ಇದು ಕರ್ನಾಟಕ ಬ್ರದರ್ಸ್ ಬಜೆಟ್ ಎಂದ ಬಿಜೆಪಿ, ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಮೀಸಲಿರಿಸಿದ್ದೆಷ್ಟು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಿರುವ 2026 - 2027ನೇ ಸಾಲಿನ ಬಜೆಟ್ ಕರ್ನಾಟಕದ ಬಜೆಟ್ ಅಲ್ಲ ಬ್ರದರ್ಸ್ ಬಜೆಟ್ ಎಂದು ಬಿಜೆಪಿ ಆರೋಪ ಮಾಡಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಭಾರೀ ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ.
ಅಲ್ಪಸಂಖ್ಯಾತರ ವಸತಿ ಶಾಲೆಗಳ ಆರಂಭ
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು
ಅಲ್ಪಸಂಖ್ಯಾಂತ ನಿರ್ಗತಿಕರಿಗೆ ಎರಡು ವೃದ್ಧಾಶ್ರಮ ಆರಂಭ
ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ 3 ಲಕ್ಷ ರೂ. ವರೆಗೆ ಸಹಾಯಧನ
ಅಲ್ಪಸಂಖ್ಯಾತ ಮಹಿಳೆಯರ ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆ
ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ
ಅಲ್ಪಸಂಖ್ಯಾತ ನಿಗಮದ ಸಾಲದ ಬಡ್ಡಿ ಮನ್ನಾ
ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ 4 ಹಾಸ್ಟೆಲ್
ಅಲ್ಪಸಂಖ್ಯಾತ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ 50 ಸಾವಿರ ರೂ.

ವಕ್ಫ್ ಆಸ್ತಿ ಅಭಿವೃದ್ಧಿಗೆ ಹಣ ಮೀಸಲು
ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ ಎಂದು ಬಿಜೆಪಿ ಟೀಕೆ ಮಾಡಿದೆ.
ಸಾಲಗಾರ ಸಿದ್ದರಾಮಯ್ಯ ಎಂದ ಬಿಜೆಪಿ
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಲ ಪರ್ವತದೆತ್ತರಕ್ಕೆ ಬೆಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯವರು ಈ ಬಾರಿಯ ಬಜೆಟ್‌ನಲ್ಲಿ 1.32 ಲಕ್ಷ ಕೋಟಿ ಸಾಲ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದ ಒಟ್ಟು ಸಾಲ ಈಗ 8,24,389 ಲಕ್ಷ ಕೋಟಿ ದಾಟಲಿದೆ.
2024-25 ನೇ ಸಾಲಿನಲ್ಲಿ: 1,05,246 ಕೋಟಿ ಸಾಲ
2025-26 ನೇ ಸಾಲಿನಲ್ಲಿ: 1.16 ಲಕ್ಷ ಕೋಟಿ ಸಾಲ
2026-27 ಸಾಲಿನಲ್ಲಿ: 1.32 ಲಕ್ಷ ಕೋಟಿ ಸಾಲ
ಕನ್ನಡಿಗರ ಮೇಲೆ ಸಾಲದ ಹೊರೆ ಹೇರಿದ್ದೇ ಈ ಸ್ವ-ಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನವರ ಸಾಧನೆ ಎಂದು ಬಿಜೆಪಿ ಟೀಕೆ ಮಾಡಿದೆ.
ಜೆಡಿಎಸ್ ಹೇಳಿದ್ದೇನು
ಇನ್ನು ಕರ್ನಾಟಕ ಬಜೆಟ್ ಬಗ್ಗೆ ಜೆಡಿಎಸ್ ಪಕ್ಷ ಸಹ ಟೀಕೆ ಮಾಡಿದೆ. ಸಾಲ, ಸಾಲ, ಸಾಲ 2026-27ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲೆಕ್ಕ ಪ್ರತಿಯೊಬ್ಬ ಕನ್ನಡಿಗರ ತಲೆ ಮೇಲೆ ಸಾಲ ಪಕ್ಕಾ ಎಂದು ಟೀಕೆ ಮಾಡಿದೆ.
ಹಳೇ ಸಾಲ ತೀರಿಸಲು ಹೊಸ ಸಾಲ
ಸಿದ್ದರಾಮಯ್ಯ ಅವರು ಹಳೆಯ ಸಾಲವನ್ನು ತೀರಿಸಲು ಹೊಸ ಸಾಲ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪ ಮಾಡಿದೆ. ಸಾಲ ಎತ್ತುವುದನ್ನೇ ಬಂಡವಾಳ ಮಾಡಿಕೊಂಡಿರುವ ಸಾಲಗಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಘೋಷಿಸಿದ್ದಾರೆ.
ಅದಕ್ಷ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕರ್ನಾಟಕ ರಾಜ್ಯದ ಒಟ್ಟು ಸಾಲ 8,24,389 ಲಕ್ಷ ಕೋಟಿ ರೂ. ಏರಿಕೆಯಾಗಿದೆ.
👉 2026-27ನೇ ಸಾಲಿನಲ್ಲಿ - ₹1.32 ಲಕ್ಷ ಕೋಟಿ ಸಾಲ
👉 2025-26ನೇ ಸಾಲಿನಲ್ಲಿ - ₹1.16 ಲಕ್ಷ ಕೋಟಿ ಸಾಲ
👉 2024-25ನೇ ಸಾಲಿನಲ್ಲಿ - ₹1.05 ಲಕ್ಷ ಕೋಟಿ ಸಾಲ
ಸಿದ್ದರಾಮಯ್ಯರ ಆರ್ಥಿಕ ಅಶಿಸ್ತಿನಿಂದ ಕರ್ನಾಟಕದ ಅಭಿವೃದ್ಧಿ ಹಳಿತಪ್ಪಿದೆ ಎಂದು ಜೆಡಿಎಸ್ ಟೀಕೆ ಮಾಡಿದೆ.












Click it and Unblock the Notifications