ಶ್ರೀನಾಥ್ ಭಲ್ಲೆ, ರಿಚ್‌ಮಂಡ್
ಆಧುನಿಕತೆ ಮತ್ತು ಅಸಹಾಯಕತೆ!

- ಶ್ರೀನಾಥ್ ಭಲ್ಲೆ, ರಿಚ್‌ಮಂಡ್
[email protected]
ಕಿವಿನಾಗೆ ಕಡ್ಡೀ ಚುಚ್ಚಿಕೊಂಡು
ತನ್ನಷ್ಟಕ್ಕೇ ತಾನು ಮಾತಾಡ್ಕೊಂಡು
ತನ್ ಪಾಡಿಗೆ ತಾನು ಹಾಡಿಕೊಂಡು
ಕಾರ್ನೋ, ಬೈಕ್ನೋ ಓಡಿಸ್ಕೊಂಡು
ಪ್ಯಾದೆ ಕೈಲಿ ಸಿಕ್ಕೊಂಡ್ನಲ್ಲಪ್ಪೋ !
*
ಪ್ರೋಗ್ರಾಮರ್
ದಿವಿನಾಗಿ ಬಟ್ಟೆ ಹಾಕಿಕೊಂಡು
ಕರೀ ತಟ್ಟೆ ಬಿಚ್ಚಿಟ್ ಕೊಂಡು
ಮೇಲಿನ್ ತಟ್ಟೇಲ್ ನೋಡಿಕೊಂಡು
ಕೆಳಗಿನ್ ತಟ್ಟೇನ್ ಕುಟ್ಟಿಕೊಂಡು
ಯೋಚ್ನೆ ಮಾಡ್ತಾ ಕೂತ್ಕೊಂಡ್ನಲ್ಲಪ್ಪೋ !!
*
ಸಾಫ್ಟ್ ವೇರ್ ಇಂಜಿನಿಯರ್
ಸೊಂಟಕ್ ಡಬ್ಬಿ ತಗಲಿಸಿಕೊಂಡು
ಕುತ್ತಿಗೆಗ್ ಪಟ್ಟಿ ಕಟ್ಟಿಕೊಂಡು
ಭುಜಕ್ ಜೋಳಿಗೆ ನೇತಾಕ್‌ಕೊಂಡು
ಕಣ್ಣಿಗ್ ಕಂಡಿ ಹಾಕಿಕೊಂಡು
ಏಟೊಂದ್ ಸಂಪಾದ್ನೆ ಮಾಡ್ತಾನಲ್ಲಪ್ಪೊ!!!











Click it and Unblock the Notifications