ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ 'ಅಕ್ಕ' ನೋಡಲು ಹೊರಟ ಶಾಸಕರು

By Mahesh
|
Google Oneindia Kannada News

ಬೆಂಗಳೂರು, ಆ.20: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ನಡೆಯಲಿರುವ 8ನೇ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ 30ಕ್ಕೂ ಅಧಿಕ ಶಾಸಕರು ಹಾಗೂ ಕೆಲ ಸಚಿವರು ಸಜ್ಜಾಗಿದ್ದಾರೆ. ಆ. 29 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ವಿಶ್ವ ಕನ್ನಡ ಸಮ್ಮೇಳನಕ್ಕೆ ಎರಡು ತಂಡಗಳಲ್ಲಿ ಜನಪ್ರತಿನಿಧಿಗಳು ತೆರಳುವ ಮಾಹಿತಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತ್ರ ಕರ್ನಾಟಕ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಆ.27 ರಂದು ಮುಂಜಾನೆ ಜನಪ್ರತಿನಿಧಿಗಳು ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಕೆಲ ಶಾಸಕರು ಯುರೋಪ್ ಪ್ರವಾಸಕ್ಕೂ ಹೋಗುವ ಸಾಧ್ಯತೆಯಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಹದೇವ ಪ್ರಸಾದ್​, ಸಮ್ಮೇಳನದ ಸಂಘಟಕರಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ 25 ರಿಂದ 30 ಜನ ಶಾಸಕರು ಪ್ರವಾಸಕ್ಕೆ ತೆರಳುತ್ತಿದ್ದೇವೆ. ಎಲ್ಲರೂ ಅವರ ಸ್ವಂತ ಖರ್ಚಿನಲ್ಲೇ ಸಮ್ಮೇಳನಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ. [ಸಮ್ಮೇಳನಕ್ಕೊಂದು ಸುಂದರ ಅಪ್ಲಿಕೇಷನ್]

ಶಾಸಕರ ಪ್ರವಾಸಕ್ಕೆ ಅನುಮತಿ?: ಮೂರು ಡಜನ್ ಗಟ್ಟಲೇ ಶಾಸಕರು ವಿದೇಶಿ ಪ್ರವಾಸ ಮಾಡುವ ಮುನ್ನ ಅಸೆಂಬ್ಲಿ ಸ್ಪೀಕರ್ ಅನುಮತಿ ಪಡೆಯಬೇಕಾಗುತ್ತದೆ. ನಂತರ ಆಯಾ ಪಕ್ಷದ ಮುಖಂಡರಿಗೆ ತಿಳಿಸಿ ವಿಮಾನ ಏರಬಹುದಾಗಿದೆ. ಆದರೆ, ಶಾಸಕರ ಪ್ರವಾಸದ ಬಗ್ಗೆ ಇನ್ನೂ ನನಗೆ ಮಾಹಿತಿ ಬಂದಿಲ್ಲ ಎಂದು ಸಭಾಪತಿ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Akka world convention 2014, Netas to Fly to San Francisco

ಇನ್ನೊಂದು ಮೂಲಗಳ ಪ್ರಕಾರ, ಶಾಸಕರ ಪ್ರವಾಸಕ್ಕೆ ಖಾಸಗಿ ಪ್ರಾಯೋಜಕತ್ವ ಇದೆ ಎನ್ನಲಾಗುತ್ತಿದೆ. ಪ್ರಾಯೋಜಕರು ಯಾರು ಎಂಬುದರ ಬಗ್ಗೆ ಯಾವೊಬ್ಬ ಶಾಸಕರು ತುಟಿ ಬಿಚ್ಚಿಲ್ಲ. ಸ್ಪೀಕರ್ ತಿಮ್ಮಪ್ಪ ಅವರ ಅನುಮತಿ ಸಿಕ್ಕರೆ ಸ್ವಂತ ಖರ್ಚು, ಸ್ವಹಿತಾಸಕ್ತಿಯಿಂದ ಶಾಸಕರು ಪ್ರವಾಸ ಕೈಗೊಳ್ಳಬಹುದಾಗಿದೆ.[ಅಮೆರಿಕ ಪ್ರವಾಸಕ್ಕೆ ಗ್ರೀನ್ ಸಿಗ್ನಲ್]

ಅಕ್ಕ ಸಮ್ಮೇಳನಕ್ಕೆ ಹೊರಟಿರುವ ಶಾಸಕರು, ಸಚಿವರ ಪಟ್ಟಿ ಇಂತಿದೆ:

