ಅಕ್ಕ ಸಮ್ಮೇಳನದ ಮೂಲಸೌಕರ್ಯ ತಂಡದೊಡನೆ ಚಿಟ್ ಚಾಟ್

By: ಸಂದರ್ಶನ : ಅನಿಲ್ ಭಾರದ್ವಾಜ್
Subscribe to Oneindia Kannada

ನ್ಯೂ ಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 2ರಿಂದ ಮೂರು ದಿನಗಳ ಕಾಲ ನಡೆಯಲಿರುವ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಗಳು ಬಿರುಸಾಗಿ ನಡೆಯುತ್ತಿವೆ. ಈ ಭಾರಿ ಸಮಾವೇಶಕ್ಕೆ ಸಾವಿರಾರು ಮಂದಿ ಕನ್ನಡಿಗರು ಹಾಜರಾಗುತ್ತಾರೆ. ಹಾಗಾಗಿ ಅಟ್ಲಾಂಟಿಕ್‌ ಸಿಟಿ ಸಮಾವೇಶದ ಅಂಗಣದಲ್ಲಿ ಕಲ್ಪಿಸಿಕೊಡುವ ಮೂಲಸೌಕರ್ಯಗಳು ಸಮ್ಮೇಳನದ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಮೂಲಸೌಕರ್ಯ ಸಮಿತಿಯ ಅಧ್ಯಕ್ಷರಾದ ಬಾಬು ಕೀಲರ ಹಾಗೂ ಉಪಾಧ್ಯಕ್ಷರಾದ ಉಮೇಶ್ ಭಟ್ ಅವರೊಂದಿಗೆ ಸಣ್ಣ ಮಾತುಕತೆ.

AKKA conference : Chit chat with infrastructure committee

ಪ್ರಶ್ನೆ : ಈ ಸರದಿಯಲ್ಲಿ ಅಕ್ಕ ಸಂಸ್ಥೆ ಸಮಾವೇಶಕ್ಕೆ ಅಟ್ಲಾಂಟಿಕ್‌ ಸಿಟಿಯನ್ನು ಅತಿಥೇಯ ನಗರವಾಗಿ ಆಯ್ಕೆಮಾಡಲು ಕಾರಣಗಳೇನು?

ಉತ್ತರ : ನಾವು ಹುಡುಕುತ್ತಿದ್ದ ಸಭಾಂಗಣ ಅನುಕೂಲವಾಗಿ ಒಂದೇ ಛಾವಣಿಯಡಿಯಲ್ಲಿ ವಿವಿಧವಾಗಿ ವಿಭಜಿತವಾಗುವಂತಿರಬೇಕಲ್ಲದೆ, ಒಂದೇ ಅಂತಸ್ತಿನಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯುವಂತೆ ಇರಬೇಕಾಗಿತ್ತು. ಅಟ್ಲಾಂಟಿಕ್‌ ಸಿಟಿ ಸಮಾವೇಶದ ಅಂಗಣದಲ್ಲಿ ಸುಮಾರು 5 ಲಕ್ಷ ಚದರದಷ್ಟು ವಿಶಾಲ ಜಾಗವಿದ್ದು, ಇದು ಅಟ್ಲಾಂಟದಿಂದ ಬಾಸ್ಟನ್ ವರೆಗೆ ಇದೇ ಅತೀ ದೊಡ್ಡ ಅಂಗಣವಾಗಿದೆ. [ಅಕ್ಕ ಸಮ್ಮೇಳನದಲ್ಲಿ ಬಾಯಲ್ಲಿ ನೀರೂರಿಸುವ ಭಕ್ಷ್ಯಭೋಜ್ಯ]

