ಮೊದಲ ನೋಟಕ್ಕೇ ಒಪ್ಪಿಗೆಯಾಗಿದ್ದಳು ಸುಗುಣ

(ಕಥೆಯ ಮುಂದಿನ ಭಾಗ...) ಅಂತು ಅವರ ಮನೆ ಮುಟ್ಟಿದಾಗ ಮಧ್ಯಾನ್ಹ ಮೂರುವರೆ ಗಂಟೆ ಆಗಿತ್ತು. ಸುತ್ತಲು ಮರಗಿಡಗಳ ಮಧ್ಯೆ ದೊಡ್ಡದಾದ ಹೆಂಚಿನ ಮನೆ, ಮನೆಯ ಮುಂದಿಯ ಕೈದೋಟದಲ್ಲಿ ನಾನ ಬಗೆಯ ಹೂವಿನ ಗಿಡಗಳು, ಕೂರಲು ದೊಡ್ಡ ಜಗಲಿ. ಕೈ ಕಾಲು ತೊಳೆಯಲು ಬಿಸಿ ಬಿಸಿ ನೀರು ತಂದು ಕೊಟ್ಟ ಒಬ್ಬ ಹುಡುಗ. ಆಮೇಲೆ ಗೊತ್ತಾಯಿತು ಅವ ಹೈಸ್ಕೂಲ್ ಓದುತ್ತಿರುವ ವಧುವಿನ ತಮ್ಮ ಎಂದು. ಎಲ್ಲರ ಕಣ್ಣುಗಳು ನನ್ನ ಮೇಲೆ ಇವೆ ಅಂತ ಭಾಸವಾಗಿ ಒಂತರಾ ಮುಜುಗರವಾಗಿತ್ತು. ನಾನು ಅತ್ತ ಇತ್ತ ನೋಡಿದಾಗ ಮನೆಯ ಅಟ್ಟದ ಮೇಲಿನ ಕಿಟಕಿಯಿಂದ ಎರಡು ಕಣ್ಣುಗಳು ನನ್ನನ್ನೇ ನೋಡುತ್ತಿರುವುದು ಕಂಡಿತು. ನಾನು ತಲೆಮೇಲೆತ್ತಿ ಅತ್ತ ನೋಡಿದ ಕ್ಷಣ ಕಿಟಕಿಯ ಪರದೆ ಸರಿದಿತ್ತು!

ಬಿಸಿನೀರಲ್ಲಿ ಮುಖದೊಳೆದು ಫ್ರೆಶ್ ಆಗಿ ಬಿಸಿ ಕಾಫಿ ಕುಡಿದಾಗ ಸ್ವಲ್ಪ ಆರಾಮೆನಿಸಿತ್ತು. ಒಳಗಡೆ ಹೋದಮೇಲೆ ಎಲ್ಲರ ಪರಿಚಯವಾಗಿತ್ತು. ಹುಡುಗಿಯ ಅಪ್ಪ-ಅಮ್ಮ, ತಮ್ಮ, ಚಿಕ್ಕಪ್ಪನ ಪರಿವಾರ, ಅವರ ಅಜ್ಜಿ ಹೀಗೆ ಮನೆ ತುಂಬಿತ್ತು. ನೋಡಿದರೆ ಗೊತ್ತಾಗುತ್ತಿತ್ತು ಅವಿಭಕ್ತ ಕುಟುಂಬ ಎಂದು. ಸ್ವಲ್ಪ ಹೊತ್ತು ಮಾತುಕತೆಯಾದ ಬಳಿಕ ಹುಡುಗಿಯ ತಂದೆ "ಸುಗುಣ ಬಾರಮ್ಮ" ಅಂತ ಕರೆದಾಗ, ಗೊತ್ತಾಗಿತ್ತು ಅವಳ ಹೆಸರು ಸುಗುಣ ಎಂದು. ಕಾಲ್ಗೆಜ್ಜೆ-ಬಳೆಗಳ ಶಬ್ದ ಕೇಳಿಬಂದಂತೆ ಅವರಮ್ಮನ ಜೊತೆಯಲ್ಲಿ ಹುಡುಗಿ ನಿಧಾನವಾಗಿ ಬಂದು ಅಲ್ಲಿ ಕೂತಿದ್ದ ಹಿರಿಯರಿಗೆ ನಮಸ್ಕರಿಸಿ ಕುಳಿತಾಗ ನಾ ಹಾಗೇ ಅವಳನ್ನು ದಿಟ್ಟಿಸಿದ್ದೆ. ಮೊದಲು ಅಪ್ಪ- ಅಮ್ಮ ವಿಚಾರಣೆ ಮಾಡಿದ ಮೇಲೆ ಅಷ್ಟೊತ್ತಿಗೆ ನಂಗೂ ಸ್ವಲ್ಪ ಧೈರ್ಯ ಬಂದಿದ್ದರಿಂದ ನಾನು ಕೇಳಿದೆ. ಏನು ಓದಿರುವುದು, ಯಾವ ಕಾಲೇಜ್ ಎಂದು.

