'ಅಕ್ಕ' ಕಾರ್ಯನಿರ್ವಾಹಕ ಸಮಿತಿ ಜೊತೆ ಸಂದರ್ಶನ

By: ಸಂದರ್ಶನ : ಸರಿತಾ ನವಲಿ, ನ್ಯೂ ಜೆರ್ಸಿ
Subscribe to Oneindia Kannada

ನ್ಯೂ ಜೆರ್ಸಿಯ ಕಡಲತೀರ ಅಟ್ಲಾಂಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 2, 3, ಮತ್ತು 4ರಂದು ನಡೆಯಲಿರುವ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಗಳು ಕಳೆದ 6-8 ತಿಂಗಳುಗಳಿಂದ ನಡೆದಿದ್ದು, ಈಗ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ.

ಈ ಕನ್ನಡ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಲು ಹತ್ತಾರು ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. 'ಅಕ್ಕ' ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಕಾರ್ಯ ನಿರ್ವಾಹಕ ಸಮಿತಿ' (Program Management Office - PMO) ಕಾರ್ಯರೂಪಕ್ಕೆ ಬಂದಿದ್ದು, ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳನ್ನು ನಿಭಾಯಿಸುತ್ತಾ ಬಂದಿದೆ.[ಅಕ್ಕ ಸಮ್ಮೇಳನದ ಮೂಲಸೌಕರ್ಯ ತಂಡದೊಡನೆ ಚಿಟ್ ಚಾಟ್]

AKKA Kannada conference : Interview with Program Management Office

ಈ ಸಮಿತಿಯ ಇನ್ನೊಂದು ವಿಶೇಷತೆಯೇನೆಂದರೆ, 'ಸ್ತ್ರೀಶಕ್ತಿ'ಯ ದ್ಯೋತಕವೆಂಬಂತೆ ಈ ತಂಡದ ಸದಸ್ಯರೆಲ್ಲರೂ ಮಹಿಳೆಯರು! ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಈ ತಂಡದ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರೊಂದಿಗೆ ಮಾತುಕತೆ.

ಪ್ರಶ್ನೆ : 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಾರ್ಯ ನಿರ್ವಹಿಸಲು ರಚಿಸಲ್ಪಡುವ ಸಮಿತಿಗಳ ವಿವಿರ ನೋಡಿದಾಗ, ಇದೇ ಮೊದಲ ಬಾರಿಗೆ 'ಕಾರ್ಯ ನಿರ್ವಾಹಕ ಸಮಿತಿ'( Program Management Office - PMO) ಕಾರ್ಯರೂಪಕ್ಕೆ ಬಂದಿದೆ. ಈ ಸಮಿತಿ ರೂಪುಗೊಂಡಿದ್ದು ಹೇಗೆ? ಮತ್ತು ಈ ಸಮಿತಿಯ ಜವಾಬ್ದಾರಿಗಳೇನು?

ಉತ್ತರ : 'ಅಕ್ಕ' ಪ್ರಾರಂಭವಾದಾಗಿನಿಂದ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಆಧುನಿಕತೆಯೊಂದಿಗೆ ಮೇಳೈಸಿಕೊಂಡು ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದೆ. ಇದು ಒಂದು ಸಣ್ಣ ಸಂಸ್ಥೆಯಾಗಿ ಆರಂಭಗೊಂಡು, ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ ಎನ್ನುವುದು ಸಂತೋಷದ ವಿಷಯವಲ್ಲವೇ?[ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]

AKKA Kannada conference : Interview with Program Management Office

ಆದರೆ ಎಲ್ಲೋ ನಡೆಯುವ ಸಣ್ಣದೊಂದು ಪ್ರಮಾದದಿಂದ, ಅದೆಷ್ಟೋ ಸಮಿತಿಗಳ, ಸ್ವಯಂ ಸೇವಕರುಗಳ ಶ್ರಮಕ್ಕೆ ಚ್ಯುತಿ ಬಂದೊದಗುವ ಸಾಧ್ಯತೆಗಳಿವೆ. ಹಾಗಾಗಿ ಈ ಬಾರಿ, ಈ 'ಕಾರ್ಯ ನಿರ್ವಾಹಕ ಸಮಿತಿ' ರೂಪಗೊಂಡಿದ್ದು, ಹೊಸ ಯೋಜನೆಗಳನ್ನು, ಪ್ರಸ್ತಾವನೆಗಳನ್ನು ಎಲ್ಲ ತಂಡಗಳಿಗೆ ನಿರ್ದೇಶಿಸುವ ಉದ್ದೇಶ ನಮ್ಮ ಸಮಿತಿಯದ್ದಾಗಿದೆ. ಈ ತಂಡದ ಕಾರ್ಯವೈಖರಿಯಿಂದ ಉಳಿದೆಲ್ಲ ಸಮಿತಿಗಳಿಗೆ ನೆರವು ದೊರಕ್ಕಿದ್ದು, ಈ ಬಾರಿಯ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನೆರವೇರುವುದೆಂದು ಆಶಿಸುತ್ತೇವೆ.[ಕ್ಕ ಸಮ್ಮೇಳನ - ವೇದಿಕೆಯ ಉಸ್ತುವಾರಿ ಕೃಷ್ಣ ಪ್ರಸಾದ್ ಸಂದರ್ಶನ]

