ಮೂಲ್ಕಿ ಕವನ : ವಾದಕ ಸಾಧಕ ಮಹಾ ಸಾಧಕ

ವಾದಕ ಸಾಧಕ ಮಹಾ ಸಾಧಕ
ಕರ್ನಾಟಕ ಸಂಗೀತ ವಾದಕ
ನಾದಪಾಲ ಕದ್ರಿ ಗೋಪಾಲ
ಸ್ಯಾಕ್ಸೋಫೋನ್ ನಾದಲೋಲ

ನಾದ ಬ್ರಹ್ಮನು ವೀಣಾಪಾಣಿಯು
ನಾದ ಶರೀರ ಪರಶಿವ ಶಿವೆಯು
ಮೋಹನ ಮುರಳಿ ನಾದ ಲಕ್ಷ್ಮಿಯು

ಒಲಿದು ಉಲಿಯುತಿರುವುದೋ...!

Tribute to Saxophone exponent Kadri Gopalnath

ಸನ್ಮೊಹಕವಾದ ಮೋಹಕ ನಾದ
ಆಮರ ಗಾನವು ಮನಮೊಹಕವು
ಒಳ ಹೃದಯದಾಳದಿಂದ ಚಿಮ್ಮುವ
ಹೊರಹೊಮ್ಮುವ ಮಧು ಮಧುರವದು
ಅತಿ ಮಧುರ ಗಾನ ಗಾನಾಮೃತವು

ಅಲೆ ಅಲೆಯಾಗಿ ಸುಳಿ ಸುಳಿಯಾಗಿ
ಧಾರಾಕಾರ ವರ್ಷ ಆಕರ್ಷಕವಾಗಿ
ಧನ್ಯತೆ ತುಂಬಿದ ಮಾನ್ಯ ಅಸಮಾನ್ಯ
ಸಂಗೀತ ಗೀತೆ ಹ್ರುದಯಗೀತೆಯಾಗಿ...

ಜನಮನ ತನುಮನ ಲೀನ ತಲ್ಲೀನ
ಕಾಲ ತಾಳ ನಾದದಲಿ ವಿಲೀನ ಸುಲೀನ
ನುಡಿಸಿ ಆಡಿಸಿ ಆಲಿಸಿ ಲಾಲಿಸುವ
ಇವ ಶ್ರೀಕೃಷ್ಣನ ಕೊಳಲ ನಾದಕೆ
ಸರಿಸಾಟಿ ಸರಿ ಗಪ ಮಪ ದಪದಲಿ...

ನುಡಿಸುತರಿರಲಿ ಮಿಡಿಸುತರಿರಲಿ
ತನುಮನಗಳನು ತಣಿಸುತರಿರಲಿ
ಗಾನಸಾಗರ ಕ್ಷೀರಸಾಗರವಾಗಲಿ
ಜನಸಾಗರದ ಆನಂದ ಆತ್ಮಾನಂದ
ಚಿದಾನಂದ ಸಾಗರದ ಆಗರವಾಗಲಿ...!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+