ನಾವಿಕ ಸ್ಮರಣ ಸಂಚಿಕೆ ಲೇಖನ ಆಹ್ವಾನ

ಈ ನೆನಪಿನ ಸಂಪುಟಕ್ಕೆ ಸಣ್ಣ ಕಥೆ, ಕವನ, ಲೇಖನ, ಹಾಸ್ಯ, ಚುಟುಕ, ಸುಭಾಷಿತ, ಸ್ವಾನುಭವ, ವಿಮರ್ಶೆ, ಸಾಧನೆ, ಪ್ರವಾಸ ಕಥನ, ವ್ಯಕ್ತಿ ಚಿತ್ರ, ನಾಟಕ ಮುಂತಾದ ಬರವಣಿಗೆಗಳನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. 5ರಿಂದ 18ರ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ವಿಭಾಗವಿದ್ದು ಪ್ರಕಟಿತ ಲೇಖನಗಳಿಗೆ ಬಹುಮಾನವೂ ಇದೆ. ಇದಲ್ಲದೆ ರೇಖಾಚಿತ್ರ, ಸ್ಥಿರ ಚಿತ್ರ, ವರ್ಣಚಿತ್ರ ಮುಂತಾದ ಕಲಾತ್ಮಕ ರಚನೆಗಳಿಗೂ ಆಹ್ವಾನವಿದೆ.
ಕೆಲವು ಸೂಚನೆಗಳು :
* ಕನ್ನಡ ಲೇಖನಗಳಿಗೆ ಮೊದಲ ಮಣೆ.
* ನಿಯಮಿತ ಸಂಖ್ಯೆಯಲ್ಲಿ ಇಂಗ್ಲಿಷ್ ಲೇಖನಗಳನ್ನೂ ಪರಿಗಣಿಸಲಾಗುವುದು.
* ಬರವಣಿಗೆ ಸ್ವಂತದ್ದಾಗಿರಲಿ. ಮತ್ತೊಬ್ಬರ ಬರವಣಿಗೆ ಕಳುಹಿಸುವುದಾದರೆ, ಬರಹಗಾರರ ಹೆಸರು ಮತ್ತು ಬರಹದ ಮರುಪ್ರಕಟಣೆಗೆ ಮೂಲ ಲೇಖಕರ ಅನುಮತಿ ಪತ್ರ ಲಗತ್ತಿಸಿರಬೇಕು.
* ನಾವಿಕ ಸ್ಮರಣ ಸಂಚಿಕೆಗೆ ಕಳಿಸುವ ಬರಹ, ಚಿತ್ರ ಸಾಮಗ್ರಿಗಳು ಬೇರೆಲ್ಲಿಯೂ ಈ ಹಿಂದೆ ಪ್ರಕಟವಾಗಿರಬಾರದು.
ತಮ್ಮ ಲೇಖನಗಳು 2,500 ಪದಗಳು ಅಥವಾ ಐದು ಪುಟಗಳ ಗಡಿಯನ್ನು ಮೀರಿರಬಾರದು. ಪದ್ಯ, ಕವನಗಳು ಒಂದು ಪುಟ ಮೀರದಿರಲಿ. ಬರಹಗಳು Baraha 7.0 Softwareನಲ್ಲಿ ಅಥವಾ Microsoft Word Using Baraha Fonts ನಲ್ಲಿ ಇರಬೇಕು.
ಬರಹಗಾರರ ಹೆಸರು, ವಿಳಾಸ, ದೂರವಾಣಿ, ಈ-ಮೇಲ್, ಭಾವಚಿತ್ರ ಹಾಗು ಸಂಕ್ಷಿಪ್ತ ಪರಿಚಯವನ್ನು ತಮ್ಮ ಲೇಖನ ಕಾಣಿಕೆಯ ಜತೆಗೆ ಪ್ರತ್ಯೇಕ ಹಾಳೆಯಲ್ಲಿ ಕಳಿಸಬೇಕು. ಭಾವಚಿತ್ರಗಳು 1" X 1.25ನ GIF or JPEG Format ನಲ್ಲಿರಬೇಕು.
ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಲೇಖನಗಳನ್ನು ಕಳುಹಿಸಬೇಕಾದ ಈ-ಮೇಲ್ ವಿಳಾಸ : [email protected].
ಧನ್ಯವಾದಗಳೊಂದಿಗೆ,
ನಾವಿಕ 2010 ಸಾಹಿತ್ಯ ಸಮಿತಿ,
ಲಾಸ್ ಏಂಜಲಿಸ್, ಅಮೆರಿಕ












Click it and Unblock the Notifications