ಅಕ್ಕ ಸಮ್ಮೇಳನ : ಉದಯೋನ್ಮುಖ ಲೇಖಕರಿಗೆ ಆಹ್ವಾನ

ಈ ಕಾರ್ಯಕ್ರಮದ ನಿಯಮಗಳು ಕೆಳಗಿನಂತಿವೆ:
* ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕರು ಸ್ವತಃ ಉಪಸ್ಥಿತರಿರಬೇಕು.
* ಬಿಡುಗಡೆಗೊಳ್ಳುವ ಕೃತಿ ಆಗಸ್ಟ್ 1, 2013ರಿಂದ ಜುಲೈ 31, 2014ರ ಒಳಗೆ ಪ್ರಕಟಗೊಂಡಿರಬೇಕು.
* ಪುಸ್ತಕವು ಕನ್ನಡದಲ್ಲಿ ಪ್ರಕಟಗೊಂಡಿರಬೇಕು.
* ಕರ್ನಾಟಕದ ಹೊರಗಡೆ ನೆಲೆಸಿರುವ ಲೇಖಕರಿಗೆ ಆದ್ಯತೆ ನೀಡಲಾಗುವುದು.
* ಪುಸ್ತಕದ ಎರಡು ಪ್ರತಿಗಳನ್ನು ನಮಗೆ ಕಳುಹಿಸಬೇಕು; ಅವುಗಳು ನಮಗೆ ತಲುಪಿಸಲು ಕೊನೆಯ ದಿನಾಂಕ ಆಗಸ್ಟ್ 15, 2014. ಈ ದಿನಾಂಕದ ನಂತರ ನಮ್ಮನ್ನು ತಲುಪಿದ ಪುಸ್ತಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ.
* ಈ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಅಧಿಕಾರ ಸಾಹಿತ್ಯಿಕ ವೇದಿಕೆಗಿದೆ.
ಈ ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಲು ಇಚ್ಛಿಸುವಿರಾದರೆ, ನಮ್ಮ ಸಂಪರ್ಕ ವಿಳಾಸ : [email protected]
ಸಾಹಿತ್ಯಿಕ ವೇದಿಕೆ, ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014












Click it and Unblock the Notifications