ಪ್ರಶ್ನೆ : 'ಅಕ್ಕ' ಸಮ್ಮೇಳನದ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಸಮಿತಿಗಳಿರುತ್ತವೆ, ಕೆಲಸದ ಒತ್ತಡಗಳಿರುತ್ತವೆ. ಈ ನಿಟ್ಟಿನಲ್ಲಿ ನಿಮ್ಮ ಸಮಿತಿಯ ಕಾರ್ಯವೈಖರಿ ಹೇಗಿತ್ತು?

ಉತ್ತರ : ಪರಸ್ಪರ ಮಾತುಕತೆ ಮತ್ತು ಕಾರ್ಯ ನಿರ್ದೇಶನದಲ್ಲಿನ ಪಾರದರ್ಶಕತೆಗಳಿಂದ ಈ ಎಲ್ಲ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ಬಾರಿ, ವ್ಯವಸ್ಥಿತ ಸಮಿತಿ ರಚನೆ ಮತ್ತು ಕಾರ್ಯಾಂಗ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ವಯಂಸೇವಕರೊಂದಿಗೆ ತಿಂಗಳಿಗೊಮ್ಮೆ ಸಭೆ ಏರ್ಪಡಿಸಲಾಗುತ್ತಿತ್ತು. ಆಯಾ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ಸಭೆ ನಡೆಸಿ ಮಾಹಿತಿಯನ್ನು ಪಡೆಯಲಾಗುತ್ತಿತ್ತು. ಅಮೆರಿಕದ ಪೂರ್ವ ಕರಾವಳಿಯ ವಿವಿಧ ಸ್ಥಳಗಳಿಂದ ಸ್ವಯಂಸೇವಕರು ಈ ಸಭೆಗಳಲ್ಲಿ ಭಾಗವಹಿಸುತ್ತಿದ್ದರು ಎಂಬುದು ಸಂತಸದ ವಿಷಯ.

AKKA Kannada conference : Interview with Program Management Office

ಪ್ರಶ್ನೆ : ಒಂದು ವೈಯಕ್ತಿಕ ಪ್ರಶ್ನೆ, ಈ ಎಲ್ಲ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಲು ಬಹಳಷ್ಟು ಶ್ರದ್ಧೆ ಮತ್ತು ಸಮಯದ ಅವಶ್ಯಕತೆಯಿದೆ. 'ಅಕ್ಕ' ಮತ್ತು ಮನೆಯಲ್ಲಿನ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಿದ್ದೀರಾ?

ಉತ್ತರ : ನಮ್ಮ ತಂಡದ ಸದಸ್ಯರೆಲ್ಲರೂ ಬಹಳಷ್ಟು ಜವಾಬ್ದಾರಿಯುತ ಕೆಲಸಗಳನ್ನು ಒಟ್ಟಿಗೇ ನಿಭಾಯಿಸಬಲ್ಲ(Multitasking) ಚಾಕಚಕ್ಯತೆ ಹೊಂದಿದ್ದಾರೆ. ಕುಟುಂಬದ ಸದಸ್ಯರ, ಸ್ನೇಹಿತರ ಸಹಕಾರದಿಂದಲೇ ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗಿದೆ. ನಮ್ಮ, ನಮ್ಮ ಕುಟುಂಬದ ಸದಸ್ಯರೂ 'ಅಕ್ಕ' ಸಮ್ಮೇಳನದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ, ಮನೆಯಲ್ಲಿನ ಜವಾಬ್ದಾರಿಗಳನ್ನು ನಮ್ಮಲ್ಲಿಯೇ ಹಂಚಿಕೊಂಡಿದ್ದು ಉಪಯೋಗವಾಯಿತು.

ಪ್ರಶ್ನೆ : ನಿಮ್ಮ ತಂಡದ ಸದಸ್ಯರನ್ನು ಪರಿಚಯಿಸಿ.

ಉತ್ತರ : ನಮ್ಮ ತಂಡದ ಪರಿಚಯ ಹೀಗಿದೆ. ಪ್ರಿಯಾ ಪಾಟೀಲ, ಸುಚೇತಾ ಭಂಡಾರಿ, ಅನಿತಾ, ರೂಪಶ್ರೀ ಮೇಲುಕೋಟೆ ಮತ್ತು ಹಿಮಬಿಂದು ಗೌಡ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First time in the history of AKKA World Kannada Conference, Program Management Office - PMO has been established to look after overall preparations for Atlantic City sammelana to be held from September 2. An interview with President and Vice-president of PMO.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