ಈ ಅಂಗಣವನ್ನು ಐದು ಪ್ರತ್ಯೇಕ ಅಂಗಣಗಳಾಗಿ ವಿಭಜಿಸಬಹುದಿದ್ದು, ಏಕಕಾಲೀನವಾಗಿ ಕಾರ್ಯಕ್ರಮಗಳನ್ನು ಜರುಗಿಸಬಹುದಲ್ಲದೆ, ಊಟ-ತಿಂಡಿಯ ವ್ಯವಸ್ಥೆಯನ್ನು ಅದೇ ಮಟ್ಟದಲ್ಲಿ ಮಾಡಬಹುದು. ಇದರಿಂದಾಗಿ ಬರುವ ಅತಿಥಿಗಳಿಗೆ ಆಗಬಹುದಾದ ಅನನುಕೂಲವನ್ನು ತಪ್ಪಿಸಲಾಗುತ್ತದೆ. ಇದಕ್ಕಿಂತ ಮುಖ್ಯವಾಗಿ, ಈ ಸಭಾಂಗಣ ಪಕ್ಕದಲ್ಲೇ ಇರುವ ಸೊಗಸಾದ ಶೆರಟನ್ ಹೋಟೆಲ್ ಜೊತೆ ಗಾಳಿಸೇತುವೆಗಳಿಂದ ಕೂಡಿಸಲ್ಪಟ್ಟಿದೆ. ಆದ ಕಾರಣ ಸಂಚಾರ, ವಾಹನ ನಿಲ್ದಾಣ, ಸ್ನೇಹಪರವಲ್ಲದ ಹವಾಮಾನ, ರಾತ್ರಿ ಹೊತ್ತಿನ ಸುರಕ್ಷತೆ ಮುಂತಾದವುಗಳ ಬಗ್ಗೆ ಚಿಂತಿಸದೆ, ಅತಿಥಿಗಳು ಮನೋರಂಜನೆ, ಊಟ ಮೊದಲಾದವನ್ನು ಸವಿಯಬಹುದಾಗಿದೆ. [ಅತಿಥಿಗಳ ಆದರಾತಿಥ್ಯಕ್ಕೆ 'ಅಕ್ಕ' ಆತಿಥ್ಯ ತಂಡ ಸಜ್ಜು]

AKKA conference : Chit chat with infrastructure committee

ಅಲ್ಲದೆ, ಅಟ್ಲಾಂಟಿಕ್‌ ಸಿಟಿ ಸಮಾವೇಶದ ಅಂಗಣದಲ್ಲಿ 45ಕ್ಕೂ ಹೆಚ್ಚು ಆಡಿಯೋ-ವಿಡಿಯೋ ಹಾಗೂ ವಿವಿಧ ಸಂಪರ್ಕ ಸಾಧನಗಳಿಂದ ಸಜ್ಜಾದ ಚರ್ಚಾ ಕೊಠಡಿಗಳಿದ್ದು, ಅವನ್ನು ಪರಸ್ಪರ ಸಮಾಗಮಗಳು, ಸಿದ್ದವಸ್ತು ಪ್ರದರ್ಶನ ಇತ್ಯಾದಿಗಳಿಗೆ ಉಪಯೋಗಿಸಿಕೊಳ್ಳಬಹುದು. ಒಂದು ಅತಿ ಮುಖ್ಯವಾದ ಅಂಶವೆಂದರೆ ಇಲ್ಲಿ 5,000ಕ್ಕೂ ಹೆಚ್ಚು ಜನರಿಗೆ ಅಡುಗೆ ಮಾಡಲು ಬೇಕಾದ ಸುಸಜ್ಜಿತ ಪಾಕ ಶಾಲೆ (ಅಡಿಗೆ ಮನೆ) ಇದೆ.

ಪ್ರ: ಇತರೆ ನಗರ ಹಾಗೂ ರಾಜ್ಯಗಳೊಂದಿಗೆ ಸಾರಿಗೆ ಸಂಪರ್ಕ ಹೇಗಿದೆ?

ಉ : ಅಟ್ಲಾಂಟಿಕ್‌ ಸಿಟಿ ಭೂ, ರೈಲು ಹಾಗೂ ವಿಮಾನ ಸಂಚಾರಗಳಿಗೆ ಅನುಕೂಲಕರವಾಗಿದೆ. ಕಾರಿನಿಂದ 20 ನಿಮಿಷವಷ್ಟೇ ದೂರವಿರುವ ಅಟ್ಲಾಂಟಿಕ್‌ ಸಿಟಿ ವಿಮಾನ ನಿಲ್ದಾಣಕ್ಕೆ ಬೇಕಾದಷ್ಟು ವಿಮಾನಗಳು ಚಾಲನೆಯಲ್ಲಿವೆ. ನ್ಯೂಜೆರ್ಸಿ ಟ್ರ್ಯಾನ್ಜಿಟ್ ರೈಲುಗಳು ನೇರವಾಗಿ ಅಟ್ಲಾಂಟಿಕ್‌ ಸಿಟಿಗೆ ರೈಲು ಸಂಪರ್ಕ ನೀಡುತ್ತದೆ. ['ಅಕ್ಕ' ಸಮ್ಮೇಳನ ನೋಂದಾವಣಿ ತಂಡದ ಜೊತೆ ಮಾತುಕತೆ]

