ಬೇಸಿಗೆ ರಜೆಯೂ... ಬಸ್ಸೂ...

ksrtc bus
ಪಾಟಿ ಚೀಲದ ಒಳಗೆ ಪುಟಿವ ಪುಸ್ತಕ ಪಟ್ಟಿ
ಪೆನ್ನು, ಪೆನ್ಸಿಲ್ಲು, ಕಂಪಾಸ್ ಬಾಕ್ಸು
ಎಲ್ಲ ಕಟ್ಟಿ ಅಟ್ಟದ ಮೇಲಟ್ಟಿ
ಹತ್ತಿ ಕೂತಿದ್ದೆ ಕೆಂಪು ಬಸ್ಸು

ಧೂಳು, ಹಳೆ ಕಬ್ಬಿಣ ಕಮಟು, ಸಿಗರೇಟಿನ ಘಾಟು
"ಬ್ಯಾಗ್ ಹುಷಾರು, ಮಲಗಡ" ಅಮ್ಮನ ತಾಕೀತು
ರೈಟ್ ರೈಟ್ ಸದ್ದಿಗೆ ವಾಲುತ್ತ, ತೇಲುತ್ತಾ
ತಿರುವಿನಲ್ಲಿ ಬೀಳದೆ ಸಾವರಿಸಿಕೊಳ್ಳುತ್ತ
ರೊಂಯೂನ್ಯೂ ಎಂದು ನರಳುತ್ತ ಸಾಗಿತ್ತು ಬಸುರಿ ಬಸ್ಸು

ಇನ್ನೇನು ಸುರು ದೇವಿಮನೆ ಘಟ್ಟ
ಬುಡದಲ್ಲೊಂದು ಘಟ್ಟದಮ್ಮನ ಗುಡಿ
ಸುತ್ತಲೂ ಕರಿಕಾಡು, ಕಮರಿ, ಬೆಟ್ಟ
ಪಕ್ಕದಲ್ಲೆರಡು ಹಣ್ಣು ಕಾಯಿ ಗೂಡಂಗಡಿ

ಹುನ್ಡಿಗೊನ್ದು ನಾಕಾಣೆ ತುರುಕಿ
ಎಂಟಾಣೆಗೆ ಸುಲಿದ ಬಾಳೆಹಣ್ಣು
ಹಾವ ಹಾದಿಯ ಗುಂಟ ಕಲಕಿ ಕಲಕಿ
ಸೇರಿತ್ತು ಹಿಂದಿನ ಸೀಟು ಕಿಟಕಿ
ಬರುವಷ್ಟರಲ್ಲಿ ರಾಗಿಹೊಸಳ್ಲಿ, ಅಮ್ಮೀನಳ್ಳಿ
ಜಠರ ವಠಾರ ಪೂರ್ತಿ ಖಾಲಿ

ಇನ್ನೇನು ಬಂತು ಶಿರಸಿ ಬಸ್ ಸ್ಟ್ಯಾಂಡು
ಊರ ಗಟಾರ ಎಲ್ಲ ಬಂದು ಸೇರಿದೆ ಹರಿದು
ಜನರಿಗಿದರ ಮೇಲೆ ಅಪಾರ ಮಮಕಾರ
ನೆಲ ಗೋಡೆಗಳ ಮೇಲೆ ಪಿಚಕಾರಿ ಪ್ರೇಮ

ಕ್ರೊಂಯ್ಯ್ ಜ್ಹುಸ್ಸ್ , ಉಸ್ಸಪ್ಪ ಎನ್ನುತ್ತ ನಿಂತ ಸವಾರಿ
ಸಾಗಿತ್ತು ಒದರಾಟ ಬೇಗಬೇಗ ಇಳೀರಿ
ಡೇಪೊಕ್ಕೆ ಹೊಡೀಬೇಕು, ಗಲೀಜ್ ತೊಳೆಯೋ ಕರ್ಮ
ಬ್ಯಾಗೆಳೆದು, ರಿಕ್ಷ ಹುಡುಕಿ ಓಡಿದ್ದೆ ಹೊರ ಹಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+