ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯಾ ಪರೀಕ್ಷೆಗಾಗಿ ಇಂಡಿಯಾಗೆ ಹೊಂಟಿತು ನನ್ನ ಸವಾರಿ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

(ಕಥೆಯ ಮುಂದಿನ ಭಾಗ...) ಬೆಂಗಳೂರಿಗೆ ಬಂದಿಳಿದಾಗ ಅಪ್ಪ - ಅಮ್ಮ ಹಾಗು ಮನೆಯವರನ್ನೆಲ್ಲ ನೋಡಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಇಲ್ಲಿಗೆ ಬರುವ ಮೊದಲು ನರಪೇತಲನಂತಿದ್ದ ನಾ ಸ್ವಲ್ಪ ಬೆಳ್ಳಗೆ ಹಾಗು ದಷ್ಟಪುಷ್ಟ ಆಗಿದ್ದ ನೋಡಿ ಎಲ್ಲರು, 'ಓಹ್, ನಿಂಗೆ ಇಲ್ಲಿನ ನೀರಿಗಿಂತ ಅಮೆರಿಕ ನೀರು ಚೆನ್ನಾಗಿ ಒಗ್ಗಿದೆ ಅಂತ ಕಾಣುತ್ತೆ' ಅಂದಿದ್ದರು! ಆ ದಿನ ಅಣ್ಣನ ಮನೆಯಲ್ಲಿ ಎಲ್ಲರೊಂದಿಗೆ ನಕ್ಕು ನಲಿದು ಮಾತಾಡೋದರಲ್ಲಿ ಟೈಮ್ ಪಾಸ್ ಆಗಿದ್ದೆ ತಿಳಿಲಿಲ್ಲ. ರಾತ್ರಿ ಊಟ ಆದಮೇಲೆ ಮನಸಲ್ಲೇ ಯೋಚಿಸುತ್ತಿದ್ದೆ. ಯಾಕೆ ಅಪ್ಪ, ಅಣ್ಣ ಇನ್ನೂ ಹುಡುಗಿಯರ ವಿಷಯ ಎತ್ತಾಯಿಲ್ಲ ಅಂತಾ? (ಬಾಯ್ಬಿಟ್ಟು ಕೇಳಲಿಕ್ಕೆ ಅಂಜಿಕೆ, ಬಿಗುಮಾನ). ದೂರದ ಪ್ರಯಾಣ ಮಾಡಿ ಬಂದು ಸುಸ್ತು ಆಗಿದ್ದಿಯ, ಮಲಗಿ ರೆಸ್ಟ್ ತೊಗೋ, ಮಿಕ್ಕಿದ್ದನ್ನು ಬೆಳಿಗ್ಗೆ ಮಾತಾಡೋಣ ಅಂತ ಅಪ್ಪ ಹೇಳಿದಾಗ, ಪೆಚ್ಚು ಮೊರೆ ಹಾಕೊಂಡು ಕನಸ ಕಾಣುತ್ತ ಹಾಗೆ ನಿದ್ರಾದೇವಿಯ ತೆಕ್ಕೆಯಲ್ಲಿ ಜಾರಿದ್ದೆ.

