ಮೀರಾ. ಪಿ.ಆರ್‌., ಬೋಸ್ಟನ್‌

ಲಾಲಿಹಾಡು

Meera Rajgopal
ಮುತ್ತಿನಾರತಿ ತಂದು ಎತ್ತಿ ಬೆಳಗೀರೇ...
ಮುದ್ದು ಮಾತಾಡೊ ನನ್ನರಗಿಳಿಗೆ । ಕಂದಂಗೆ
ಮುತ್ತಿನಂಥಾ ನನ್ನ ಮಗುವೀಗೆ...

ಜೋ..ಜೊ... ಜೋ...ಜೊ...

ಮಣ್ಣೀನ ಗಂಧಾಕೆ ಸೋಲುವಾ ಮನಸಿರಲಿ
ಹಕ್ಕಿಯಂತೆ ಹಾರೊ ಕನಸಿರಲಿ । ಕಣ್ತುಂಬ
ನಕ್ಷತ್ರದಾ ಬೆಳಕು ತುಂಬಿರಲೀ...

ಜೋ...ಜೊ...ಜೋ...ಜೊ...

ಉರಿಯುವಾ ನೇಸರ ತಣ್ಣಾನೆ ಚಂದಿರ
ಹಾಡು ಹಕ್ಕಿಯು ಹಸಿರು ಇರುವಂಥ । ಈ ನೆಲವು
ನಿನ್ನ ನಗುವಿಂದಲೆ ಚೆಲುವಾಯಿತು...

ಜೋ..ಜೊ... ಜೋ...ಜೊ...

ಮುತ್ತಿನಾ ಮಣಿ ನೀನು ಮುದ್ದಿನಾ ಗಿಣಿ ನೀನು
ಹೊನ್ನಿನಾ ಗಣಿ ನೀನು ನನ್ನೆದೆಗೆ । ಕಂದಯ್ಯ
ಬಣ್ಣಾದ ರಂಗೋಲಿ ಅಂಗಳಕೇ...

ಜೋ..ಜೊ... ಜೋ...ಜೊ...



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+