ಒಬಾಮ? ರಾಮ್ನಿ? ಯಾರು ಹಿತವರು ಇವರಿಬ್ಬರೊಳಗೆ?

Barack Obama Vs Mitt Romney
ಒಬಾಮ? ರಾಮ್ನಿ? ಯಾರು ಹಿತವರು ನಿನಗೆ ಇವರಿಬ್ಬರೊಳಗೆ?

ಒಬಾಮ ನೆನಪಿಸುವನು ಒನಕೆ ಒಬವ್ವಳನ್ನು, ಪ್ರತಿಕಾರದ ಕಿಚ್ಚನ್ನು
ರೋಮ್ನಿ ತೋರುವನು ಶ್ರೀರಾಮಚಂದ್ರನ ಪ್ರತಿರೂಪವನು

ಒಬಾಮ ನಿಲ್ಲಿಸಿದನು ಭಾರತಕೆ ಔಟ್ ‌ಸೋರ್ಸಿಂಗನ್ನು
ಭಾರತೀಯರು ಕಳೆದುಕೊಂಡರು ಉದರ ಪೋಷಣೆಯ ಆಸರ

ಒಬಾಮ ಕತ್ತರಿಸಿದನು ಎಚ್‌ವನ್ ವೀಸಾ ಭಾರತದ ಟೆಕ್ಕಿಗಳಿಗೆ
ಶೂನ್ಯವಾಯಿತು ಭಾರತೀಯರಿಗೆ ಹಿರಣ್ಯದ ಹೊಂಗನಸು

ರಾಮ್ನಿ ವಲಸೆ ವೀಸಾಗಳ ಆಭಯ ಹಸ್ತವನು ತೋರಿದ
ಭಾರತಕೆ ಔಟ್ ‌ಸೋರ್ಸಿಂಗನ್ನು ಮರುಕಳಿಸುವೆ ನಾ ಎಂದ

ಒಬಾಮ ಭಾರತೀಯರಿಗೆ ಕರಾಳ ರಾತ್ರಿಯ ಕತ್ತಲೆ
ರಾಮ್ನಿ ಭಾರತೀಯರಿಗೆ ಬೆಳಕಿನ ಹಿರಣ್ಯದ ಅಹನ
ಕತ್ತಲೆ, ಬೆಳಕಿನ ಹಾದಿ ನಿಮ್ಮ ಮುಂದೆ ಹರಿದಿರುವುದು ಇಂದು

ಭಾರತಿಯರೇ ಎದೆ ತಟ್ಟಿ ನಿಲ್ಲಿ ಬೆಳಕನ್ನು ಅಪ್ಪಿಕೊಳ್ಳಿ
ಕರಗಿಸಿ ಈ ಕತ್ತಲೆಯ ಬದುಕನ್ನು, ನಿಲ್ಲಿಸಿ ಈ ಮೂಢನಂಬಿಕೆಯನ್ನು
ರಾಮ್ನಿಯೇ ಶ್ರೀ ರಾಮ, ರಾಮ ರಾಮ ರಾಮ ರಾಮ! [ರೋಮ್ನಿಗೆ ಜೈ ಅಂದ ನೀಲಿ ಚಿತ್ರೋದ್ಯಮ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+