ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು
ಅರಿಯದ ಹಸುಳೆಯ ಬಿಟ್ಟು
ಹರೆಯದ ಮಡದಿಯ ತೊರೆದು
ಹುತಾತ್ಮನಾದೆ ಹನುಮಂತಪ್ಪ
ನಿನ್ನ ಪ್ರಾಣಾರ್ಪಣೆಗೆ ಇಲ್ಲವೆ ಬೆಲೆ
ಹರಡಿದೆ ಎಲ್ಲೆಡೆಗೆ ದ್ರೋಹಿಗಳ ಬಲೆ|
ದೇಶದಸ್ತಿತ್ವವನೆ ಪ್ರಶ್ನಿಸುವ ಭಂಡರು
ದೇಶವಿರೋಧಿ ಕಾಯಕಗಳ ಪುಂಡರು
ನಿಯತ್ತಿರದ ನೀಚರೇ ಎಲ್ಲ ಕಡೆಗೆ
ಬುದ್ಧಿಜೀವಿಗಳ ಸೋಗು ಹಾಕುತಿಹರು
ಗೆದ್ದಲಿನ ಹಾಗೆ ದೇಶ ಕೆಡಿಸುತಿಹರು| [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

ದೇಶಭಕ್ತಿಯ ದಿವ್ಯ ದೇಗುಲಗಳೆನಿಸಿದ
ಯುವಶಕ್ತಿಯ ಉಚ್ಛ ಮಂದಿರಗಳೆನಿಸಿದ
ವಿಶ್ವವಿದ್ಯಾಲಯಗಳೊಳಗೆ ಇಂದು
ಶತ್ರುಗಳ ಜಯಕಾರ ಮೊಳಗುತಿಹುದು
ಅರಿಗಳ ಠೇಂಕಾರ ಕೆಣಕುತಿಹುದು| [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ನಿನ್ನ ಮಹತ್ತರ ಸಮರ್ಪಣೆಗೆ
ಅಸಮಾನ ತ್ಯಾಗದ ಉದಾಹರಣೆಗೆ
ಪಾತ್ರರೆ ಈ ಹುಲು ಜೀವಿಗಳು?
ಸ್ವಂತ ತಾಯಿಗೆ ಎರಡು ಬಗೆಯುವವರು
ಅರಿವಿನ ಜ್ಯೋತಿಗೆ ಬೆನ್ನು ಹಾಕಿದವರು|
ದಂತದರಮನೆಗಳಲಿ ಹೊರಳಿ
ಸುಪ್ಪತ್ತಿಗೆಯ ಸುಖದಲ್ಲಿ ಉರುಳಿ
ರಾಷ್ಟ್ರ ಭಕ್ತರನು ಜರಿಯುವರು ಇವರು
ಅದಾವ ಹೊಸ ಕುಭಾಷ್ಯ ರಚಿಸುತಿಹರು
ವಿಭಜಿಸುವ ಹೊಸ ನೀತಿ ಮಸೆಯುತಿಹರು? [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]
ಮತ್ತೊಮ್ಮೆ ಬಾ ಹನುಮಂತಪ್ಪ ನೀ
ವೀರ ಪುತ್ರರ ಕೆಚ್ಚೆದೆಯ ಕಿಡಿಯಾಗಿ
ತಾಯಿ ಭಾರತಿಯ ಕಂದರಾಗ್ರಣಿಯಾಗಿ
ಮೆಟ್ಟಿ ಹಾಕಲು ಕೆಟ್ಟ ದ್ರೋಹಗಳನು
ಸರಿದಾರಿಗೆಳೆಯಲು ಮುನಿದ ಮನಗಳನು|
ವಿಭಜಿಸುವ ಕೂಟನೀತಿಯದು ಸಾಕಾಗಿದೆ
ಒಂದುಗೂಡಿಸುವ ಪ್ರಣತಿಯದು ಬೇಕಾಗಿದೆ
ಹುಟ್ಟಿ ಬಾ ಹನುಮಂತಪ್ಪ ಹಣತೆಯನು ಬೆಳಗಲು
ಒಡೆಯುವ ಮತ ಪಂಥಗಳ ದಮನಕಾಗಿ
ಒಡೆದ ಹೃದಯಗಳ ನೋವ ಶಮನಕಾಗಿ|












Click it and Unblock the Notifications