ತುಂಬಾ
ಸುಂದರ
ಈ Nature
ಅದಾಗಿದೆ
ಈಗ ನನ್ನ
ಕ್ಯಾಮರದಲ್ಲಿ Capture!
ಕಾಲ
ಚಳಿಗಾಲವದು ಬೆಚ್ಚನೆಯ ಉಣ್ಣೆಯ
ಬಟ್ಟೆಯ ಹೊದ್ದಿಹ ಜನೆರೆಲ್ಲರು
ನಿಸರ್ಗವೆಲ್ಲ ಬಿಳಿ ಸಿರೆಯುಟ್ಟ ನೀರೆಯಂತೆ
ಮರ ಗಿಡಗಳೆಲ್ಲ ತರಗೆಲೆಗಳೆಸೆದು
ನಿಂತಿವೆ ಬರೀ ಬೆತ್ತಲೆ!
ಬೇಸಿಗೆಯ ಆರಂಭವದು
ಮರ ಗಿಡಗಳಿಗೆಲ್ಲ ಮರುಜೀವ
ನಿಸರ್ಗವೆಲ್ಲ ಹಸಿರು ಸೀರೆಯುಟ್ಟ
ನೀರೆಯಂತೆ
ಬಿಸಿಲು ಸ್ನಾನಕ್ಕಾಗಿ ಜನರೆಲ್ಲ
ಈಗ ಅರೆ ಬೆತ್ತಲೆ !