ತಿಪಟೂರಿನಲ್ಲಿ ರಾಶಿ ಪೂಜೆ: ಸಾವಯವ ಕೃಷಿಗೆ ಸಾವಿರಕ್ಕೂ ಹೆಚ್ಚು ರೈತರ ಬೆಂಬಲ
ತಿಪಟೂರು: ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗುರುವಾರ ತಿಪಟೂರಿನಲ್ಲಿ ರೈತರ ಸಮಾವೇಶದ ನಡುವೆ ರಾಶಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಾವಿರಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಬೆಳೆಗಳನ್ನು ದೇವರ ಮುಂದೆ ರಾಶಿಯನ್ನು ಸಾಂಪ್ರದಾಯಿಕವಾಗಿ ಅರ್ಪಿಸಿದರು.
ಕಳೆದ ಎರಡು ವರ್ಷಗಳಿಂದ ತಿಪಟೂರಿನ ಭಾಗದ ರೈತರು ಮುದ್ದೆನಹಳ್ಳಿಗೆ ತೆರಳಿ ತಮ್ಮ ಬೇಳೆಗಳ ರಾಶಿ ಪೂಜೆಯನ್ನು ನೆರವೇರಿಸುತ್ತಿದ್ದರು. ಈ ಹಿನ್ನಲೆ ಅವರಿಗೆ ನೀಡಿದ್ದ ಮಾತಿನಂತೆ
ಸದ್ಗರು ಶ್ರೀ ಮಧುಸೂದನ್ ಸಾಯಿ ಅವರು ಈ ಬಾರಿ ತಿಪಟೂರಿಗೆ ಭೇಟಿ ನೀಡಿ ಕರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಮಣ್ಣಿನ ಆರೋಗ್ಯವನ್ನು ಕಾಪಾಡುವುದು ದೇಶದ ಭವಿಷ್ಯವನ್ನು ಕಾಪಾಡಿದಂತೆ ಎಂದು ಹೇಳಿದರು. ರಾಸಾಯನಿಕ ಕೃಷಿಯಿಂದ ಮಣ್ಣು ಹಾಳುಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಾವಯವ ಕೃಷಿಯತ್ತ ಮುಖ ಮಾಡುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಪೂರ್ಣವಾಗಿ ಸಾವಯವ ಕೃಷಿಗೆ ತಿರುಗಲು ಸಿದ್ದರೇ ಎಂದು ಪ್ರಶ್ನಿಸಿದಾಗ ಸಭೆಯಲ್ಲಿ ಹಾಜರಿದ್ದ ರೈತರು ಒಕ್ಕೊರಲಿನಿ೦ದ ಎದ್ದು ನಿಂತು ತಮ್ಮ ಒಪ್ಪಿಗೆಯನ್ನು ಸೊಚಿಸಿದರು. ಕಾರ್ಯಕ್ರಮದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ಹಲವು ರೃತರನ್ನು ಸದ್ಗುರು ಅವರು ಸನ್ಮಾನಿಸಿದರು. ರೈತರ ಪರಿಶ್ರಮ ಹಾಗೂ ಮಣ್ಣಿನೊಂದಿಗೆ ಅವರ ಸಂಬಂಧ ದೇಶದ ಆಹಾರ ಭದ್ರತೆಗೆ ಪ್ರಮುಖ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಆನಂದ, ಅಶೋಕ್ ಅಲೂರು ಹಾಗೂ ಶ್ರೀನಿವಾಸ್ ಗುಪ್ತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ನಿರ್ದೇಶಕರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಕುಟುಂಬಗಳಲ್ಲಿ ಸಾವಯವ ಕೃಷಿಯಿಂದ ಉಂಟಾದ ಬದಲಾವಣೆಗಳು ಹಾಗೂ 'ಸಾಯಿ ಶ್ಯೂರ್' ಪೌಷ್ಠಿಕ ಉಪಾಹಾರದಿಂದ ಶಾಲಾ ಮಕ್ಕಳಿಗೆ ದೊರೆತಿರುವ ಲಾಭಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಈ ರೈತರು ಬೆಳೆದ ಸಾವಯವ ಉತ್ಪನ್ನಗಳು ಕಾಂಬೋಡಿಯಾ, ಶ್ರೀಲಂಕಾ, ಆಫ್ರಿಕಾ ಸೇರಿದಂತೆ ಹಲವು ದೇಶಗಳ ಸಮುದಾಯಗಳಿಗೆ ತಲುಪಲಿವೆ ಎಂದು ತಿಳಿಸಲಾಯಿತು. ಇದು 'ವಸುದೈವ ಕುಟುಂಬಕಂ' ಸಂದೇಶವನ್ನು ಕಾರ್ಯರೂಪದಲ್ಲಿ ತೋರಿಸುವ ಪ್ರಯತ್ನವಾಗಿದೆ.
ರೈತರ ಸಮಾಗಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು, ಮುಂದಿನ ದಿನಗಳಲ್ಲಿ ಪ್ರತಿವರ್ಷವೂ ತಿಪಟೂರಿನಲ್ಲಿ 'ರಾಶಿ ಪೂಜೆ' ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications