ಇದೇ ಮೊದಲ ಬಾರಿಗೆ ಅಕ್ಕ ಸಿನಿಮಾ ಪ್ರಶಸ್ತಿ
ನ್ಯೂಜೆರ್ಸಿಯಲ್ಲಿ
ನಡೆಯಲಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಹಲವು ವಿಶೇಷಗಳಿಂದ ಕೂಡಿರುತ್ತದೆ. ಸೆಪ್ಟೆಂಬರ್ 3, 4 ಹಾಗೂ 5ರಂದು ಅಕ್ಕ ಸಮ್ಮೇಳನ ನಡೆಯಲಿದ್ದು ಇದೇ ಮೊದಲ ಬಾರಿಗೆ "ಅಕ್ಕ ಸಿನಿಮಾ ಪ್ರಶಸ್ತಿ"ಗಳನ್ನು ಸ್ಥಾಪಿಸಲಾಗಿದೆ. ಅತ್ಯುತ್ತಮ ನಟ/ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ/ಗಾಯಕಿ ಸೇರಿದಂತೆ ಕನ್ನಡ ಚಲನಚಿತ್ರ ಕ್ಷೇತ್ರದ ಒಟ್ಟು ಹತ್ತು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. id="toptextpromo">ಪ್ರಶಸ್ತಿಯು
ತಲಾ ಒಂದು ಸಾವಿರ ಡಾಲರ್ ನಗದು, ಸ್ಮರಣ ಫಲಕ ಮತ್ತು ಸನ್ಮಾನ ಪತ್ರಗಳನ್ನು ಒಳಗೊಂಡಿರುತ್ತದೆ. ಕಳೆದ ಎರಡು ವರ್ಷಗಳಲ್ಲಿ ತೆರೆಕಂಡ ಕನ್ನಡ ಚಿತ್ರಗಳು ಅಕ್ಕ ಸಿನಿಮಾ ಪ್ರಶಸ್ತಿ ವ್ಯಾಪ್ತಿಗೆ ಒಳಪಡುತ್ತವೆ ಎಂದು ಅಕ್ಕ ಸಂಸ್ಥೆ ಮುಖ್ಯಸ್ಥ ಅಮರನಾಥ್ ಗೌಡ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಕನ್ನಡ
ಚಿತ್ರಗಳನ್ನು ಕೂಲಂಕಷವಾಗಿ ವೀಕ್ಷಿಸುವ ಹಾಗೂ ವಿಮರ್ಶಿಸುವ ಅಮೆರಿಕಾದಲ್ಲಿರುವ ಚಿತ್ರಾಸಕ್ತರ ಒಂದು ತಂಡ ಪ್ರಶಸ್ತಿಗೆ ಅರ್ಹರಾಗುವ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರಗಳನ್ನು ಗುರುತಿಸುತ್ತದೆ. ಅಕ್ಕ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅಮರನಾಥ್ ಗೌಡ ಹೇಳಿದರು.











Click it and Unblock the Notifications