ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6ನೇ ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯ ಸುಗ್ಗಿ

By Prasad
|
Google Oneindia Kannada News

Satish Hosanagar
ಬೃಂದಾವನ ಕನ್ನಡ ಕೂಟದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ 3,4 ಮತ್ತು 5ರಂದು ನಡೆಯಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ಪ್ರೇಮಿಗಳಿಗಾಗಿ ನಾಲ್ಕಾರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಸತೀಶ್ ಹೊಸನಗರ ಅವರ ನೇತೃತ್ವದಲ್ಲಿ ಅವಿರತವಾಗಿ ಕೆಲಸ ಮಾಡಿದ ಸಂಪಾದಕೀಯ ಮಂಡಳಿ ಸಿಂಚನ, ಗುಬ್ಬಿಗೂಡು, ಕನ್ನಡ ಪ್ರಜ್ಞೆ ಮತ್ತು ರಂಜಿನಿ ಎಂಬ ನಾಲ್ಕು ಪ್ರಕಟಣೆಗಳನ್ನು ಹೊರತಂದಿದೆ. ಜೊತೆಗೆ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಸುತ್ತಿನಲ್ಲಿ ಅರ್ಹತೆ ಪಡೆದ ಕಥೆಗಾರರ ಕಥೆಗಳ ಸಂಕಲನ ಕೂಡ ಬಿಡುಗಡೆಯಾಗುತ್ತಿದೆ. ಮಕ್ಕಳಿಗಾಗಿಯೇ ವಿಶೇಷವಾಗಿ ಗುಬ್ಬಿಗೂಡು ಎಂಬ ಪುಸ್ತಕವನ್ನು ಹೊರತರಲಾಗಿದೆ. ಪ್ರಕಟಣೆಗಳ ವಿವರ ಕೆಳಗಿನಂತಿದೆ.

ಸಂಪಾದಕೀಯ ಮಂಡಳಿ:

ಸತೀಶ್ ಹೊಸನಗರ
ಮೀರಾ ಪಿ.ಆರ್.
ದಾಶರಥಿ ಗಟ್ಟು
ಶೈಲಾ ಪಾಟಂಕರ್
ಅಶೋಕ್ ಕಟ್ಟೀಮನಿ
ರುದ್ರ ಕುಮಾರ್
ವಿದ್ಯಾ ಮೂರ್ತಿ
ಚಂದ್ರಮೌಳಿ ಬಸೂರ್

ಒಟ್ಟು ಪ್ರಕಟಣೆಗಳು: 4
ಸಿಂಚನ (Main Souvenir), ಗುಬ್ಬಿಗೂಡು (Kids publication), ಕನ್ನಡ ಪ್ರಜ್ಞೆ (Collection of Essays) ಮತ್ತು ರಂಜಿನಿ (Program guide).

ಸಹ ಪ್ರಕಟಣೆ:
ದೀಪ ತೋರಿದೆಡೆಗೆ (Collection of stories) - ಕಥಾ ಸಂಕಲನ, ಸಾಹಿತ್ಯ ಸಮಿತಿಯವರಿಂದ.

ಸ್ಮರಣ ಸಂಚಿಕೆ: ಸಿಂಚನ
ಪುಟಗಳು: 365, ಫುಲ್ ಕಲರ್
ವಿಭಾಗಗಳು: ಸಂಪಾದಕೀಯ, ಸಂದೇಶಗಳು, ಸಮಿತಿಗಳ ಫೋಟೋ, ಹಿರಿಯರ ಲೇಖನಗಳು, ಕಿರಿಯರ ಲೇಖನಗಳು, ಸಿನಿಮಾ ಮತ್ತು ರಂಗಭೂಮಿ ವಿಭಾಗ ಹಾಗೂ ಪ್ರಾಯೋಜಕರ ಸಂದೇಶಗಳು.

ಮಕ್ಕಳ ಸಂಚಿಕೆ: ಗುಬ್ಬಿಗೂಡು
ಪುಟಗಳು: 80
ಮಕ್ಕಳಿಗಾಗಿ ಹಿರಿಯರು ಬರೆದ ಲೇಖನ ಮತ್ತು ಚಿತ್ರಗಳ ವರ್ಣರಂಜಿತ ಪುಸ್ತಕ.

ವೈಚಾರಿಕ ಪ್ರಬಂಧ ಸಂಪುಟ: ಕನ್ನಡ ಪ್ರಜ್ಞೆ
ಪುಟಗಳು: 407
ಕನ್ನಡ ನಾಡು, ನುಡಿ, ಪರಂಪರೆಯ ಕುರಿತ 25 ಪ್ರೌಢ ಪ್ರಬಂಧಗಳ ಸಂಕಲನ.

ಕಾರ್ಯಕ್ರಮ ಸೂಚಿ: ರಂಜಿನಿ
ಪುಟಗಳು: 60, ಫುಲ್ ಕಲರ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X