AKKA conference : Chit chat with infrastructure committee

ಪ್ರ : ಸುತ್ತಮುತ್ತಲಿರುವ ಆಕರ್ಷಣೆಗಳು ಯಾವುವು?

ಉ : ಅಟ್ಲಾಂಟಿಕ್‌ ಸಿಟಿಯಲ್ಲಿ ಸದಾ ಯಾವುದಾದರೊಂದು ವಿಶೇಷ ನಡೆಯುತ್ತಲೇ ಇರುತ್ತದೆ. ಇದು 'The city that is always turned on' ಎಂದೇ ಪ್ರಸಿದ್ಧವಾಗಿದೆ. 'ಹೊಸದು' ಎಂಬುವುದು ಅಟ್ಲಾಂಟಿಕ್‌ ಸಿಟಿಯಲ್ಲಿ ಯಾವಾಗಲೂ ಗುಂಗುಡುತ್ತಿರುತ್ತದೆ - ಹೊಸ ಹೋಟೆಲ್ ರೂಮುಗಳು, ಕೆಸಿನೋಗಳು, ಶಾಪ್ಪಿಂಗ್ ಮಳಿಗೆಗಳು, ಬಹಳಷ್ಟು ಪ್ರಸಿದ್ಧ ರೆಸ್ಟೋರೆಂಟುಗಳು ಇವೆ. ಅತಿಥಿಗಳು ದಿನದ ಕಾರ್ಯಕ್ರಮಗಳು ಮುಗಿದ ನಂತರ ಅಥವಾ ಸಮ್ಮೇಳನದ ನಂತರ ಅವರ ವಿರಾಮಕಾಲವನ್ನು ಹೆಚ್ಚಿಸಿಕೊಳ್ಳಬಹುದು. ಅಕ್ಕ ಭೇಟಿಕಾರರ ಕೇಂದ್ರದಲ್ಲಿ 24/7 ಹೆಚ್ಚಿನ ಮಾಹಿತಿ ಮತ್ತು ನೆರವು ಒದಗಿಸಲ್ಪಡುತ್ತದೆ.

ಪ್ರ : ಮೂಲಸೌಕರ್ಯ ಸಮಿತಿಯ ಮುಖ್ಯ ಪಾತ್ರಗಳೇನು?

ಉ : ಮೊದಲಿಗೆ, ಮೂಲಸೌಕರ್ಯ ಸಮಿತಿಯಲ್ಲಿ 5 ಸದಸ್ಯರುಗಳಿದ್ದು ಅವರವರ ವೃತ್ತಿಗಳಲ್ಲಿ ಕುಶಲಿಗಳಾಗಿದ್ದಾರೆ - ಐಟಿ, ಸಿವಿಲ್ ಇಂಜಿನೀಯರು, ಲೆಕ್ಕ-ಪತ್ರ ಮುಂತಾದವುಗಳು. ಮಿಕ್ಕೆಲ್ಲಾ ಸಮಿತಿಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿ ಅವರ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು. ಮಿಗಿಲಾಗಿ, ಬರುವ ಅತಿಥಿಗಳ ಸೇವೆ ಮಾಡುವುದು ನಮ್ಮ ಆದ್ಯ ಹೊಣೆ. [ಅಕ್ಕ ಸಮ್ಮೇಳನದ ಸೂತ್ರಧಾರಿ ರಾಜ್ ಪಾಟೀಲ್ ಸಂದರ್ಶನ]

