ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಸ್ನೇಹದ ಕಡಲಲ್ಲಿ... ನೆನಪಿನ ದೋಣಿಯಲಿ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನದ ಕೊನೆಯ ದಿನ (ಭಾನುವಾರ ಸೆಪ್ಟೆಂಬರ್‌ 3) ರಾತ್ರಿ ‘ಬೆಳದಿಂಗಳ ನೌಕಾವಿಹಾರ’ (Moonlight cruise) ಇದೆ! ಈಮೊದಲು, ಸಂಜೆ 5ಕ್ಕೆ ಆರಂಭವಾಗಿ ರಾತ್ರಿ 10ಕ್ಕೆ ಮುಗಿಯುವಂತೆ ಕ್ರೂಸ್‌ನ ಟೈಮ್‌ ನಿಗದಿಯಾಗಿತ್ತು. ಆದರೆ ‘‘ಭಾನುವಾರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು (ಮುಖ್ಯವಾಗಿ ಗುರುಕಿರಣ್‌ ಆರ್ಕೆಸ್ಟ್ರಾ) ಮಿಸ್‌ ಮಾಡದೆ ಕ್ರೂಸನ್ನೂ ಆನಂದಿಸುವಂತಿರಬೇಕು...’’ ಎಂಬ ಪಬ್ಲಿಕ್‌ ಡಿಮಾಂಡ್‌ ಹೆಚ್ಚಾಗಿದ್ದರಿಂದ ಇದೀಗ ಕ್ರೂಸ್‌ನ ಸಮಯ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಎಂದು ನಿಗದಿಪಡಿಸಲಾಗಿದೆ.

ಸಮ್ಮೇಳನ ವೈಭವದ ಉತ್ತುಂಗಶಿಖರವಾಗಬಹುದಾದ ಕ್ರೂಸ್‌ನಲ್ಲಿ, ಮನರಂಜನೆಯಾಗಿ ಡೊಳ್ಳುಕುಣಿತವಿರುತ್ತದೆ; ಕೊಡಗಿನ ಬೆಡಗಿಯರ ಉಮ್ಮತ್ತಾಟವೂ ಇರುತ್ತದೆ! ಹೊಟ್ಟೆಚುರುಗುಟ್ಟೈತೆ ಅಂತಾದ್ರೆ ಬೋಂಡಾ, ಭಜ್ಜಿ, ಕಬಾಬ್‌ ಸಹ ಇರುತ್ತವೆ; ಕೊನೆಗೆ ಸಮ್ಮೇಳನ ಸಮಾರೋಪವು ರಸಭರಿತವಾಗಿರಬೇಕೆನ್ನುವವರಿಗೆ ಸೋಮರಸದ ಸರಬರಾಜಿನ ವ್ಯವಸ್ಥೆಯೂ ಇರುತ್ತದೆ!

Enjoy Moonlight Cruise

ಬೆಳದಿಂಗಳ ನೌಕಾವಿಹಾರದ ವೇಳೆ ನೌಕೆಯೊಳಗಿಂದ ಬಾಲ್ಟಿಮೋರ್‌ ಒಳಬಂದರು (inner harbor) ಹೇಗೆ ನಯನಮನೋಹರವಾಗಿ ಕಾಣಲಿದೆ ಎಂದು ಒಮ್ಮೆ ಈ ಚಿತ್ರನೋಡಿ ಕಲ್ಪಿಸಿಕೊಳ್ಳಿ. ಸಮ್ಮೇಳನದ ವೈಭವವನ್ನು ಮೆಲುಕುಹಾಕುತ್ತ, ಮೂರುದಿನಗಳ ಸ್ನೇಹಮಯ ವಾತಾವರಣವನ್ನು ಮತ್ತೆಮತ್ತೆ ನೆನಪಿಸಿಕೊಳ್ಳುತ್ತ ಆನಂದದ ಪರಮಾವಧಿಯಲ್ಲಿ ಅಕ್ಷರಶಃ ತೇಲುತ್ತ ಕಳೆಯಬಹುದಾದ ಆ ಕ್ಷಣಗಳನ್ನೊಮ್ಮೆ ಊಹಿಸಿಕೊಳ್ಳಿ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 5 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+