ಕೂಗಿ ಕರೆಯಲೇಕೆ?

ಕೂಗಿ ಕರೆಯಲೇಕೆ?
ಕಾದಿತ್ತೆ ಕರೆಗೆ ದುಂಬಿ,
ಬಂದಿಲ್ಲವೆ ಕೊರಳ ಕೊಂಕ ನಂಬಿ?
ಸವರಲು ತಂಗಾಳಿ ಸುಮ್ಮನೆ,
ಅರಳಿಲ್ಲವೆ ನಸು ನಾಚುತ ತಂತಾನೆ?
ಕೂಗಿ ಕರೆಯಲೇಕೆ?
ಕಾದಿತ್ತೆ ತಾಳಕ್ಕೆ ಗೆಜ್ಜೆ,
ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?
ಹೂಡಿ ಇಟ್ಟಿದ್ದಳೆ ಹಂಚಿಕೆ,
ಸುತ್ತಿ ಬಳಸಿಲ್ಲವೆ ಪ್ರೇಮಿಕೆ?
ಕೂಗಿ ಕರೆಯಲೇಕೆ?
ಕಾದಿತ್ತೆ ನೀ ಬರಲೆಂದು,
ಹನಿಸಿಲ್ಲವೆ ಹೃದಯ ನವಿರ ಬಿಂದು?
ಸುಟ್ಟಿತ್ತೆ ಕಣ್ಣೀರ ಕಾವು,
ನೋವ ಹೊತ್ತಿರಲಿಲ್ಲವೆ ಮನವು?
ಕೂಗಿ ಕರೆಯಲೇಕೆ?
ನಸುನಗೆಯೊಂದೆ ಸಾಕೆ.
(ಲೇಖಕರ ಪುಟ್ಟ ಪರಿಚಯ : ಅಮೆರಿಕದಲ್ಲಿ ಆಟೋಜೋನ್ ಕಂಪನಿಯಲ್ಲಿ ಟೆಕ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಉಡುಪಿ ಮೂಲತಃ ಉಡುಪಿಯವರು. ಉಡುಪಿಯಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದು, ಮಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಕೆಲಸದ ನಿಮಿತ್ತ ಬೆಂಗಳೂರು, ಹೈದರಾಬಾದ್ ನಗರಗಳಿಗೆ ವಲಸೆಹೋಗಿ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ.)
ದಿನೇಶ್ ಕವನಗುಚ್ಛ











Click it and Unblock the Notifications