ಚಾಣಕ್ಯ ನೀತಿ: ಈ ರೀತಿಯ 3 ಜನರನ್ನು ನೀವು ಎಂದಿಗೂ ನಂಬಬೇಡಿ

ಆಚಾರ್ಯ ಚಾಣಕ್ಯ ಭಾರತದ ಒಬ್ಬ ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕರಾಗಿದ್ದರು. ಅವರು ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ, ಚಾಣಕ್ಯ ಇಂದಿಗೂ ಅನೇಕ ಜನರಿಗೆ ಮಾರ್ಗದರ್ಶನ ನೀಡುವ ಅನೇಕ ಜನರಿಗೆ ಯಶಸ್ವಿ ಜೀವನದ ಕುರಿತು ಹಲವು ವಿಚಾರಗಳನ್ನು ಚಾಣಕ್ಯರು ತಿಳಿಸಿದ್ದಾರೆ.

ಚಾಣಕ್ಯರ ಪ್ರಕಾರ ಸಮಾಜದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರು ಒಳ್ಳೆಯವರಾಗಿದ್ದರೆ, ಇನ್ನು ಕೆಲವರು ಸ್ವಾರ್ಥ ಹಾಗು ವಂಚನೆ ಮಾಡುವ ಗುಣ ಹೊಂದಿರುತ್ತಾರೆ. ಆದ್ದರಿಂದ ಯಾರನ್ನು ನಂಬಬೇಕು, ಯಾರಿಂದ ದೂರ ಇರಬೇಕು ಇದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಹೇಳುತ್ತಾರೆ.
ಆದ್ದರಿಂದ ನೀವು ಆ ತರಹದ ಜನರನ್ನು ಗುರುತಿಸಬಲ್ಲ ಶಕ್ತಿ ಮತ್ತು ಸಾಮರ್ಥ್ಯ ಕಲಿಯಬೇಕು. ಕೆಲವು ರೀತಿಯ ವ್ಯಕ್ತಿಗಳು ಎಷ್ಟೇ ನಂಬಿದದರು ಕೊನೆಯಲ್ಲಿ ಅವರು ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.

Chanakya Niti

ಇಂತಹವರಿಂದ ಹುಷಾರ್:

ಚಾಣಕ್ಯರ ಪ್ರಕಾರ ಸೋಮಾರಿತನ ಹೊಂದಿರುವ ಕೆಲಸಗಾರನನ್ನು ಎಂದಿಗೂ ಸಂಪೂರ್ಣ ನಂಬಬಾರದು. ನೀವು ಯಾವಗಲೂ ಇಂಥವರಿಂದ ಜಾಗರೂಕತೆಯಿಂದ ಇರಬೇಕು ಎಂದು ಚಾಣಕ್ಯ ಹೇಳುತ್ತಾನೆ. ಅಂತ ಕೆಲಸಗಾರ ಎಂದಿಗೂ ಮಾಲಿಕನ ಪ್ರಯೋಜನದ ಬಗ್ಗೆ ಯೋಚಿಸುವುದಿಲ್ಲಾ. ಇಂತಹ ವ್ಯಕ್ತಿಗಳು ಕೇವಲ ನೆಪಗಳನ್ನು ಹೇಳುತ್ತಾರೆ, ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ತರಹದ ವ್ಯಕ್ತಿಗಳಿಂದ ಎಚ್ಚರದಿಂದ ಇರಬೇಕು ಸಲಹೆ ನೀಡಿದ್ದಾರೆ.

ಚಾಣಕ್ಯ ನೀತಿ: ಆಫೀಸ್ ರಾಜಕೀಯದಿಂದ ಪಾರಾಗಬಲ್ಲ 3 ಅದ್ಬುತವಾದ ಸಲಹೆ
ಚಾಣಕ್ಯ ನೀತಿ: ಆಫೀಸ್ ರಾಜಕೀಯದಿಂದ ಪಾರಾಗಬಲ್ಲ 3 ಅದ್ಬುತವಾದ ಸಲಹೆ

ಸ್ವಾರ್ಥಕ್ಕಾಗಿ ಸ್ನೇಹ

ಸ್ನೇಹವು ಜೀವನದ ಅಮೂಲ್ಯ ಸಂಬಂಧಗಳಲ್ಲಿ ಒಂದಾಗಿದೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವವನೆ ನಿಜವಾದ ಸ್ನೇಹಿತನೇ ನೆರವಾಗುತ್ತಾನೆ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಸ್ನೇಹ ಬೆಳೆಸುತ್ತಾರೆ. ತಮ್ಮ ಕೆಲಸ ಆಗುವರೆಗೆ ಮಾತ್ರ ಆತ್ಮಿಯವಾಗಿ ನಡೆದುಕೊಂಡು ನಂತರ ಸ್ನೇಹ ಸಂಬಂಧ ಮುರಿಯಲು ಹಿಂಜರಿಯುವುದಿಲ್ಲ. ಇಂತಹ ಸ್ವಾರ್ಥಿ ಸ್ನೇಹಿತರಿಂದ ದೂರ ಇರುವುದಂತೂ ಒಳ್ಳೆಯದು ಎಂದು ಚಾಣಕ್ಯರು ಹೇಳಿದ್ದಾರೆ.

ಚಾಣಕ್ಯ ನೀತಿ: ಸಮಾಜದಲ್ಲಿ ಗೌರವ ಸಿಗಬೇಕೆ? ಹಾಗಾದರೆ ಜೀವನದಲ್ಲಿ ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಚಾಣಕ್ಯ ನೀತಿ: ಸಮಾಜದಲ್ಲಿ ಗೌರವ ಸಿಗಬೇಕೆ? ಹಾಗಾದರೆ ಜೀವನದಲ್ಲಿ ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಕಪಟ ಮನಸ್ಸಿನವರು:

ಮನಸ್ಸಿನಲ್ಲಿ ವಂಚನೆ ಮತ್ತು ಮೋಸ ಮಾಡಬೇಕೆಂದುಕೊಂಡಿರುವ ವ್ಯಕ್ತಿಯು ಯಾವಾಗ ಬೇಕಾದರೂ ನಿಮಗೆ ಸಮಸ್ಯೆ ತಂದೊಡ್ಡಬಹುದು ಎಂದು ಚಾಣಕ್ಯರು ಎಚ್ಚರಿಸುತ್ತಾರೆ. ಇಂತಹ ವ್ಯಕ್ತಿಗಳು ಮೇಲ್ನೋಟಕ್ಕೆ ಒಳ್ಳೆಯವರಂತೆ ಕಂಡರೂ, ಅವಕಾಶ ಸಿಕ್ಕಾಗ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಂತಹ ನಡುವಳಿಕೆ ಉಳ್ಳವರನ್ನು ಮೊದಲೇ ಗಮನಿಸಿ ಅಂತಹ ವ್ಯಕ್ತಿಗಳನ್ನು ದೂರ ಇಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+