ಹಕ್ಕಿ


ಮನೆಯು ಕಳೆಯಿತು, ಮನವನರಸುವ ಹಕ್ಕಿ ಆಕಾಶದಲ್ಲಿ ಅಲೆಮಾರಿಯಾಯಿತು!!

Ramachandra hegde, Singaporeಲವಲವಿಕೆಯ ಈ ಹಕ್ಕಿ
ಎಲ್ಲಿಂದಲೋ ಹಾರಿ ಬಂದು
ಕದ ತೆರೆದಿದ್ದ ಗೂಡ ಕಂಡು
ತನಗಿದುವೆ ತಾಣವೆಂದು
ಮೆಲ್ಲನೆ ಗೂಡ ಸೇರಿತು;
ತನ್ನನೇ ತಾನು ಮರೆಯಿತು.
ತನ್ನೊಡಲ ಸೇರಿದ ಹಕ್ಕಿಯ
ಇರವು ಗೂಡಿಗೂ ತಿಳಿಯದಾಯ್ತು!

ಮರೆವಿನಲ್ಲಿಯೇ ಕೆಲ ಕಾಲ ಕಳೆಯಿತು
ನಿಧಾನವಾಗಿ ಗೂಡು ಶಿಥಿಲವಾಯಿತು
ಮಲಿನವಾಗಿ ಸವೆದಿರುವ ಮನೆಯಿದು
ತೊರೆಯಲು ಹಕ್ಕಿಗೆ ಪಕ್ವವೆನಿಸಿತು.

ಹಕ್ಕಿಯ ಮರವೆ ಕಳೆಯಿತು
ನಿಶ್ಶಬ್ದವಾಗಿ ಗೂಡ ತೊರೆಯಿತು.
ಗೂಡು ಆ ಕ್ಷಣದಲೆ ನಿರ್ಜೀವವಾಯಿತು
ಪಂಚಭೂತಗಳಲ್ಲಿ ಹಂಚಿ ಹೋಯಿತು.

ಹಕ್ಕಿ ಹೊಸಗೂಡೊಂದನು ಅರಸುತಿದೆ
ಅರೆಮರವೆಯಲ್ಲೀಗ ಅಂತರಿಕ್ಷದಲ್ಲಿದೆ.
ಅದೀಗ ಜನನ ಮರಣಗಳ ನಡುವಿನಲ್ಲಿದೆ
ವಿಸ್ಮಯದ ತ್ರಿಶಂಕು ಸ್ವರ್ಗದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+