ಸೈಂಟ್ ಲೂಯಿಸ್ ಹಾಡು : ನಮ್ಮೂರ ವೈಭವ

ಇಲ್ಲಿ ಬಂದವರ ಕೇಳಿ ಅವರ ಅನುಭವ
ಪ್ರತೀ ವಾರ ಸೇರುವರು ಸೈಂಟ್ ಲೂಯಿಸ್ ಸಹ ಕುಟುಂಬ
ಹೊಸ ಜನರಿಗೆ ಕನ್ನಡಿಗರ ಪರಿಚಯದಿಂದ ಆರಂಭ
ಆಮೇಲೆ ಆಗುವರು ಅಕ್ಕರೆಯ ಅಕ್ಕ, ಅಣ್ಣ, ತಂಗಿ, ತಮ್ಮ
ಅತ್ತೆ, ಮಾವ, ಚಿಕ್ಕಪ್ಪ ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ
ಬಂಧು ಬಾಂಧವರ ಬಿಟ್ಟು ದೂರ ಬಂದ ಕೊರತೆ
ಮಾಯಮಾಡುವುದು ಇಲ್ಲಿನ ಪ್ರೀತಿ ವಾತ್ಸಲ್ಯದ ಒರತೆ
ಯಾರ ಮನೆಯಲ್ಲಿ ಆದರೂ ಸಮಾರಂಭ ಉತ್ಸವ
ಸಹ ಕುಟುಂಬದ ನೆಂಟರ ಸಡಗರದ ಪ್ರೋತ್ಸಾಹ
ಎಲ್ಲರೂ ಸೇರಿ ಮಾಡುವರು ಅಡುಗೆ ತಿಂಡಿಯ ತಯಾರಿ
ಪುಳಿಯೋಗರೆ, ಲಾಡು, ಚಕ್ಕುಲಿ, ತೇಂಗೋಳು ಪೂರಿ
ಎಲ್ಲಾ ಕಸ್ಟಮೈಜ್ ಮಾಡುವರು ನೋಡಿ
ಹೇಗಿದೆ ನಮ್ಮ ಸೈಂಟ್ ಲೂಯಿಸ್ ಕಲಾವಿದರ ಮೋಡಿ
ಸೀಮಂತ, ಬಾಣಂತನ, ತೊಟ್ಟಿಲಾರತಿ, ವರ್ಷದ ಹೆಚ್ಚು
ಹದಿನಾರರ ಹುಟ್ಟಿದ ಹಬ್ಬ, ಹೈ ಸ್ಕೂಲ್ ಗ್ರಾಜುಯೇಶನ್
ಸಂಗೀತ, ನೃತ್ಯ ರಂಗಪ್ರವೇಶ
ಬೆಳ್ಳಿ ವಿವಾಹ ಮಹೋತ್ಸವ, ಷಷ್ಠಬ್ಧಿ ಪೂರ್ತಿ
ಆಪತ್ಕಾಲದಲ್ಲಿ ಆದವನೇ ನೆಂಟ, ಗಾದೆನೆನೆಕೆ ಅನುದಿನ
ಮಾಡಿ ತೋರಿಸುವರು ಈ ನಮ್ಮ ಸುಜನ
ಇಲ್ಲಿ ಸುಂದರ ಆತ್ಮಗಳ ಮಿಲನ
ಇದಕಾಗಿ ದೇವರಿಗೆ ನಮ್ಮ ನಮನ
ರಜತ ಮಹೋತ್ಸವದ ಶುಭಾಶಯ ಸಂಗಮ
ವಿಕೃತಿ ನಾಮ ಸಂವತ್ಸರ ತರುತ್ತಿರುವ ಸಂಭ್ರಮ












Click it and Unblock the Notifications