ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಹೂವುಗಳ ದಳದಲ್ಲಿ ಕನ್ನಡ ಲಾಂಛನ
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಕಾವೇರಿ ಅಶ್ರಯದಲ್ಲಿ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ 2006ರ ದಿನಗಣನೆ ಆರಂಭ !

ಇಂದಿನಿಂದ (2006 ಆಗಸ್ಟ್‌ 1 ಮಂಗಳವಾರ) ಆರಂಭಗೊಂಡು ಸಮ್ಮೇಳನದ ಅಂಕದ ಪರದೆ ಜಾರುವವರೆವಿಗೂ ಈ ಅಂಕಣದಲ್ಲಿ ದಿನಕ್ಕೊಂದು ಚಿತ್ರ, ಜತೆಯಲ್ಲೇ ಅದರ ಚಿಕ್ಕ ಚೊಕ್ಕ ವಿವರವು ‘ಚಿತ್ರ ಚಿತ್ತಾರ - ಚುಟುಕು ವಿಚಾರ ’ ವಾಗಿ ಮೂಡಿಬರಲಿದೆ. ಮುಂದೆ ಸಮ್ಮೇಳನದ ದಿನಗಳಂದು (ಸೆ 1,2,3) ಅವ್ಯಾಹತವಾಗಿ ಬರಲಿರುವ ಸಚಿತ್ರ ವರದಿಗಳ ಪೂರ್ವಭಾವಿ ಯೋಜನೆಯ (Curtain Raiser) ಒಂದು ರೂಪವಿದು.

ಇವತ್ತಿನ ಚಿತ್ರ - ಸಮ್ಮೇಳನದ ಲಾಂಛನ ರೂಪುಗೊಂಡ ಚಿತ್ರಶಾಲೆ, ಮತ್ತು ಲಾಂಛನದ ವಿನ್ಯಾಸಕಾರನ ಭಾವಚಿತ್ರ. ವಾಷಿಂಗ್‌ಟನ್‌ ಸ್ಮಾರಕದ ಹಿನ್ನೆಲೆಯಲ್ಲಿ ಅಮೆರಿಕನ್ನಡಿಗರು ಹಂಪಿಯ ಸ್ವರ್ಣ ರಥವನ್ನು ಸ್ವಾಗತಿಸುವ ಕಲ್ಪನೆ ಹಾಗೂ ಹೂವಿನ ದಳಗಳಲ್ಲಿ ಕನ್ನಡ ಬಾವುಟದ ಚಿತ್ರಣವಿರುವ ಈ ಲಾಂಛನ ಸಮ್ಮೇಳನದ ಅಧಿಕೃತ ಮೊಹರು. ಸಮ್ಮೇಳನದ ಆಸ್ಥಾನಕಲಾವಿದ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಹರಿದಾಸ್‌ ಲಹರಿ ವರ್ಜೀನಿಯಾದಲ್ಲಿನ ತನ್ನ ಮನೆಯಲ್ಲಿ ಲಾಂಛನ ರಚನೆ ಮಾಡಿದಾಗಿನ ಚಿತ್ರ. ಇದರೊಂದಿಗೆ ಈ ಚಿತ್ರಸರಣಿಯನ್ನು ಆರಂಭಿಸುತ್ತಿದ್ದೇವೆ.


ಸಮ್ಮೇಳನದ ಯಶಸ್ಸಿಗಾಗಿ ಅಹರ್ನಿಶಿ ದುಡಿಯುತ್ತಿರುವ ಶಕ್ತಿ-ಸ್ಫೂರ್ತಿ-ಪ್ರೀತಿ ತುಂಬಿದ ಸ್ವಯಂಸೇವಕರ, ಕಾರ್ಯಕರ್ತರ, ಪದಾಧಿಕಾರಿಗಳ ಚಿತ್ರಗಳಷ್ಟೇ ಅಲ್ಲದೆ ಸಮ್ಮೇಳನ ಸಜ್ಜುಗೊಳ್ಳುವಿಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಸ್ತು/ದೃಶ್ಯ/ನೋಟಗಳ ಚಿತ್ರಗಳೂ ಈ ಅಂಕಣದಲ್ಲಿ ಯಾದೃಚ್ಛಿಕವಾಗಿ ಬರಲಿವೆ. ಇಲ್ಲಿ ಸ್ಥಾನಮಾನ ಹಿರಿ-ಕಿರಿ ಇಲ್ಲ, ಪಕ್ಷಪಾತ/ವ್ಯಕ್ತಿನಿಷ್ಠೆಗಳ ಕಿರಿಕಿರಿ ಮೊದಲೇ ಇಲ್ಲ. ಸಮ್ಮೇಳನ ವಾತಾವರಣವನ್ನು ಈಗಿಂದಲೇ ಬಿಲ್ಡ್‌-ಅಪ್‌ ಮಾಡುವತ್ತ ಈ ಒಂದು ಪುಟ್ಟ ಪ್ರಯತ್ನ , ಸಮ್ಮೇಳನದ ‘ವಾರ್ತಾ ಮತ್ತು ಪ್ರಚಾರ’ ಸಮಿತಿಯ ಸಮರ್ಪಣೆ.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 30ದಿನ ಬಾಕಿ ಉಳಿದಿವೆ!!!


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+