ಕನಸಿನಾ ಜನನಿ ಮನಸು

ಮನಸನಾವರಿಸುವೆ ಕನಸು ||ಕ ||
ಎಲ್ಲಿಂದಲೋ ಬಂದೆ
ಎಲ್ಲೆಲ್ಲಿಗೋ ಹೋದೆ
ನೀ ಮರಳಿ ಬಂದೆ
ಈ ಮನಸಲಿ ನಿಂದೆ ||ಕ ||
ನಾ ಬೇಡವೆಂದರೂ
ನೀ ಬೇಕೆಂದುನೆನುವೆ
ಬಾಳಿನಾ ಬವಣೆಯ
ಮರೆಯಲು ಮರೆಯೆ ||ಕ ||
ಮನದಲಿ ಎಲ್ಲೋ
ಇಹುದೀ ಲೋಕ
ಇತಿಮಿತಿ ಇಲ್ಲದ
ಭಾವನಾ ಲೋಕ ||ಕ ||
ಬಡವ ದೊಡ್ಡವ
ಬರೆದೆಯೇ ಶೋಕ
ಶೋಕಿಯ ಜೀವದ
ಅದ್ಭುತ ಲೋಕ ||ಕ ||
ಕನಸೆಂಬಾ ಅದ್ಭುತ
ಭೂತ ಭವಿಷ್ಯದ
ಚೇತನಾ ಸ್ವರೂಪ
ಇಲ್ಲದಿರೆ ಜಗ ವಿರೂಪ ||ಕ ||
ಈ ಜೀವಕೆ ಬೇಕೀ
ಮಮಕಾರ ಸಾರ
ಸಾಕ್ಷಾತ್ಕಾರವಾಗಲಿ
ಆತ್ಮಾನಂದದ ಸಾರ ||ಕ ||












Click it and Unblock the Notifications