ಸುಗುಣ ನೋಡುವುದರಲ್ಲಿ ಸುಂದರಿಯಲ್ಲದೆ ಅವಳ ಧ್ವನಿಯು ಸಹ ಇಂಪಾಗಿತ್ತು. ಅಷ್ಟೊತ್ತಿಗೆ ಬಿಸಿ ಉಪ್ಪಿಟ್ಟು, ಖಾರ-ಮೈಸೂರು ಪಾಕ್ ಇದ್ದ ಪ್ಲೇಟ್ಸ್ ಬಂದಿದ್ದವು. ದೂರದ ಪ್ರಯಾಣ ಮಾಡಿದ್ದಕ್ಕೋ ಅಥ್ವಾ ಸ್ವಲ್ಪ ಮಳೆಯಲ್ಲಿ ನೆನೆದು ನಡೆದು ಬಂದಿದ್ದಕ್ಕೋ ಹೊಟ್ಟೆಗೆ ಹಸಿವೂ ಹಾಗಿತ್ತು. ನಮ್ಮ ಸುಗುಣಳೇ ಮಾಡಿದ್ದು ಅಂತ ಅವರಜ್ಜಿಯಿಂದ ಶಿಪಾರಸ್ಸು ಬಂದಿತ್ತು! ಹಾಗೇ ಎಲ್ಲರು ಮಾತಾಡುತ್ತ ಇದ್ದಾಗ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಆ ವೇಳೆಗೆ ಆಗಲೇ, ಇವರು ನಮಗೆ ದೂರದ ಸಂಬಂಧನೆ ಅಂತ ಯಾವುದೋ ಒಂದು ಸಂಬಂಧದ ಎಳೆಯನ್ನು ಪತ್ತೆ ಮಾಡಿದ್ದರು ನನ್ನ ಅಮ್ಮ-ಅಪ್ಪ. ಅವಳ ಆ ಆಡಂಬರವಿಲ್ಲದ ಸರಳ ಸುಂದರತೆ, ಅವರ ಮನೆಯ ಪರಿಸರ, ಆ ಮನೆಯವರ ಮಾತುಕತೆ - ಶ್ರೀಮಂತರಾದರೂ ಎದ್ದು ಕಾಣುತ್ತಿದ್ದ ಸರಳತೆ ಎಲ್ಲ + ಪಾಯಿಂಟ್ಸ್ ಆಗಿ ಮನಸ್ಸಲ್ಲೇ ಒಪ್ಪಿದ್ದೆ ಅವಳನ್ನು.

ಆ ವೇಳೆಗೆ ಸಂಜೆ ಆರಾಗಿ ಮತ್ತೆ ಮಳೆಯ ಆರ್ಭಟ ಜೋರಾಗಿತ್ತು. ಇದರಲ್ಲಿ ಹೇಗಪ್ಪ ನಡೆದು ಹೋಗುವುದು ಅಂತ ಇರುವಾಗಲೇ, ಈ ಮಳೆ ಗಾಳಿ ಕತ್ತಲಲ್ಲಿ ಪ್ರಯಾಣ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ, ಆರಾಮಾಗಿ ಈದಿನ ಇಲ್ಲೇ ಇದ್ದು ಹೋಗಿ ಅಂತ ಅವರೆಲ್ಲ ಹೇಳಿದಾಗ ಅಪ್ಪ-ಅಮ್ಮ ಹೂ ಅಂದಿದ್ದರು. ಅವಳ ಜೊತೆ ಮಾತನಾಡಲು, ಮತ್ತೆ ಅವಳನ್ನು ನೋಡಬಹುದಲ್ಲ ಎಂದು ನೆನಸಿಕೊಂಡು ನಂಗೂ ಮನದಲ್ಲೇ ಒಳ್ಳೆಯದೇ ಆಯಿತು ಅನ್ನಿಸಿತ್ತು.

ಮೊದಲ ನೋಟಕ್ಕೆ ಒಪ್ಪಿಗೆಯಾಗಿದ್ದಳು
ಆ ಮಲೆನಾಡಿನ ಸರಳ ಸುಂದರಿ ಸುಗುಣ..
ಅಲ್ಲೇ ಉಳಿದು, ಅವಳನ್ನು ಹೆಚ್ಚು ಹೊತ್ತು ನೋಡಲು
ಚಾನ್ಸ್ ಮಾಡಿ ಕೊಟ್ಟಿದ್ದ ಆ ಮಳೆರಾಯ ವರುಣ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+