ಬೆಳೆಗ್ಗೆ ನ್ಯೂಸ್ ಪೇಪರ್ ಹಿಡಿದು ಕಾಫಿ ಕುಡಿತಾ ವರಾಂಡದಲ್ಲಿ ಕೂತಿದ್ದಾಗ ಅಪ್ಪ-ಅಮ್ಮ ಇಬ್ಬರೂ ಬಂದು ವಧುಗಳ ಫೋಟೋ ತೋರಿಸಿ, 'ಬಂದ ಹಲವಾರು ಸಂಬಂಧಗಳಲ್ಲಿ ಒಂದೆರಡನ್ನು ಶಾರ್ಟ್ ಲಿಸ್ಟ್ ಮಾಡಿದಿವಿ.. ನೀನು ನೋಡು.. ನಿಂಗೆ ಇಷ್ಟ ಆದರೆ ಮುಂದುವರಿಬಹುದು' ಅಂತ ಹೇಳಿದರು. ಬೆಂಗಳೂರಿನ ಹಾಗು ಶಿವಮೊಗ್ಗ ಕಡೆಯಿಂದ ಒಂದು ಹುಡುಗಿಯ ಫೋಟೋ ಶಾರ್ಟ್ ಲಿಸ್ಟ್ ಮಾಡಿ ಇಟ್ಟಿದ್ದರು. ಅದರಲ್ಲಿ ಬೆಂಗಳೂರಿನ ಒಂದು ಹುಡುಗಿ ಬಹು ಸುಂದರವಾಗಿ ಕಾಣುತ್ತಿದ್ದಳು. ಬೇಗ ಎಲ್ಲ ರೆಡಿ ಆಗಿ, ಮಧ್ಯಾನ್ಹದ ಸುಮಾರಿಗೆ ಇಲ್ಲೇ ಬೆಂಗಳೂರಿನಲ್ಲಿರುವ ಹುಡುಗಿಯ ಮನೆಗೆ ಹೋಗಿಬಂದು ನಾಳೆ ರಾತ್ರಿ ಟ್ರೈನಿಗೆ ಶಿವಮೊಗ್ಗಕ್ಕೆ ಹೋಗಬಹುದು ಅಂತ ಅವರಂದಾಗ ಎದ್ದು ರೆಡಿ ಅಂದಿದ್ದೆ.

ಕಾರು ಅವರ ಮನೆಯ ಬಳಿ ನಿಂತಾಗ ಏಕೋ ಏನೋ ಒಂತರಾ ಕಸಿವಿಸಿ. ಮೊದಲ ಬಾರಿಗೆ ವಧು ನೋಡಲು ಹೋಗುತ್ತಿರುವುದು. ಯಾವ ರೀತಿ ಮಾತಾಡಿಸೋದು ಅಂತಾ? ನೋಡಲಿಕ್ಕೆ ದೊಡ್ಡ ಬಂಗಲೆ ತರಹ ಇತ್ತು. ಗೇಟ್ನಲ್ಲಿ ಜೋರಾಗಿ ಬೊಗಳುತ್ತಿದ್ದ ಎರಡು ದೊಡ್ಡ ಡಾಬರ್ಮನ್ಗಳು ನಮ್ಮನ್ನು ಮೊದಲಿಗೆ ಸ್ವಾಗತಿಸಿದವು. ಒಳಗಡೆ ಕರೆದುಕೊಂಡು ಹೋದವ, ಕುಳಿತುಕೊಳ್ಳಿ, ಮನೆಯವರನ್ನು ಕರೀತೀನಿ ಅಂದಾಗ ಅವ ಕೆಲಸದವ ಅಂತ ಗೊತ್ತಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಬಂದ ಹುಡುಗಿಯ ಅಪ್ಪ-ಅಮ್ಮನನ್ನು ನಮ್ಮನ್ನು ಕರೆದೊಯ್ದಿದ್ದ ಮದುವೆ ಬ್ರೋಕರ್ ಪರಿಚಯಿಸಿಕೊಟ್ಟರು.

