ಜೀವನ
- ಸತ್ಯನಾರಾಯಣ ಗುಡಿಬಂಡೆ, ಮೇರಿಲ್ಯಾಂಡ್, ಅಮೆರಿಕ.
ಅಂದಿನಾ ದಿನ ಅಂದದಾ ದಿನಹಿಂದಿನಾ ದಿನ ಚೆಂದದಾ ದಿನ
ಇಂದಿನಾ ದಿನ ವಂದನಾ ದಿನ
ಮುಂದಿನಾ ದಿನ ಮುಕುಂದನಾ ದಿನ ।।
ಅಂದಿನಾ ದಿನ ಆನಂದದಾ ದಿನ
ಹಿಂದಿನಾ ದಿನ ಅಂದಚೆಂದದಾ ದಿನ
ಇಂದಿನಾ ದಿನ ಬೃಂದಾವಂದನಾ ದಿನ
ಮುಂದಿನಾ ದಿನ ಗೋವಿಂದನಾ ದಿನ ।।
ಅಂದಿನಾ ದಿನ ಪರಮಾನಂದದಾ ದಿನ
ಹಿಂದಿನಾ ದಿನ ಪ್ರೇಮಾನಂದದಾ ದಿನ
ಇಂದಿನಾ ದಿನ ಅಭಿವಂದನಾ ದಿನ
ಮುಂದಿನಾ ದಿನ ಪಾಂಡುರಂಗನಾ ದಿನ ।।
ಅಂದಿನಾ ದಿನ ನಿತ್ಯಾನಂದದಾ ದಿನ
ಹಿಂದಿನಾ ದಿನ ಬಂಧನಾ ದಿನ
ಇಂದಿನಾ ದಿನ ಗುರುಪಾದ ಸೇವನಾ ದಿನ
ಮುಂದಿನಾ ದಿನ ಸತ್ಯಾನಂದದಾ ದಿನ ।।












Click it and Unblock the Notifications