ಮರಳ ಗುಡ್ಡದ ಗೆಳತಿ ಮತ್ತು ಕುಸುಮ ಬಾಲೆ

ಮರಳ ಗುಡ್ಡದ ಗೆಳತಿ..
ಮರಳ ಗುಡ್ಡವನಿಂದು ಹತ್ತು ಬಾ ಚೆಲುವೆ
ಹೆದರದಿರು ನಾ ನಿನ್ನ ಕೈ ಹಿಡಿದು ನಡೆಸುವೆ
ಶಂಕಿಸದಿರು ನೀ ನೋಡಿ ಈ ಚಲ್ಲಣ ದಿರಿಸು
ಮರೆಯದಿರು ನಾನಿಲ್ಲಿ ಹುಟ್ಟಿ ಬೆಳೆದಿಹ ಕೂಸು
ಮರಳ ಪರ್ವತವೆನ್ನ ಆಟದಂಗಣ ಆಸು
ಹತ್ತಿ ಓಡುವುದರಲಿ ನಾ ನೂರಂಕೆಯಲಿ ಪಾಸು
ನನ್ನ ಸಂಗದಲೆಂದೂ ನಿನಗಾಗದೂ ತ್ರಾಸು
ಬಾ ಗೆಳತಿ ನಿನ್ನ ನಗು ಒಡನಾಟ ಬಲು ಸೊಗಸು.
ಕುಸುಮ ಬಾಲೆ
ಮೊಗ್ಗು ಬಿರಿದಾಡುತಲಿ ಬಣ್ಣ ಚೆಲ್ಲಿರೆ ಹೂವ
ವಸಂತಾಗಮನದಲಿ ಸೂರ್ಯ ರಶ್ಮಿಯ ಕಾವ
ಸೂಸಿರಲು ಹೊಮ್ಮುತಲಿ ಮುಗುಳು ಹರ್ಷದ ಭಾವ
ಓಗೊಟ್ಟು ಓಲೈಸಿ ಸೃಷ್ಟಿ ಸಂಭ್ರಮ ಜೀವ












Click it and Unblock the Notifications