ಹಾಗೆ ಉಭಯ ಕುಶಲೋಪರಿ ನಡೆಯುವಾಗ ಒಂದು ಹುಡುಗಿ ಟೀ/ಬಿಸ್ಕೆಟ್ ಟ್ರೇ ತಂದಿಟ್ಟಾಗ ಕಣ್ಣೆತ್ತಿ ನೋಡಿ.. mostly ಬೇರೆ ಯಾರು ಇರಬೇಕೆಂದು ಅಂದುಕೊಳ್ಳುವಾಗಲೇ, ಇವಳೇ ನಮ್ಮ ಮಗಳು. ಹೆಸರು "ಆಶಾ" ಅಂತ ಅಂದಾಗ ಸ್ವಲ್ಪ ಕನ್ಫ್ಯೂಸ್ ಆಗಿತ್ತು. ಫೋಟೋದಲ್ಲಿ ಮಿಂಚುತ್ತಿದ್ದ ಸುಂದರ ಹುಡುಗಿ ಇವಳೇನಾ ಅಂತ ಪಕ್ಕದಲ್ಲೇ ಕುಳಿತಿದ್ದ ಅಣ್ಣನನ್ನು ಕಣ್ಸನ್ನೆಯಲ್ಲೇ ಕೇಳಿದಾಗ ಅವ ನನ್ನ ನೋಡಿ ನಕ್ಕಿದ್ದ. ಎಲ್ಲಿ ಕೆಲಸ ಮಾಡ್ತೀರಿ, ಅಮೆರಿಕ ಹೋಗಿ ಎಷ್ಟು ವರ್ಷ ಆಯಿತು, ಕಾರು ಇದೆಯಾ, ಸಂಬಳ ಎಷ್ಟು? ಒಂದರ ಮೇಲೆ ಒಂದು ಪ್ರಶ್ನೆಗಳು ಹುಡುಗಿಯ ಅಪ್ಪನಿಂದ. ನಾ ಏನರ ಕೇಳೋಣ ಅಂದು ಕೊಳ್ಳುತ್ತಿರುವಾಗಲೇ ಅವರು, 'ನಾನು ಎಕ್ಸ್-ಕಾರ್ಪೊರೇಟರ್, ಒಂದೆರಡು ಚೌಲ್ಟ್ರೀಸ್, ಸಿನಿಮಾ ಥಿಯೇಟರ್ಸ್, ಜಮೀನು ಇದೆ ನೋಡ್ರಿ. ಇವಳೊಬ್ಬಳೆ ಮಗಳು-HR ಆಗಿ ಒಂದು ಪ್ರೈವೇಟ್ ಕಂಪನಿನಲ್ಲಿ ಕೆಲಸ ಮಾಡ್ತಿದಾಳೆ' ಅಂತಾ ಅವರು ಹೇಳುತ್ತಿದ್ದರೆ, ಯಾಕೋ ನನ್ನ ಮನದಲ್ಲಿ ಅವರ ಶ್ರೀಮಂತಿಕೆಯ ಗತ್ತು ಗೋಚರಿಸುತ್ತಿತ್ತು. ಹೇಗೋ 15-20 ನಿಮಿಷಗಳಾದ ಬಳಿಕ ಸರಿ ಬರ್ತಿವಿ, ಜಾತಕ ಚೆಕ್ ಮಾಡಿ ಹೇಳ್ತಿವಿ ಅಂತ ಹೊರಗಡೆ ಬಂದು ಉಸ್ಸ್ ಅಂತ ಕಾರಲ್ಲಿ ಕುಳಿತಿದ್ದೆ. ಆಗ ಅಣ್ಣ ಹೇಳಿದ "ಕೆಲವೊಮ್ಮೆ ಈಗಾಗುತ್ತೆ, ಫೋಟೋದಲ್ಲಿ ಕಾಣೋ ರೀತಿನೇ ಬೇರೆ, ರಿಯಲ್ ಆಗಿ ಕಾಣಿಸೋದೆ ಬೇರೆ, ಎಲ್ಲ ಜಿಕೆ ವಾಲೆ ಫೋಟೋ ಸ್ಟುಡಿಯೋ ಸ್ಪೆಷಲ್ ಎಫ್ಫೆಕ್ಟ್ಸ್" ನಂಗಂತೂ "ಪ್ರಥಮ ಚುಂಬನದಲ್ಲೇ ದಂತ ಭಗ್ನ" - ಅನ್ನೋ ಗಾದೆ ನೆನಪಾಗಿತ್ತು.

ಫೋಟೋದಲ್ಲಿನ ಆ ಸುಂದರ ಹುಡುಗಿಯ ನೋಡಿ
ಅಂದುಕೊಂಡೆ .. ಹಾಕುವೆ ಇವಳಿಗೇ ಹೂವಿನ ಮಾಲೆ
ಅಣ್ಣ ಹೇಳಿದಾಗ ತಿಳಿಯಿತು, ಅವಳ ಸ್ಪೆಷಲ್
ಎಫ್ಫೆಕ್ಟ್ಸ್ ಫೋಟೋ ತೆಗೆದದ್ದು ಆ ಜಿ.ಕೆ. ವಾಲೆ!

English summary
Inchara, a Kannada short story by Nagaraja Maheswarappa, America. The true story is about NRI Kannadiga searching for a suitable bride in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X