ನಿಯಾಮಕ

ಇಲ್ಲ!, ನಿಯಾಮಕನಿದ್ದಾನೆ!!
ಶ್ರದ್ಧೆಯ ಬೆಳಕಿನಲ್ಲಿ
ಹೊಳೆವ ಅಪ್ಪ ತೋರಿಸಿದ ದೇವರು!

ಏನೇನೋ ಆದರೂ ನಂಬುವ ಹಂಬಲ
ಪೂರ್ವದ ಸೂರ್ಯನ ಕಂಡ ಹಾಗೆ
ಹೊಸ ಭರವಸೆಯ ಬಗೆ
ಪಶ್ಚಿಮದವನಿಯಲಿ ಅವನಿಗಿಲ್ಲ ಜಾಗ, ಅಲ್ಲಿ
ಮಗ್ಗುಲು ಬದಲಿಸಿದರೆ ಹೊಸ ಭೋಗ

ನನ್ನ ಬೇರಿರುವುದು ಭೂಗರ್ಭದಲಿ
ಹೊರಗೆ ಬಿರುಗಾಳಿಯ ಹೋರು
ಜೋರಾದಾಗ ಅದಮ್ಯ ಕಸಿವಿಸಿ!
‘‘ಇದ್ದಾನೋ!? ಇಲ್ಲವೋ!!?
ಇರಬಹುದೇ! ಇಲ್ಲದಿರಬಹುದೇ!!!?’’

ನಂಬುಗೆಯ ಬುಡ ಜಡವಲ್ಲ
ನಂಬಿ ಕೆಟ್ಟವರಿಲ್ಲ, ನಂಬಿ ಕೆಟ್ಟವರೀಗಿಲ್ಲ!!

ಯಾದವನಿಳಿದ ನಾಡಿನಲ್ಲಿ ‘ ಸಾಧು ಯಾದವ ’ನೇಕೆ
ಬುದ್ಧ ಕುಳಿತೆದ್ದ ತರು ಕೆಳಗೆ ಲಾಲುಗೇನು ಸಿದ್ಧಿ!
ದೀಪದ ಬುಡದಲ್ಲೇ ಕತ್ತಲೇಕೆ!
ಪ್ರಶ್ನೆ ನಿಮಗಲ್ಲ, ಅವನಿಗೆ!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+