ಕನ್ನಡಿಯೊಳಗಿನ ಗಂಟು
ಇದೋ ಹಿಂದಿರುಗಿಬಿಡುವೆನು
ಇನ್ನೇನು ಪದವಿ ಸಿಕ್ಕೊಡನೆ
ಊರಿಗೆ ಮರಳಿ ಬಿಡುವೆನು
ಎನ್ನುತ್ತಿದ್ದವ ನಾನು
ಗಂಟು ಮಾಡದೇ ಮರಳಿದರೆ
ಜನ ಏನೆಂದುಕೊಂಡಾರು
ಎಂದು ಹೆದರಿ
ವರ್ಷ ಒಂದೆರಡು
ಮಾತ್ರ ಎಂದು ಭ್ರಮಿಸಿ
ಉಳಿದುಬಿಟ್ಟವ ನಾನು
ನನಗರಿವಿಲ್ಲದೆಯೇ ನೆಲಕಚ್ಚಿ
ಬೇರುಬಿಟ್ಟವನೂ ನಾನು
ಸಸಿಯ ಕೀಳಲುಬಹುದು
ಮರವ ಕೀಳಲು ಬಹುದೇ
ಕನ್ನಡಿಯೊಳಗಿನ ಗಂಟ ಹೊತ್ತು
ಹಿಂದಿರುಗುವುದೆಂದೋ
ಶಿವ-ನಟೇಶನೆ












Click it and Unblock the Notifications