ಅಮೆರಿಕಕ್ಕೆ ಹಾರಲಿರುವ ಶಾಸಕರು:
* ರಾಜೇಶ್ (ಜಗಳೂರು),
* ರಘುಮೂರ್ತಿ (ಚಳ್ಳಕೆರೆ),
* ರಫೀಕ್ ಅಹಮದ್ (ತುಮಕೂರು),
* ಷಡಕ್ಷರಿ (ತಿಪಟೂರು),
* ಎ.ಮಂಜು (ಅರಕಲಗೂಡು),
* ತನ್ವೀರ್ ಸೇಠ್ (ನರಸಿಂಹರಾಜ),
* ವಾಸು (ಚಾಮರಾಜ),
* ಎಂ.ಕೆ.ಸೋಮಶೇಖರ್ (ಕೃಷ್ಣರಾಜ),
* ಎಚ್.ಪಿ.ಮಂಜುನಾಥ್ (ಹುಣಸೂರು),
* ಹಂಪನಗೌಡ ಬಾದರ್ಲಿ (ಮಾನ್ವಿ),
* ಪ್ರತಾಪ್ ಗೌಡ (ಮಸ್ಕಿ),
* ಜಿ.ಟಿ.ಪಾಟೀಲ (ಬೀಳಗಿ),
* ಎಚ್.ವೈ.ಮೇಟಿ (ಬಾಗಲಕೋಟೆ),
* ವಿಜಯಾನಂದ ಕಾಶಪ್ಪನವರ್ (ಹುನಗುಂದ),
* ವಸಂತ ಬಂಗೇರಾ (ಬೆಳ್ತಂಗಡಿ),
* ಜೆ.ಆರ್.ಲೋಬೋ (ಮಂಗಳೂರು ನಗರ ದಕ್ಷಿಣ),
* ಮೊಹಿನುದ್ದೀನ್ ಬಾವಾ (ಮಂಗಳೂರು ನಗರ ಉತ್ತರ),
* ಪುಟ್ಟರಂಗಶೆಟ್ಟಿ (ಚಾಮರಾಜನಗರ),
* ನರೇಂದ್ರ (ಹನೂರು),
* ಈಶ್ವರಖಂಡ್ರೆ (ಬಾಲ್ಕಿ),
* ರಾಮಕೃಷ್ಣ (ಗುಲ್ಬರ್ಗ ದಕ್ಷಿಣ),
* ಅಜಯ್ ಸಿಂಗ್ (ಜೇವರ್ಗಿ),
* ಪ್ರಿಯಾಂಕ ಖರ್ಗೆ (ಚಿತ್ತಾಪುರ),
* ಪ್ರಸನ್ನಕುಮಾರ್ (ಶಿವಮೊಗ್ಗ),
* ಎಂ.ಪಿ.ರವೀಂದ್ರ (ಹರಪನಹಳ್ಳಿ),
* ವಡ್ನಾಳ್ ರಾಜಣ್ಣ (ಚನ್ನಗಿರಿ),
* ಡಿ.ಜಿ.ಶಾಂತನಗೌಡ (ಹೊನ್ನಾಳಿ),
*ವೆಂಕಟೇಶ್ (ಪಿರಿಯಾಪಟ್ಟಣ).

ಸಚಿವರುಗಳ ಪಟ್ಟಿ ಹಾಗೂ ಕ್ಷೇತ್ರ:
* ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್),
* ಎಚ್.ಆಂಜನೇಯ (ಹೊಳಲ್ಕೆರೆ),
* ದಿನೇಶ್ ಗುಂಡೂರಾವ್ (ಗಾಂಧಿನಗರ),
* ಎಚ್.ಸಿ.ಮಹದೇವಪ್ಪ (ಟಿ.ನರಸೀಪುರ),
* ಮಹದೇವ ಪ್ರಸಾದ್ (ಗುಂಡ್ಲುಪೇಟೆ),
* ಕಿಮ್ಮನೆ ರತ್ನಾಕರ (ತೀರ್ಥಹಳ್ಳಿ),
* ಉಮಾಶ್ರೀ (ತೇರದಾಳ),
* ಪಿ.ಟಿ.ಪರಮೇಶ್ವರ್ ನಾಯಕ್ (ಹೂವಿನ ಹಡಗಲಿ).

ವಿಶ್ವಕನ್ನಡ ಸಮ್ಮೇಳನದ ಬಗ್ಗೆ ಇನ್ನಷ್ಟು ವಿವರಗಳಿಗಾಗಿ ಅಕ್ಕ ವೆಬ್ ತಾಣದ ಲಿಂಕ್ ಕ್ಲಿಕ್ಕಿಸಿ

English summary
Akka world convention 2014 : More than 30 Congress and BJP legislators and a few ministers have plans to go abroad in the coming week to take part in the three-day World Kannada Conference organised by the Kannada organisation AKKA in San Francisco, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X