AKKA conference : Chit chat with infrastructure committee

ಉದಾಹರಣೆಗೆ, ಮನೋರಂಜನೆ ಸಮಿತಿಗೆ ನಮ್ಮ ಕಡೆಯಿಂದ ವೇದಿಕೆಯ ಸಜ್ಜು, ಕುರ್ಚಿಗಳು, ಧ್ವನಿಗೆ ಸಂಬಂಧಿಸಿದ ಸಲಕರಣೆಗಳು ಇತ್ಯಾದಿಗಳನ್ನು ಒದಗಿಸುವ ಹೊಣೆ. ಮೂಲಸೌಕರ್ಯ ಸಮಿತಿಯು ವಿವಿಧ ಸಮಿತಿಗಳಲ್ಲಿ ಅನ್ಯೋನ್ಯ ಸಂಬಂಧ ಕಲ್ಪಿಸಿ, ಮೂರು ದಿನವೂ ಪ್ರತಿಯೊಂದು ಕಾರ್ಯಕ್ರಮವು ಯಾವ ಅಡಚಣೆಗಳು ಇಲ್ಲದೆ ಆರಾಮವಾಗಿ ನಡೆಯುವಂತೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಮೂಲಸೌಕರ್ಯ ಸಮಿತಿಯು ಕಳೆದ 6 ತಿಂಗಳಿಂದ ಇತರೆ ಸಮಿತಿಗಳೊಂದಿಗೆ ಕೂಲಂಕುಶವಾಗಿ ಮಾತುಕತೆಗಳನ್ನು ನಡೆಸಿ, ಈ ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದೆ.

ಪ್ರ : ಕಳೆದ ಸಮಾವೇಶಗಳ ಅನುಭವದಿಂದ ಕಲಿತ ನೀತಿ-ಪಾಠಗಳೇನು?

ಉ : ತಪ್ಪುಗಳೇ ಯಶಸ್ಸು ತಲುಪಲು ಇರುವ ಕಲ್ಲಿನ ಸಾಲು. ನಾವು ಹಿಂದೆ ಮಾಡಿದ ತಪ್ಪುಗಳಿಂದ ಸಾಕಷ್ಟು ಕಲಿತ್ತಿದ್ದೇವೆ. ಕಳೆದ ಕಂತುಗಳಲ್ಲಿ 4,000ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡುವಲ್ಲಿ ಲೋಪ-ದೋಷಗಳಿತ್ತು. ಈ ಬಾರಿ ಭೋಜನಶಾಲೆಯಲ್ಲಿ 2,500ಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಇರಬಹುದಾಗಿದ್ದು, ಕನಿಷ್ಟ 16 ಊಟ ವಿತರಿಸುವ ಸ್ಥಳಗಳನ್ನು ಇರಿಸಿದ್ದೇವೆ. ಹಾಗೆಯೇ, ಊಟದ ಪಟ್ಟಿ, ಕೇಟರರ್, ಆಡಿಯೋ-ವಿಡಿಯೋ, ಅಲಂಕರಣ ಇತ್ಯಾದಿಗಳನ್ನು ಉತ್ಕೃಷ್ಟವಾದ ಮತ್ತು ಯೋಗ್ಯವಾದ ಬೆಲೆಯಲ್ಲಿ ಪೂರೈಸುವುದು ನಮ್ಮ ಗುರಿಯಾಗಿದೆ. [ಅಟ್ಲಾಂಟಿಕ್ ಸಿಟಿ ಅಕ್ಕ ಕನ್ನಡ ಸಮ್ಮೇಳನದಲ್ಲಿ ಹಲವಾರು ವಿಶೇಷತೆ]

AKKA conference : Chit chat with infrastructure committee

ಮೂಲಸೌಕರ್ಯ ಸಮಿತಿಯ ಸದಸ್ಯರು:
ಬಾಬು ಕೀಲರ - ಅಧ್ಯಕ್ಷರು
ಉಮೇಶ್ ಭಟ್ - ಉಪಾಧ್ಯಕ್ಷರು
ಚಂದ್ರು ಆರಾಧ್ಯ - ಕಾರ್ಯನಿರ್ವಾಹಕ ಸಮಿತಿ ಸದಸ್ಯರು
ತಿರು ಕೌಡ್ಲೆ - ಸದಸ್ಯರು
ಪ್ರಶಾಂತ್ ಎಮ್ - ಸದಸ್ಯರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
9th AKKA World Kannada Conference, Atalnta City, New Jersey, USA. A chit chat with infrastructure committee. The committee has taken up the challenge to provide best amenitities and help to make 3 days AKKA conference, which is starting from September 2.
Please Wait while comments are loading...