ಅಕ್ಕ ಸಮ್ಮೇಳನ : ಕಲಾವಿದರ ಪ್ರಾಯೋಜಕರು

Bannanje Govindacharya
ನ್ಯೂ ಜೆರ್ಸಿ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಕರ್ನಾಟಕದಿಂದ ತೆರಳುತ್ತಿರುವ ಸಾಂಸ್ಕೃತಿಕ ರಾಯಭಾರಿಗಳ ವೆಚ್ಚವನ್ನು ಭರಿಸಲು ಪ್ರಾಯೋಜಕರು ಮುಂದೆ ಬಂದಿರುವುದು ಅಕ್ಕ ಮತ್ತು ಬೃಂದಾವನ ಸಂಸ್ಥೆಗೆ ಒಂದು ಹೆಮ್ಮೆಯ ವಿಷಯವಾಗಿದೆ. ಉದಾರ ಮನಸ್ಸಿನಿಂದ ಮುಂದೆ ಬಂದಿರುವ ಕೆಲವು ಪ್ರಾಯೋಜಕರ ವಿವರ ಈ ರೀತಿ ಇದೆ.

ಬನ್ನಂಜೆ ಗೋವಿಂದಾಚಾರ್ಯರನ್ನು ರಾಚೆಸ್ಟರಿನ ಡಾ. ಮುಕುಂದ್ ರವರ ಕರ್ನಾಟಕದಲ್ಲಿನ ಲಾಭರಹಿತ ಸಂಸ್ಥೆಯಾದ ತಾರ ಪ್ರಕಾಶನ, ರಾಯಚೂರ್ ಶೇಷಗಿರಿದಾಸ್ ಅವರನ್ನು ನ್ಯೂ ಜೆರ್ಸಿಯ ಪೂರ್ಣಿಮ ಹಾಗು ಡಾ. ಸುಧೀಂದ್ರ ದಂಪತಿಗಳು, ಅನಂತ್ ಕುಲಕರ್ಣಿಯವರನ್ನು ನ್ಯೂ ಜೆರ್ಸಿಯ ಜಯಂತಿ ಹಾಗು ಪ್ರಸಾದ್ ದಂಪತಿಗಳು ಹಾಗು ಪ್ರಭಾತ್ ಕಲಾವಿದರನ್ನು ಭಾಗಶಃ ಹೌಸ್ ಆಫ್ ಖೋಡೇಸ್ ರವರು ಪ್ರಾಯೋಜಿಸುತ್ತಿದ್ದಾರೆ. ಈ ಎಲ್ಲಾ ಪ್ರಾಯೋಜಕರಿಗೂ 6ನೇ ಅಕ್ಕ ಸಮ್ಮೇಳನ, ಬೃಂದಾವನ ಕನ್ನಡ ಸಂಘ ನ್ಯೂ ಜೆರ್ಸಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಈ ಮೇಲೆ ಸೂಚಿಸಿದ ಕಲಾವಿದರಲ್ಲದೆ, ಈಗಾಗಲೆ ಪ್ರಕಟಿಸಿರುವಂತೆ ಡಾ. ಎಂ. ಬಾಲಮುರಳಿಕೃಷ್ಣ ಹಾಗು ತಂಡದವರ ಶಾಸ್ತ್ರೀಯ ಸಂಗೀತ ಮೊದಲ ದಿನದ ಸಂಜೆಯ ಮುಖ್ಯ ಕಾರ್ಯಕ್ರಮವಾಗಿದೆ. ಎರಡನೆಯ ಹಾಗು ಮೂರನೆಯ ದಿನದಂದು ಮುಖ್ಯ ಕಾರ್ಯಕ್ರಮಗಳಾಗಿ ಅಕ್ಕದಲ್ಲೇ ಪ್ರಪ್ರಥಮ ಬಾರಿಗೆ "ವಿಶೇಷ ತಾರಾ ಮೇಳ ಸಂಜೆ" ಹಾಗೂ "ಸಿನಿಮಾ ಮತ್ತು ಭಾವಗೀತೆಗಳ ಸಂಗೀತ ಸಂಜೆ" ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಅಕ್ಕ ವೆಬ್ ಸೈಟ್ ನೋಡುತ್ತಿರಿ, ದಟ್ಸ್ ಕನ್ನಡ ಓದುತ್ತಿರಿ. ವಿಶ್ವದ ಎಲ್ಲ ಕಡೆಯಿಂದಲೂ ಪ್ರತಿ ಭಾನುವಾರ, ನ್ಯೂ ಜೆರ್ಸಿ ಸಮಯ ಬೆಳಗ್ಗೆ 9ರಿಂದ 11ರವರೆಗೆ "ಕನ್ನಡ ಕಸ್ತೂರಿ" ಬಾನುಲಿ ಕಾರ್ಯಕ್ರಮ ಕೇಳುತ್ತಿರಿ.

ಧನ್ಯವಾದಗಳು, ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಕಾರ್ಯಕಾರಿ ಸಮಿತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+