ಜೀವನ ರಾಗ
- ವಸಂತ ಕುಲಕರ್ಣಿ, ಸಿಂಗಪುರ
ಯಾವುದದೋ ರಾಗ ಅನುರಾಗಾ
ಅದಾವ ವೀಣೆಯೋ ಅದಾವ ಮುರಲಿಯೋ
ಹೃದಯವ ತಲುಪಿದೆ ನಾದ ನಿನಾದ
ಬೆಳಗು ಮುಂಜಾವಿನ ದಿವ್ಯ ನೀರವದಿ
ಜುಳು ಜುಳು ಹರಿಯುವ ಜಲದ ಲಹರಿಯೋ
ಅದಾವ ಧ್ವನಿಯದು ಮಂಜುಳ ವಾಣಿಯೋ
ಚಿಲಿಪಿಲಿ ಹಕ್ಕಿಗಳ ಕೋಮಲ ಧ್ವನಿಯೋ
ಗಿಡದೆಲೆ ತೀಡುವ ಮಂದಾನಿಲವೋ
ಮಧುವನರಸುವ ಭ್ರಮರ ಝೇಂಕಾರವೋ
ತಿಂಗಳ ಬೆಳಕಲಿ ಸಂತಸ ಧಾಟಿಲಿ
ಉಚ್ಚರಗೊಂಡ ಕವಿಯ ವಾಣಿಯಾ
ಶುದ್ಧ ಭಕುತಿಯಾ ಪೂಜೆಯ ಸ್ತುತಿಯಾ
ಲಯ ಸ್ವರ ಕೂಡಿದ ಪ್ರಭು ವಂದನೆಯೋ
ರಹಸ್ಯಮಯವಾದ ಮಂತ್ರದ ಛವಿಯೋ
ಜೀವನೋತ್ಸಾಹದ ಅನಂತವಾಹಿನಿಯೋ












Click it and Unblock the Notifications