ವಿಶ್ವ ಕನ್ನಡ ಸಮ್ಮೇಳನದ 3 ಪುಸ್ತಕಗಳು ಲಭ್ಯ!

ವಿಶ್ವಕನ್ನಡಿಗರ ಲೇಖನಿಯಿಂದ ಮೂಡಿಬಂದ ಈ ಪುಸ್ತಕಗಳು, ನಿಮ್ಮ ಸಂಗ್ರಹದಲ್ಲಿರಲಿ. ಕೇವಲ 20ಡಾಲರ್‌ ಕಳುಹಿಸಿ, ಪುಸ್ತಕ ಸರಸ್ವತಿಯನ್ನು ಮನೆಗೆ ಆಹ್ವಾನಿಸಿ.

ಇತ್ತೀಚೆಗೆ ಮುಕ್ತಾಯವಾದ 4ನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಸಾಕಷ್ಟು ವರದಿಗಳನ್ನು , ಚಿತ್ರಗಳನ್ನು ನೋಡಿದ್ದೀರಿ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯೊಡನೆ ಇತರ ಮೂರು ಪುಸ್ತಕಗಳು ಬಿಡುಗಡೆಯಾದ ವಿಷಯವನ್ನೂ ನೀವು ಓದಿರಬಹುದು. ಸುವರ್ಣವಾಹಿನಿ ಎಂಬ ಹೆಸರಿನ ಸ್ಮರಣ ಸಂಚಿಕೆ ಮತ್ತು ಇನ್ನಿತರ ಮೂರು ಪುಸ್ತಕಗಳು ಹೀಗಿವೆ:

1) ಹೊರನಾಡ ಕನ್ನಡಿಗರಿಂದ ಹರಿದ ಕಥೆಗಳ ಸಂಕಲನ ಕಥಾವಾಹಿನಿ

2) ಬಹುತೇಕ ಹೊರನಾಡ ಕನ್ನಡಿಗ ಪರಿಣತರಿಂದ ಎಲ್ಲರಿಗಾಗಿ, ಸರಳ ಕನ್ನಡ ಭಾಷೆಯಲ್ಲಿ ,ಬರೆಯಲ್ಪಟ್ಟ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ, ಸಂಶೋಧನೆ ಮತ್ತು ಇತರ ಉಪಯುಕ್ತ ಮಾಹಿತಿ ತುಂಬಿರುವ ತಂತ್ರ-ವಿಜ್ಞಾನವಾಹಿನಿ.

3) ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಉದಯೋನ್ಮುಖ ಕಾದಂಬರಿಕಾರರನ್ನು ಪ್ರೋತ್ಸಾಹಿಸಲು ನಡೆಸಿದ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನಿತ ಕಾದಂಬರಿ ಭರದ್ವಾಜ.

KathavahiniBharadwaj - Novel by MutalikTantra-Vijnana Vahini

ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿಯು ಕಥಾವಾಹಿನಿ, ತಂತ್ರ-ವಿಜ್ಞಾನವಾಹಿನಿ ಮತ್ತು ಭರದ್ವಾಜ ಪುಸ್ತಕಗಳನ್ನು ಆಸಕ್ತಿ ಇರುವವರಿಗೆ ದೊರಕಿಸಲು ಕ್ರಮ ಕೈಗೊಂಡಿದೆ. ಸುವರ್ಣವಾಹಿನಿ ಸ್ಮರಣ ಸಂಚಿಕೆಯ ಪ್ರತಿಗಳು ಮುಗಿದಿದ್ದು ಇತರ ಮೂರು ಪುಸ್ತಕಗಳು ಸುಲಭ ಬೆಲೆಗೆ ದೊರಕುತ್ತವೆ.

ಅಂಚೆ ಮತ್ತು ಇತರ ವೆಚ್ಚಗಳನ್ನೂ (shipping and handling) ಒಳಗೊಂಡ ಬೆಲೆಯ ವಿವರಗಳು ಹೀಗಿವೆ :

ಯಾವುದೇ ಪ್ರತ್ಯೇಕ ಪುಸ್ತಕದ ಬೆಲೆ : $8
ಮೂರೂ ಪುಸ್ತಕಗಳ ಬೆಲೆ :$20

ಆಸಕ್ತಿ ಇರುವವರು ತಮಗೆ ಬೇಕಾದ ಪುಸ್ತಕಗಳಿಗೆ ಆಗುವ ಬೆಲೆಗೆ ಚೆಕ್‌ ಅನ್ನು Kaveri Kannada Associationನ ಹೆಸರಿನಲ್ಲಿ ಬರೆದು, ಕೆಳಗಿನ ವಿಳಾಸಕ್ಕೆ ಕಳಿಸಿದಲ್ಲಿ ಪುಸ್ತಕಗಳನ್ನು 'ಮೀಡಿಯಾ ಮೇಲ್‌" ಮುಖಾಂತರ ಕಳಿಸಲಾಗುತ್ತದೆ. ದಯವಿಟ್ಟು ನಿಮಗೆ ಯಾವ ಯಾವ ಪುಸ್ತಕಗಳು ಎಷ್ಟೆಷ್ಟು ಪ್ರತಿಗಳು ಬೇಕು ಎಂಬ ವಿವರವಲ್ಲದೆ ನಿಮ್ಮ ವಿಳಾಸವನ್ನು ಕೊಡಲು ಮರೆಯಬೇಡಿ.

Sanjeev Managoliಚೆಕ್‌ ಕಳಿಸಲು ವಿಳಾಸ :
Sanjeev Managoli
2510 Woodrow Wilson Drive
Herndon, VA 20171

ಭಾರತ ಮತ್ತಿತರ ದೇಶಗಳಲ್ಲಿರುವ ಸಹೃದಯರಿಗೆ ಪುಸ್ತಕಗಳನ್ನು ಬೇಕಾಗಿದ್ದಲ್ಲಿ, ಅಂಚೆ ವೆಚ್ಚ ಹೆಚ್ಚಾಗುತ್ತದೆ. ಈ ಬಗ್ಗೆ ಆಸಕ್ತರು ಈ-ಮೇಲ್‌([email protected]) ಮೂಲಕ ಸಂಪರ್ಕಿಸಿ ಆಗುವ ವೆಚ್ಚದ ವಿವರಗಳನ್ನು ಪಡೆಯಬಹುದು.

ವಿ.ಸೂ. : ನಿಮಗೆ ಸುವರ್ಣವಾಹಿನಿ ಬೇಕಾಗಿದ್ದಲ್ಲಿ ಕ್ಷಮಿಸಿ! ಅದರ ಪ್ರತಿಗಳು ಮುಗಿದಿದ್ದು ಆಸಕ್ತ ಓದುಗರಿಗಾಗಿ ಅದರಿಂದ ಆಯ್ದ ಲೇಖನಗಳು ಮತ್ತು ಕವಿತೆಗಳನ್ನು ವೆಬ್‌ ಸೈಟಿನಲ್ಲಿ ಪ್ರಕಟಿಸುವ ಏರ್ಪಾಡು ಮಾಡಲಾಗುತ್ತಿದೆ. ಹೆಚ್ಚಿನ ವಿವರಗಳು ಇಷ್ಟರಲ್ಲಿಯೇ ಲಭ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+