ಕಂಪನ

ಕೊನೆಯ ಕಂಪನದವರೆಗೂ ಕಾಯಬೇಕು
ಅಲ್ಲಿ ಬಳುಕಿ ನಾಚುವ ಬೆಳದಿಂಗಳಿರಬೇಕು
ಎಲ್ಲೆಲ್ಲು ಪಸರಿಸಿ ಅವಳ ಘಮಲಿರಬೇಕು
ನೆರಿಗೆ ಹಾದ ಗಾಳಿಯ ಝೇಂಕಾರವಿರಬೇಕು
ಇದ್ದೂ ಇಲ್ಲದ ತಂಗಾಳಿ ಸವರಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಅಲ್ಲಿ ಅವಳ ಮೆರವಣಿಗೆ ಇರಬೇಕು
ಗೆಜ್ಜೆಗಳ ಘಲ್ ಹುಚ್ಚೆಬ್ಬಿಸಬೇಕು
ಸೆರಗ ಕುಚ್ಚು ಹೃದಯ ಸೋಕಬೇಕು
ನವಿರು ಎಸಳ ಬೆರಳು ತಗುಲಿಬಿಡಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಬಿಸಿಲು ಕೆಂಪುಮಣ್ಣು ಹೊಗೆ ಧಗೆ ಇರಬೇಕು
ಕೊಂಡಿ ಕಳಚಿ ಧೋ ಧೋ ಮಳೆ ಸುರಿಯಬೇಕು
ಎಲ್ಲೆಲ್ಲು ಸುವಾಸನೆಯ ಧೂಳೆಬ್ಬಿಸಬೇಕು
ಸಂಭ್ರಮಿಸಿ ಕೆಂಪುಮಣ್ಣು ಆರ್ದ್ರವಾಗಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಕೊಂಡಿ ಕಳಚಿ ಧೋ ಧೋ ಮಳೆ ಸುರಿಯಬೇಕು
ಎಲ್ಲೆಲ್ಲು ಸುವಾಸನೆಯ ಧೂಳೆಬ್ಬಿಸಬೇಕು
ಸಂಭ್ರಮಿಸಿ ಕೆಂಪುಮಣ್ಣು ಆರ್ದ್ರವಾಗಬೇಕು
ಕಟ್ಟ ಕಡೆಯ ಮೆಲು ಕಂಪನವಿರಬೇಕು
ಗಂಟೆಗಳು ಅನುರಣಿಸುತ್ತಲೆ ಇರಬೇಕು
ಕೊನೆಯ ಕಂಪನದವರೆಗೂ ಕಾಯಬೇಕು











Click it and Unblock the Notifications