45,000 ಕೋಟಿ ರೂಪಾಯಿ ಸಂಗ್ರಹ ಗುರಿ, ಮದ್ಯಪ್ರಿಯರಿಗೆ ದಿಢೀರ್ ಎದುರಾಯ್ತು ಆಘಾತ... Karnataka Budget 2026

ಎಣ್ಣೆ ಅಂದ್ರೆ ಮದ್ಯ ಇಲ್ಲದೆ ಹಲವರು ರಾತ್ರಿ ನಿದ್ದೆ ಮಾಡೋಕೆ ಆಗಲ್ಲ ಅಂತಾರೆ, ಅದರಲ್ಲೂ ಮದ್ಯ ಮಾರಾಟ ಮೂಲಕವೇ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಹಣವನ್ನು ಸಂಗ್ರಹ ಮಾಡುತ್ತವೆ. ಹೀಗೆ ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳ ಪ್ರಮುಖ ಆದಾಯದ ಮೂಲ ಇದೇ ಮಧ್ಯ ಆಗಿದ್ದು, ಸರ್ಕಾರ ನಡೆಯುತ್ತಿರುವುದೇ ನಮ್ಮಿಂದ ಅಂತಾನೂ ತಮಾಷೆಗೆ ಮದ್ಯಪ್ರಿಯರು ವಾದ ಕೂಡ ಮಾಡುತ್ತಾರೆ. ಹೀಗಿದ್ದಾಗ 2026-27ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಬರೋಬ್ಬರಿ 45,000 ಕೋಟಿ ರೂಪಾಯಿ ಆದಾಯ ಮದ್ಯ ಮಾರಾಟದ ಮೂಲಕ ಸಂಗ್ರಹ ಮಾಡುವ ಗುರಿ ಹಾಕಿಕೊಂಡಿದೆ. ಹೀಗೆ ಇದ್ದಾಗ ದಿಢೀರ್ ಮದ್ಯಪ್ರಿಯರಿಗೆ ಆಘಾತವೇ ಎದುರಾಗಿದೆ.

ಕರ್ನಾಟಕ ಸರ್ಕಾರ 2026-27ನೇ ಸಾಲಿನಲ್ಲಿ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಈ ಮೂಲಕ ರಾಜ್ಯದ ಜನರಿಗೆ ಹಲವು ಯೋಜನೆ ನೀಡಲು ಮುಂದಾಗಿದೆ. ಕರ್ನಾಟಕದ ಆರ್ಥಿಕ ಸ್ಥಿತಿಗತಿಗಳ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರು ಈಗ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯದ ಒಟ್ಟು ಸಾಲ ಸುಮಾರು 8.24 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ತಿಳಿಸಿದ್ದಾರೆ. ಹಾಗೇ ಗಣಿಗಾರಿಕೆ ಮೂಲಕ ಸರ್ಕಾರಕ್ಕೆ ಸುಮಾರು 11,000 ಕೋಟಿ ರೂಪಾಯಿ ಆದಾಯ ದೊರಕುವ ನಿರೀಕ್ಷೆ ಇದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಇಂತಹ ಸಮಯದಲ್ಲೇ, ಮದ್ಯಪ್ರಿಯರಿಗೆ ದಿಢೀರ್ ಆಘಾತ ಎದುರಾಗಿ ಮದ್ಯದ ಬೆಲೆ ಏರಿಕೆ ಕೂಡ ಫಿಕ್ಸ್ ಆಗಿದೆ.

Karnataka Budget 2026

45,000 ಕೋಟಿ ರೂಪಾಯಿ ಸಂಗ್ರಹ ಗುರಿ

ಹೌದು, 2026-27ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಭರ್ಜರಿ 45,000 ಕೋಟಿ ರೂಪಾಯಿ ಆದಾಯ ಮದ್ಯ ಮಾರಾಟದ ಮೂಲಕವೇ ಸಂಗ್ರಹ ಮಾಡುವ ಗುರಿ ಹಾಕಿಕೊಂಡಿದೆ. ಇದರ ಪರಿಣಾಮ ಈಗ ಮತ್ತೆ ಮದ್ಯ ಅಂದ್ರೆ ಎಣ್ಣೆ ಬೆಲೆ ಏರಿಕೆ ಫಿಕ್ಸ್ ಆಗಿದ್ದು, ಎಣ್ಣೆ ಹೊಡೆಯುವವರ ಜೇಬಿಗೆ ಇನ್ನಷ್ಟು ಭಾರ ಆಗಲಿದೆ ಲಿಕ್ಕರ್. ಅದರಲ್ಲೂ ಈ ಬಾರಿ ನೇರವಾಗಿ ಮದ್ಯದ ಬೆಲೆ ಏರಿಕೆಗೆ ಒತ್ತು ಕೊಡುವ ಬದಲಾಗಿ, ಇನ್ನುಮುಂದೆ ಮದ್ಯದಲ್ಲಿನ ಆಲ್ಕೋಹಾಲ್ ಅಥವಾ ಮದ್ಯಸಾರ ಅಂಶ ಆಧರಿಸಿ ತೆರಿಗೆ ವಿಧಿಸಲು ಭಾರಿ ದೊಡ್ಡ ತೀರ್ಮಾನ ಕೈಗೊಂಡಿದೆ ಕರ್ನಾಟಕ ಸರ್ಕಾರ. ಹೀಗಾಗಿ ಮದ್ಯಪ್ರಿಯರು ಹಾಗೂ ಮದ್ಯವನ್ನೇ ಹಚ್ಚಿಕೊಂಡು ಬದುಕುವ ಕುಡುಕರು, ಎಲ್ಲಾ ಓಕೆ ರೇಟ್ ಜಾಸ್ತಿ ಮಾಡುತ್ತಿರುವುದು ಯಾಕೆ? ಅಂತಾ ಪ್ರಶ್ನೆ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+