ಸಂಗಾತಿ

ಬಿಸಿಲಾಗಲಿ, ಮಳೆಯಾಗಲಿ
ಗಾಳಿ,ಮಂಜು ನನಗೆ ಸೋಕದು
ನನಗೆ ಸಮಯದರಿವಿಲ್ಲ,
ಯಾವ ದಿನವಾಗಲಿ,ವರ್ಷವಾಗಲಿ,
ನನಗದರ ಪರಿವೆಯೇ ಇಲ್ಲ
ನೀ ನಡೆದರೆ,ನಾ ನಡೆವೆ,ನೀ ಕುಳಿತರೆ ನಾ ಕೂಡುವೆ
ನೀ ಓಡಿದರೆ ಅಗೋ ನಾನಲ್ಲಿರುವೆ,
ಮುಂಜಾನೆ ಹಿಗ್ಗುವೆ, ಮಧ್ಯಾಹ್ನ ಕುಗ್ಗುವೆ, ಇಲ್ಲವೇ ಮಾಯವಾಗುವೆ!
ನಿನ್ನೊಡನೆ ನಾನಿರುವೆ,ನಾನಾರು ಬಲ್ಲೆಯಾ?
ಮೌನವೇ ನನ್ನ ಭಾಷೆ,ಮೌನವೇ ನನ್ನ ಜೀವನ
ನನಗಾವ ಅಂಜಿಕೆಇಲ್ಲ, ನನಗೆ ದುಃಖವೇಸಲ್ಲ
ನನಗಾವ ಅನಿಸಿಕೆ ಇಲ್ಲ
ನಿನ್ನಾಸರಿಸುವುದೇ ನನ್ನ ಕಸುಬು
ನಿನ್ನಾಸರಿಸುವ ಹಠವೇ ನನ್ನದು
ನಾನರೆಂದು ಬಲ್ಲೆಯಾ?
ನೀನಾಡುವಮಾತಿಗೆ ಮರುಮಾತಡಲಾರೆ
ನೀನಕ್ಕರೆ ನಿನ್ನೊಡನಿರುವೆ
ನೀಅತ್ತರೆ ನಿನ್ನೊಡನಿರುವೆ
ನೀಹಾಡಿದರೆ ನಾನಲ್ಲಿರುವೆ
ನಿನ್ನ ನಿರ್ಲಕ್ಷಿಸಲಾರೆ, ಅಪೇಕ್ಷಿಸಲಾರೆ
ನಿನ್ನನಾ ಬಿಡಲಾರೆ, ನಾನಿನ್ನ ಸಂಗಾತಿ
ನನ್ನೀ ನಿಷ್ಟೆಗೆ ಸಂಭಾವನೆ ಕೇಳಲಾರೆ
ನೀನ್ನನ್ನ ಗೆಲ್ಲಲಾರೆ, ನನ್ನನೀ ಸೋಕಲಾರೆ
ನಿನ್ನಜೀವನವೇ ನನ್ನ ಜೀವನ
ನಿನ್ನುಸಿರೇ ನನ್ನುಸಿರು
ನೀನಿಲ್ಲದೆ ನಾನಿಲ್ಲ
ನಾನರೆಂದು ತಿಳಿಯಲಾರೆಯಾ?












Click it and Unblock the Notifications