‘ನನ್ನವಳ’ ಅಂತರಾಳ
ನೀ ನನ್ನವಳೆಂದು ನಾನಂದುಕೊಂಡರೆ ಸಾಕಾಗುವುದೇ
ನೀ ನನ್ನವಳೆಂದು ಸವಿಯಾಗಿ ಹೇಳಿದರೆ ಸಾಕಾಗುವುದೇ
ನನ್ನವಳೆಂಬುದು ನಿತ್ಯ ಜೊತೆಗಿರುವುದೇ
ಜೊತೆ ಕನಸು ಕಾಣುವುದೇ
ಮಾತಲ್ಲಿ ಮಾತಾಡುವುದೇ
ಏನದು ‘ನನ್ನವಳ’ ಅಂತರಾಳ
ಎದೆಯ ಗೂಡಲ್ಲಿ ಬಚ್ಚಿಡುವ ಆಸೆ ಅರಿಯುವುದೇ
ಹೃದಯಾಳದಲಿ ಮುಚ್ಚಿಟ್ಟ ಭಾವನೆಗಳ ಮಿಡಿವುದೇ
ನನ್ನವಳೆಂಬುದು ನರನಾಡಿ ಬೆರೆಯುವುದೇ
ಅನಿಸಿಕೆಗಳಿಗೆ ಸ್ಪಂದಿಸುವುದೇ
ಮನದ ಮೌನ ಕೇಳುವುದೇ
ಏನದು ‘ನನ್ನವಳ’ ಅಂತರಾಳ
ಗಾಳಿಗೂ ಹಕ್ಕಿಗಿರುವ ಬಾಂಧವ್ಯ, ಹೊತ್ತು ಹಾರಿಸುದೇ
ನೀರಿಗೂ ಮೀನಿಗಿರುವ ನಂಟು, ಸರಾಗವಾಗಿ ಈಜಿಸುದೇ
ನನ್ನವಳೆಂಬುದು ಅಗಲಿರಲಾದುದೇ
ನಿರರ್ಗಳ ದಾರಿಯಾಗುವುದೇ
ಬಹಿರಂಗ ಅಂತರಂಗಿಸುವುದೇ
ಏನದು ‘ನನ್ನವಳ’ ಅಂತರಾಳ
ವಚನ ಗಮನ ತಪನಗಳ ಸಮನಾಗಿರಿಸುವುದೇ
ತೃಪ್ತಿ ಆಸಕ್ತಿ ಸ್ಫೂರ್ತಿಗಳ ಸಮ್ಮಿಶ್ರವಾಗಿರುವುದೇ
ನನ್ನವಳೆಂಬುದು ಸಮಸ್ತ ಏಕವಾಗುವುದೇ
ನನ್ನವಳು ನನ್ನಂತೆಯಾಗಿರುವುದೇ
ನನ್ನೊಳಗೆಯೇ ನಾನಾಗಿರುವುದೇ
ಏನದು ‘ನನ್ನವಳ’ ಅಂತರಾಳ












Click it and Unblock the Notifications