ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಂಪುಟಕ್ಕೆ ಲೇಖನ ಕಳಿಸಿದಿರಾ?

By Shami
|
Google Oneindia Kannada News

Article invite for Navika souvenir
“ನಾವಿಕ" ಅಂದರೆ "ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ". ನಾವಿಕ ಎಂಬ ಪದಕ್ಕೆ ನಾವೆಯನ್ನು ನಡೆಸುವವ ಎಂಬರ್ಥವೂ ಇದೆ. ಈ ಅರ್ಥವನ್ನು ನವೀನ ಪ್ರಪಂಚಕ್ಕೆ ವಿಸ್ತರಿಸಿದಲ್ಲಿ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವವರೆಂದೂ ಅರ್ಥೈಸಬಹುದು. ಹಾಗೆ ಯೋಚಿಸಿದಲ್ಲಿ ಕನ್ನಡವೆಂಬ ವಿಶಾಲ ಸಾಗರದಲ್ಲಿ ನಾವೆಲ್ಲರೂ ನಾವಿಕರೇ. ಎಲ್ಲೋ ಹುಟ್ಟಿ, ಎಲ್ಲೊ ಬೆಳೆದು, ಎಲ್ಲೋ ಸಾಗಿ, ಎಲ್ಲೋ ಸೇರುವ "ನಾವಿಕ"ತನ ವಿಶ್ವಕನ್ನಡಿಗರಿಗೆಲ್ಲರಿಗೂ ಅನ್ವಯಿಸುತ್ತದೆ.

ಈ ನಿಟ್ಟಿನಲ್ಲಿ “ವಿಶ್ವವ್ಯಾಪಿ ಕನ್ನಡ ಅಂದು, ಇಂದು, ಮುಂದು" ಎಂಬ ಸಂದೇಶವಾಣಿಯನ್ನಿಟ್ಟು ನಾವಿಕ ಸಾಹಿತ್ಯ ಸಮಿತಿಯು, ನಾವಿಕ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಶ್ವಕನ್ನಡ ಸಮ್ಮೇಳನದ ನೆನಪಿಗಾಗಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಲಿದೆ. ವಿಶ್ವಕನ್ನಡಿಗರ ಸೃಜನಶೀಲತೆಯ ನಾನಾ ರೀತಿಯ ನೈಜ, ಕಲ್ಪನೆಯ ಅಲೆಗಳು “ಅಲೆವಾಣಿ" ಸ್ಮರಣಸಂಚಿಕೆಯಲ್ಲಿ ಮೂಡಲಿವೆ. ನಿಮ್ಮ ಬರವಣಿಗೆ ಆಹ್ವಾನವನ್ನು ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟಿಸಿದ್ದು, ವಿಶ್ವದೆಲ್ಲೆಡೆಯ ಅನೇಕ ಕನ್ನಡಿಗರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಲೆವಾಣಿ ಸಂಚಿಕೆಯ ಅನುಕ್ರಮಣಿಕೆ ಹೀಗಿರುತ್ತದೆ.

* ಅಂದು : ಇತಿಹಾಸದ ಪುಟಗಳಲ್ಲಿ ವಿಶ್ವಕನ್ನಡ. ಹಳೆಯ ನೆನಪುಗಳನ್ನು ಹೊತ್ತು ತರುವ ಕಥೆ, ಕವನ, ಪ್ರಬಂಧ, ಐತಿಹಾಸಿಕ ಲೇಖನಗಳು, ಕಲೆ, ಇತ್ಯಾದಿ.

* ಇಂದು : ವರ್ತಮಾನದ ವಿಶ್ವಕನ್ನಡ. ಸಮಕಾಲೀನ ಸಮಸ್ಯೆಗಳ ಬಗ್ಗೆ ಕಥೆ, ಕವನ, ಪ್ರಬಂಧ ಇತ್ಯಾದಿ.

* ಮುಂದು : ಭವಿಷ್ಯದ ವಿಶ್ವಕನ್ನಡ. ಮುಂದಿನ ದಿನಗಳಲ್ಲಿ ಕನ್ನಡದ ಬೆಳವಣಿಗೆ, ಮುಂದಿನ ಪೀಳಿಗೆ, ವೈಜ್ಞಾನಿಕ ಲೇಖನಗಳು, ಎದುರಿಸಬಹುದಾದ ಸಮಸ್ಯೆಗಳು ಇತ್ಯಾದಿ.

ಇದರೊಂದಿಗೆ ಚುಟುಕು, ನಗೆಹನಿ, ಗಾದೆ, ಸುಭಾಷಿತ, ವಚನ, ಕಲೆ, ರಂಗೋಲಿ ಮುಂತಾದ ವಿಚಾರಗಳಿಗೂ ಆಹ್ವಾನವಿದೆ. “ಅಲೆವಾಣಿ"ಯ ಮುಖಪುಟ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಯ್ಕೆಯಾದ ವಿನ್ಯಾಸಕ್ಕೆ ಸೂಕ್ತ ಬಹುಮಾನವೂ ಇದೆ. ನಿಮ್ಮ ಬರಹ, ಮುಖಪುಟವಿನ್ಯಾಸ ಮುಂತಾದ ಎಲ್ಲ ಸಂಪರ್ಕಗಳನ್ನು [email protected] ಇ-ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ.

ಇವೆಲ್ಲವನ್ನೂ ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 30, 2010.

ಮತ್ತೊಮ್ಮೆ ದಟ್ಸ್ ಕನ್ನಡ ಓದುಗರಲ್ಲಿ “ಅಲೆವಾಣಿ"ಯ ಸಂಪಾದಕರಾದ ಶ್ರೀಕಾಂತ ಬಾಬುರವರ ಆದರಣೀಯ ಕೋರಿಕೆ. ತಾವೆಲ್ಲರೂ ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯುವಲ್ಲಿ ಮುಂದಾಗಿ, ತಮ್ಮ ಬರಹ ಕಾಣಿಕೆಗಳಿಂದ ಸ್ಮರಣ ಸಂಚಿಕೆಯನ್ನು ಸಂಪದ್ಭರಿತ ಮಾಡಬೇಕಾಗಿ ಕೋರಿಕೆ.

ವಿಶ್ವಾಸದಿಂದ, ಶ್ರೀಕಾಂತ ಬಾಬು, ನಾವಿಕ ಸಾಹಿತ್ಯ ಸಮಿತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X