ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಉತ್ಸವದಲ್ಲಿ ಕರ್ನಾಟಕ ಜನಪದ ನೃತ್ಯ ವೈಭವ

By Prasad
|
Google Oneindia Kannada News

ಸಿಂಗಪುರದಲ್ಲಿ ನವೆಂಬರ್ 6 ಮತ್ತು 7ರಂದು ನಡೆಯಲಿರುವ ಕರ್ನಾಟಕ ವೈಭವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಮೂರು ದಿನಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ನಡೆಯುತ್ತಿರುವುದರಿಂದ ಕನ್ನಡ ಸಮ್ಮೇಳನಕ್ಕೆ ಹೆಚ್ಚಿನ ಮೆರಗು ಮತ್ತು ಬೆಳಕು.

ಸಿಂಗಪುರದಲ್ಲಿ ದೀಪಾವಳಿ ಹಬ್ಬದ ಆಚರಣೆಯ ವೈಭೋಗವೇ ಬೇರೆಯ ರೀತಿಯದು. ದೀಪಾವಳಿ ಆಚರಣೆಯ ಭಾಗವಾಗಿ ನಡೆಯುವ 'ಉತ್ಸವ 2010'ದಲ್ಲಿ ಇಡೀ ಸಿಂಗಪುರವೇ ಸಿಂಗರಿಸಿಕೊಂಡು ನಿಲ್ಲುತ್ತದೆ. ಅಕ್ಟೋಬರ್ 30ರಂದು ಸಿಂಗಪುರದ ಹಿಂದೂಗಳೆಲ್ಲ ಸಡಗರದಿಂದ ಬೀದಿಬೀದಿಗಳಲ್ಲಿ ಸೇರಿ ಉತ್ಸವ 2010ರನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.

ಹೆರಿಟೇಜ್ ಅಸೋಸಿಯೇಶನ್ ಮತ್ತು ಭಾರತೀಯ ಅಂಗಡಿ ಮಾಲಿಕರ ಸಹಯೋಗದೊಂದಿದೆ ಹಿಂದೂ ಎಂಡೋಮೆಂಟ್ ಬೋರ್ಡ್ ದೀಪಾವಳಿ ಉತ್ಸವವನ್ನು ಆಯೋಜಿಸಿದೆ. ರಂಗ್ಬಿರಂಗಿ ದೀಪಗಳಿಂದ ಝಗಮಗಿಸುವ ಬೀದಿಬೀದಿಗಳಲ್ಲಿ ಅಂದು ಸಂಜೆ ನಡೆಯಲಿರುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕ ವೈಭವ ಕೂಡ ಕರ್ನಾಟಕ ಜನಪದದ ಶ್ರೀಮಂತಿಕೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದೆ. ಈ ಮೆರವಣಿಗೆಯಲ್ಲಿ ತಮಿಳುನಾಡು ಸರಕಾರ ಮತ್ತು ಶ್ರೀಲಂಕಾ ಪ್ರಾಯೋಜಿಸಿರುವ ತಂಡಗಳು ಕೂಡ ಭಾಗವಹಿಸುತ್ತಿವೆ.

ಕರ್ನಾಟಕ ವೈಭವದ ಜನಪದ ನೃತ್ಯ : ಡಾ. ಸಂಜಯ್ ಶಾಂತಾರಾಮ್ ಅವರು ಸಂಯೋಜಿಸಿರುವ ಕರ್ನಾಟಕ ಜನಪದ ನೃತ್ಯವನ್ನು ಕರ್ನಾಟಕ ವೈಭವ ಈ ಬಾರಿ ಪ್ರಸ್ತುತಪಡಿಸಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡಿಗರು ಮತ್ತು ಕನ್ನಡೇತರರಿಗೆ ಡಾ. ಸಂಜಯ್ ಈಗಾಗಲೆ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದಾರೆ. ಇದರಲ್ಲಿ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಸುಗ್ಗಿ ಗೀತ, ಕೋಲಾಟ ಮತ್ತು ಯಕ್ಷಗಾನಗಳು ಸಿಂಗಪುರಿಗರನ್ನು ರಂಜಿಸಲಿವೆ.

ಈ ನೃತ್ಯ ಸಂಯೋಜನೆಗೆ ಕರ್ನಾಟಕ ಜನಪದ ನೃತ್ಯ ವೈಭವ ಎಂದು ನಾಮಕರಣ ಮಾಡಲಾಗಿದ್ದು, ಅಕ್ಟೋಬರ್ 30ರ ಶನಿವಾರ, ಸಂಜೆ 7ರಿಂದ 10ರವರೆಗೆ ನಡೆಯಲಿರುವ ಸಿಂಗಪುರ ದೀಪಾವಳಿ ಉತ್ಸವವನ್ನು 15 ಸಾವಿರಕ್ಕೂ ಹೆಚ್ಚಿನ ಸ್ಥಳೀಯ ಮತ್ತು ವಿದೇಶಿಗರು ವೀಕ್ಷಿಸಲಿದ್ದಾರೆ. ಈ ಮೆರವಣಿಗೆ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆಯಲಿದೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X