ಕೈಯಲ್ಲಿ ಪತ್ರ ಬರೆಯುವ ಸಂಭ್ರಮ ನಿಜಕ್ಕೂ ಅದ್ಭುತ

ಈಗ ಈ ಕಂಪ್ಯೂಟರ್ ಯುಗದಲ್ಲಿ... ಇಮೇಲ್, ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳು ಬಂದ ಮೇಲೆ ಜನ ಹೆಚ್ಚು ಹೆಚ್ಚಾಗಿ ಬರೀ ಆನ್ ಲೈನ್ ಮೆಸೇಜಿಂಗ್, ಎಸ್ಎಮ್ಎಸ್, ಚಾಟ್ನಲ್ಲೆ ತಮ್ಮ ಪ್ರೇಮ ನಿವೇದನೆ, ಪ್ರೇಮ ಸಂಭಾಷಣೆ ನಡೆಸೋದಿರಲಿ, ಪ್ರೇಮಿಗಳ ದಿನಾಚರಣೆ, ಅಮ್ಮ - ಅಪ್ಪಂದಿರ ದಿನಾಚರಣೆ, ಹಬ್ಬ ಹರಿದಿನಗಳು ಏನೇ ಬರಲಿ.. ಆನ್ ಲೈನ್ ನಲ್ಲಿ ಸಿಗೋ ರೆಡಿಮೇಡ್ ಇ-ಗ್ರೀಟಿಂಗ್ ಕಾರ್ಡ್ ಅನ್ನು ಪಟ್ ಅಂತ ಕಳಿಸೋ ಪ್ರವೃತ್ತಿ ಜಾಸ್ತಿಯಾಗಿರೋದಿಂದ್ರ ಪೋಸ್ಟ್ ಮ್ಯಾನ್ಗೆ ಕೆಲಸವೇ ಕಡಿಮೆಯಾಗಿರೋದು ಕಟು ಸತ್ಯ!
ಮೊನ್ನೆ ಅಮೆರಿಕಾದಲ್ಲಿ ನ್ಯೂಸ್ ಚಾನೆಲ್ನಲ್ಲಿ, ಸುಮಾರು 400 ಪೋಸ್ಟ್ ಆಫೀಸ್ಗಳನ್ನೂ ಮುಚ್ಚುತ್ತಿರುವ, ಅದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ವಿಷಯ ಕೇಳಿ ಮನಸ್ಸಿಗೆ ಬೇಜಾರಾಗಿತ್ತು.
ಸ್ವತಃ ಕೈಯ್ಯಾರೆ ಪ್ರೀತಿಯಿಂದ ಪತ್ರ ಬರೆದು ಹಾಕಿದರೆ ಅದರಿಂದ ಸಿಗುವ ನಲಿವು, ಪ್ರೀತಿ, ಮಜಾ.. ಇ-ಮೀಡಿಯಾದಲ್ಲಿ ಕಳಿಸಿದ್ದಕ್ಕಿಂತ ಹೆಚ್ಚು ಎಂಬ ಭಾವನೆ ನನ್ನದ್ದು. ಈಗಲೂ ಸಾಧ್ಯವಾದಾಗಲೆಲ್ಲ ಮಾತೃಭೂಮಿ ಭಾರತದಲ್ಲಿರುವ ಅಪ್ಪ-ಅಮ್ಮಗೆ ಪತ್ರ ಬರೆದು ಹಾಕುತ್ತಿರುವೆ! ನನ್ನ ಮನಕ್ಕೂ ತೃಪ್ತಿ, ಬರವಣಿಗೇನೂ ಇಂಪ್ರೂವ್ ಆಗುತ್ತೆ, ಮನೆಯವರೊಂದಿಗೆ ಪ್ರೀತಿನೂ ಜಾಸ್ತಿ ಆಗುತ್ತೆ. ಪೋಸ್ಟ್ ಮ್ಯಾನ್ಗು ಕೆಲಸ ಹೆಚ್ಚಿ ಅವರಿಗೂ ಜೀವನದಲ್ಲಿ ನೆಮ್ಮದಿ ಸಿಗುತ್ತೆ... ಅಲ್ವಾ? ನೀವು ಹಾಗೇ ಸ್ವಲ್ಪ ರೂಢಿ ಮಾಡ್ಕೊಳ್ಳಿ.
ಮಡದಿ ನೀರು (ನಿರುಪಮ) ಬೇಸಿಗೆ ರಜ ಎಂದು ಮಗನೊಂದಿಗೆ ಊರಿಗೆ ಹೋಗಿದ್ದಾಳೆ... ಸರಿ... ಒಂದು ಪತ್ರ ಗೀಚಲು ಪ್ರಾರಂಭ ಮಾಡಬೇಕು ಈಗ... ಏನು ಬರೀ ಬೇಕು ಅಂತಾನೆ ಹೊಳಿತಿಲ್ಲ ತಲೆಗೆ.. ಸ್ವಲ್ಪ ಹೆಲ್ಪ್ ಮಾಡ್ತಿರಾ?
ಓ ನನ್ನ ಪ್ರಿಯತಮೆ ನೀರೂ..
ನೀ ಬೇಗ ಬಂದು ನನ್ನ ಸೇರು
ನೀ ಇಲ್ಲದ ಜೀವನ ಬಲು ಬೋರು..
ನೀ ಬೇಗ ಬರದಿದ್ದರೆ... ಕುಡಿಯುವೆ ಬರೀ ದಾರು!












Click it and Unblock the Notifications