ಫೋಟೊಕಾಲೇ ‘ಟೈ’ ಕಟ್ಟಾಭ್ಯಾಸಃ...

(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನ ಕಾರ್ಯಕರ್ತರ, ಪದಾಧಿಕಾರಿಗಳ, ವಿವಿಧ ಸಮಿತಿಗಳ ಸದಸ್ಯರ ಮತ್ತು ಸ್ವಯಂಸೇವಕರ ಭಾವಚಿತ್ರಗಳನ್ನು ತೆಗೆಯಲು ಏರ್ಪಾಟಾಗುವ 'ಫೋಟೊ ಸೆಷನ್‌" ತುಂಬಾ ವ್ಯವಸ್ಥಿತವಾಗಿ ನಡೆಯತ್ತೆ. ಫೋಟೋದಲ್ಲಿ ಚೆನ್ನಾಗಿ ಬೀಳುವುದಕ್ಕೆ ಕೆಲವರು ಪಡುವ ಸಡಗರ ದೂರನಿಂತು ನೋಡುವುದಕ್ಕೆ ತುಂಬಾ ಮಜಾ ಇರತ್ತೆ.

ಕ್ಷಣಕ್ಷಣಕ್ಕೂ ಟೈ ಬಿಗಿ ಮಾಡಿಕೊಳ್ಳುವುದು, ಸೆರಗು ಸರಿಪಡಿಸಿಕೊಳ್ಳುವುದು , ಮುಂಗುರುಳು ಹಾರದಂತೆ ಎಚ್ಚರವಹಿಸುವುದು, ಬೊಜ್ಜು ಕಾಣದಂತೆ ನರಗಳ ಬಿಗಿಕಟ್ಟವುದು... ಎಲ್ಲ ಸಹಜ. ಈ ಬಗೆಯ ಸೆಷನ್‌ ಇತ್ತೀಚೆಗೆ (ಜೂನ್‌ 2) ಶನಿವಾರ ಇಲ್ಲಿ ಏರ್ಪಟ್ಟಿತ್ತು.. ಸೂಟುಬೂಟುಧಾರಿಗಳು, ಶೇರ್ವಾನಿ-ಜುಬ್ಬಾಧಾರಿಗಳು, ಚಮಕ್‌ಚಮಕ್‌ ರೇಷ್ಮೆಸೀರೆಯುಟ್ಟವರೆಲ್ಲ ತಾವಿದ್ದದ್ದಕ್ಕಿಂತಲೂ ಫೋಟೊದಲ್ಲಿ ಚಂದ ಕಾಣಿಸುವಂತೆ ಮುತುವರ್ಜಿ ವಹಿಸಿಕೊಂಡು ಅವತ್ತು ಅಲ್ಲಿಗೆ ಬಂದಿದ್ದರು.

Ready... Smile... Wait wait wait...

'ಕಠಿಣ ದುಡಿಮೆ ಮಾತು ಕಡಿಮೆ..." ಪಾಲಿಸಿಯ ನಮ್ಮ ಕಾವೇರಿ ಅಧ್ಯಕ್ಷ ಮಾದೇಶ ಬಸವರಾಜು ಅವರಿಗೋ ಕಾರ್ಯಬಾಹುಳ್ಯದ ನಡುವೆ ಫೋಟೊಸೆಷನ್‌ಗೆ ತಯಾರಾಗಲೂ ಬಿಡುವಿಲ್ಲ. ಸಮಿತಿಯ ಇತರ ಸದಸ್ಯರೆಲ್ಲ ಫೋಟೊಭಂಗಿಯಲ್ಲಿ ಕುಳಿತಾಗಿದೆ, ಅವರದಿನ್ನೂ ಕಂಠಲಂಗೋಟಿ (ಟೈ) ಬಿಗಿದಾಗಿಲ್ಲ! ಯುದ್ಧಕಾಲೇ ಶಸ್ತ್ರಾಭ್ಯಾಸಃ ಇದ್ದಂತೆ ಕೊನೆಗೂ ಪ್ರಕಾಶ ಮೋಟಗಿಯವರ ದಿವ್ಯಹಸ್ತದಿಂದ ಕಾವೇರಿ ಅಧ್ಯಕ್ಷರ ಕೊರಳಿಗೆ ಟೈ ಕಟ್ಟಲಾಯ್ತು, ಆಮೇಲೆ ಠಾಕುಠೀಕಾಗಿ ಅಂದದ ಚೆಂದದ ಭಾವಚಿತ್ರಗಳು ಫಳ್ಳನೆ ಬೆಳಕಿನಲ್ಲಿ ಕಿಲಿಕಿಲಿ ನಕ್ಕವು.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+