಪೂರ್ವ ವಿಭಾಗ ) ;ಹಿರಿಯರ ವಿಭಾಗ: (ಪದವಿತರಗತಿಯಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳು)

New Jersey WKC : Kannada essay competition by AKKA

ಪ್ರಬಂಧವಿಷಯಗಳು

1. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ
2. ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ
3. ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಪ್ರಸ್ತುತತೆ.
4. ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗು ಅದರ ಬೆಳವಣಿಗೆ
5. ವಿದ್ಯಾವಂತವರಿಗೇಕೆ ರಾಜಕೀಯದ ಉಸಾಬರಿ?
6. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು
7. 21ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ಞಾನದ ಕೊಡುಗೆ

ವಿವರಗಳು

ಪ್ರಬಂಧಸ್ಪರ್ಧೆ:
ಪ್ರಬಂಧ ವಿಷಯ :
ವಿದ್ಯಾರ್ಥಿಯ ಪೂರ್ಣ ಹೆಸರು:
ವಯಸ್ಸು :
ಶಾಲೆ/ಕಾಲೇಜು ವಿವರಣೆ :
ದೂರವಾಣಿ :
ಇ-ಮೇಲ್ :
ನಿಮ್ಮ ವಿವರಗಳನ್ನು PDFನ ಮೊದಲ ಪುಟದಲ್ಲಿ ಕೊಡಿ.

ಸ್ಪರ್ಧೆಯನಿಯಮಗಳು

* ಪ್ರಬಂಧಗಳು ಸ್ವಂತದ್ದಾಗಿರಬೇಕು.
* ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
* ಸ್ಪರ್ಧೆಯ ನಂತರ ಪ್ರಬಂಧಗಳು ಪ್ರಕಟಿಸುವ ಹಕ್ಕು "ಅಕ್ಕ" ಸಂಸ್ಥೆಯದಾಗಿರುತ್ತದೆ.
* ಎಲ್ಲಾ ಪ್ರಬಂಧಗಳು 1200 ಪದಗಳನ್ನು ಮೀರಬಾರದು.

ಪ್ರಬಂಧ ಕಳುಹಿಸುವ ರೀತಿ ಹೀಗಿರಬೇಕು

ಸಂಪರ್ಕಿಸುವ ವಿಧಾನ : ಇ-ಮೇಲ್
ಫೈಲ್ ಮಾದರಿ : PDF
ಫೈಲ್ ಹೆಸರಿಸುವ ರೀತಿ :A16_Essay_Name_Date.pdf
ಹೆಸರು : ನಿಮ್ಮ ಹೆಸರಿನ ಮೊದಲ 6 ಅಕ್ಷರಗಳು
ದಿನಾಂಕ : ಫೈಲ್ ಕಳಿಸುವ ದಿನಾಂಕ: 03Mar
ಉದಾರರಣೆ :A16_Essay_RamKum_03Mar.pdf
ಸ್ಪರ್ಧೆಗಳನ್ನು ಕಳಿಸಬೇಕಾದ ಕೊನೆಯ ದಿನಾಂಕ:ಜೂನ್ 10, 2016
ನಿಮ್ಮ ಸ್ಪರ್ಧೆಗಳನ್ನು ಕಳಿಸಬೇಕಾದ ವಿಳಾಸ :AKKA2016-souvenir@akkaonline.com
ಇ-ಮೇಲ್ Subject line : AKKA_2016_Essay

ಬಹುಮಾನಗಳು : ಕಿರಿಯರುಹಾಗುಹಿರಿಯರವಿಭಾಗ-ಆಯ್ದ ಪ್ರಬಂಧಗಳಿಗೆಸೂಕ್ತ ಬಹುಮಾನಕೊಡಲಾಗುವುದು + ಅಕ್ಕದಿಂದ ಪ್ರಶಸ್ತಿ ಪತ್ರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Organizers of 9th AKKA World Kannada Conference to be held at Atlanta City, New Jersey have invited Kannada writers to participate in essay competition. The entries have be sent before 10th June, 2015. Hurry up. AKKA convension will be held from September 2 to 4, 2016.
Please Wait while comments are loading...