ನಾವು ವಿನಾಕಾರಣ ಕಣ್ಣೀರು ಹಾಕುವ ಮೊಸಳೆ!
ಆಯ್ಕೆ ನನ್ನದು ಎಂದುಲಿದಳೊಬ್ಬ
ಲಲನಾಮಣಿ|
ಸೌಂದರ್ಯದ ಖಣಿ
ಸ್ವಚ್ಛಂದದ ಶಿಖಾಮಣಿ|
ಉಳಿದವರೆಲ್ಲ ಹಳಿದರವಳ
ಸಾರಿ ಸಾರಿ|
ದುರಾಚಾರದ ಮಾದರಿಯ
ತರಿಯಿರೆಂದು ಹೇಳಿದರು ಬಾರಿ ಬಾರಿ| [ಜೇನುಗೂಡಿಗೆ ಕಲ್ಲು ಹೊಡೆದ #MyChoice ಜಾಹೀರಾತು]

ಅತಿ ಸ್ವಾತಂತ್ರ್ಯ ಸ್ವೇಚ್ಛಾಚಾರ
ಎಂದು ಕೂಗಿ ದಣಿದರು
ಎಂಥ ಕಾಲ ಬಂತೆಂದರು
ಲೇಖನಗಳನೇಕದಲ್ಲಿ
ಮಂಡಿಸಿದರು ಖಂಡಿಸಿದರು||
ರಾಯರೆ ಸ್ವಲ್ಪ ತಡೆಯಿರಿ
ಯಾವುದೋ ನಟನಾಮಣಿ
ಹೇಳಿಕೊಂಡಿದೆ ಸ್ವಲ್ಪ ವಿಚಾರ ಮಾಡಿಕೊಂಡಿದೆ ಅಲ್ಪ ಪ್ರಚಾರ
ಅದು ಹೇಳಿದ ಮಾತ್ರಕ್ಕೆ
ಹೆಣ್ಣು ಹುಟ್ಟುವ ಮೊದಲೇ
ಹೊಸಕಿ ಹಾಕುವ ನಾವು
ಕೊಡುವೆವೆ ಆಯ್ಕೆಯ ಹಕ್ಕು?
ಹೆಜ್ಜೆ ಹೊರಗಿಟ್ಟರೆ
ಹದ್ದು ತಪ್ಪುವ ನಾವು
ನೀಡುವೆವೆ ಸ್ವತಂತ್ರವಾಗಿ
ಬಾಳುವ ಬದುಕು?
ಇಲ್ಲ ಬಿಡಿ
ನಮ್ಮದು ಬರೀ ಬೊಗಳೆ!
ನಾವು ವಿನಾಕಾರಣ ಕಣ್ಣೀರು
ಹಾಕುವ ಮೊಸಳೆ!! [ಹೆಣ್ಣಿನ ಶೋಷಣೆ ಬಿಂಬಿಸುವ ಪಾಂಚಾಲಿಕಾ ಪುಸ್ತಕ]
ಈ ಕಪಟ ಸೋಗಿನ
ಮೇಲೆ ತೆರೆಯೆಳೆಯಲು
ಮಹಾತೆರೆಯಾಗಿ
ಬರಬೇಕಾಗಿದೆ ಬದುಕು|
ಬೇಕೆನಿಸುತ್ತದೆ ಕೆಲವೊಮ್ಮೆ
ಹಳೆಯದರ ಗೋರಿಯ ಮೇಲೆ
ಹೊಸದನ್ನು ಕಟ್ಟುವ
ನಿಹಿಲಿಸ್ಟರ ದುಡುಕು|| [ದೀಪಿಕಾ ಎದೆ ಸೀಳುನೋಟ ವಿವಾದದ ಮೇಲೆ ವಾರೆನೋಟ]












Click it and Unblock the Notifications